IPL 2022: RCB ತಂಡಕ್ಕೆ ಇವರು ನಾಯಕರಾಗಲಿದ್ದಾರೆ ಎಂದ ಮಾಜಿ ಕ್ರಿಕೆಟಿಗ
IPL 2022 Rcb: ಈ ಪಟ್ಟಿಯಲ್ಲಿ ಆರ್ಸಿಬಿ ಹೆಸರು ಕೂಡ ಮುಂಚೂಣಿಯಲ್ಲಿದೆ. ಏಕೆಂದರೆ ತಂಡದಿಂದ ಆಪತ್ಭಾಂಧವ ಎಬಿ ಡಿವಿಲಿಯರ್ಸ್ ಹೊರನಡೆದಿದ್ದು, ಹೀಗಾಗಿ ಅವರ ಬದಲಿ ಆಟಗಾರನ ಅವಶ್ಯಕತೆ ಆರ್ಸಿಬಿಗಿದೆ.
Updated on: Dec 07, 2021 | 8:39 PM

ಇಂಡಿಯನ್ ಪ್ರೀಮಿಯರ್ ಲೀಗ್ ರಿಟೈನ್ ಪ್ರಕ್ರಿಯೆ ಬೆನ್ನಲ್ಲೇ ಇದೀಗ ಹಳೆಯ ತಂಡಗಳು ಮೆಗಾ ಹರಾಜಿಗಾಗಿ ಸಿದ್ದತೆಗಳನ್ನು ಶುರು ಮಾಡಿದೆ. ಅದರಲ್ಲೂ ಈ ಬಾರಿ ಬಹುತೇಕ ತಂಡಗಳು ಸ್ಟಾರ್ ಆಟಗಾರರ ಜೊತೆಗೆ ನಾಯಕನನ್ನು ಕೂಡ ಆಯ್ಕೆ ಮಾಡಬೇಕಿದೆ.

ಈ ಪಟ್ಟಿಯಲ್ಲಿ ಆರ್ಸಿಬಿ ಹೆಸರು ಕೂಡ ಮುಂಚೂಣಿಯಲ್ಲಿದೆ. ಏಕೆಂದರೆ ತಂಡದಿಂದ ಆಪತ್ಭಾಂಧವ ಎಬಿ ಡಿವಿಲಿಯರ್ಸ್ ಹೊರನಡೆದಿದ್ದು, ಹೀಗಾಗಿ ಅವರ ಬದಲಿ ಆಟಗಾರನ ಅವಶ್ಯಕತೆ ಆರ್ಸಿಬಿಗಿದೆ. ಜೊತೆಗೆ ಹೊಸ ನಾಯಕನನ್ನು ಕೂಡ ಆರ್ಸಿಬಿ ಆಯ್ಕೆ ಮಾಡಬೇಕಿದೆ.

ಹೀಗಾಗಿ ಆರ್ಸಿಬಿ ಯಾರನ್ನು ಆಯ್ಕೆ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಆದರೆ ಆರ್ಸಿಬಿ ತಂಡವು ನಾಯಕನನ್ನಾಗಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಅನ್ನು ಆಯ್ಕೆ ಮಾಡಲಿದೆ ಎಂದಿದ್ದಾರೆ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ.

ಚೋಪ್ರಾ ಅವರ ಪ್ರಕಾರ, ಆರ್ಸಿಬಿ ವೆಸ್ಟ್ ಇಂಡೀಸ್ ತಂಡದ ಜೇಸನ್ ಹೋಲ್ಡರ್ ಅವರನ್ನು ಆಯ್ಕೆ ಮಾಡಲಿದೆ. ಅಲ್ಲದೆ ರಾಷ್ಟ್ರೀಯ ತಂಡವನ್ನು ಮುನ್ನಡೆಸಿರುವ ಅವರನ್ನೇ ತಂಡದ ನಾಯಕನನ್ನಾಗಿ ಮಾಡಲಿದೆ ಎಂದಿದ್ದಾರೆ.

ಏಕೆಂದರೆ ಜೇಸನ್ ಅತ್ಯುತ್ತಮ ಆಲ್ರೌಂಡರ್. ಈ ಹಿಂದೆ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿದ್ದರು. ಅಷ್ಟೇ ಅಲ್ಲದೆ ಕಳೆದ ಎರಡು ಸೀಸನ್ಗಳಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ ಆರ್ಸಿಬಿ ತಂಡವು ವೆಸ್ಟ್ ಇಂಡೀಸ್ ಆಲ್ರೌಂಡರ್ ಅನ್ನು ಆಯ್ಕೆ ಮಾಡಿ ಕ್ಯಾಪ್ಟನ್ ಮಾಡಲಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.



















