‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ಗೆ ಮೆಚ್ಚುಗೆ; ಹೇಗಿದೆ ಟಾಮ್ ಹಾಲೆಂಡ್ ಚಿತ್ರ?

Spider-Man: No Way Home Twitter Review: ಸ್ಪೈಡರ್ ಮ್ಯಾನ್ ನೋ ವೇ ಹೋಮ್ ನನ್ನ ನೆಚ್ಚಿನ ಚಲನಚಿತ್ರ. ಟಾಮ್ ಹಾಲೆಂಡ್ ನೀವು ಎಂದೆಂದಿಗೂ ನನ್ನ ಸ್ಪೈಡರ್ ಮ್ಯಾನ್ ಆಗಿರುತ್ತೀರಿ ಎಂದು ಅಭಿಮಾನಿ ಬರೆದುಕೊಂಡಿದ್ದಾನೆ.

‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ಗೆ ಮೆಚ್ಚುಗೆ; ಹೇಗಿದೆ ಟಾಮ್ ಹಾಲೆಂಡ್ ಚಿತ್ರ?
ಸ್ಪೈಡರ್​ ಮ್ಯಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 16, 2021 | 3:15 PM

‘ಸ್ಪೈಡರ್​ ಮ್ಯಾನ್​’ (Spider Man) ಸರಣಿಯ ಹೊಸ ಸಿನಿಮಾ ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ (Spider-Man: No Way Home) ಇಂದು (ಡಿಸೆಂಬರ್​ 16) ಬಿಡುಗಡೆ ಆಗಿದೆ. ಅನೇಕ ಕಾರಣಗಳಿಗಾಗಿ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿತ್ತು. ಅದನ್ನು ಈ ಸಿನಿಮಾ ಪೂರೈಸಿದೆ ಎಂದು ಸಿನಿಮಾ ನೋಡಿದವರು ಟ್ವಿಟರ್​ನಲ್ಲಿ ಹೇಳುತ್ತಿದ್ದಾರೆ. ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಚಿತ್ರ ಈ ಸರಣಿಯ ಫೇವರಿಟ್​ ಸಿನಿಮಾ ಎಂದು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ.

‘ಸ್ಪೈಡರ್ ಮ್ಯಾನ್: ಫಾರ್ ಫ್ರಮ್ ಹೋಮ್’ 2019ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರ ಎಲ್ಲಿ ಕೊನೆಯಾಗಿತ್ತೋ ಆ ಸ್ಥಳದಿಂದ ಹೊಸ ಸರಣಿ ಪ್ರಾರಂಭವಾಗುತ್ತದೆ. ‘ಸ್ಪೈಡರ್ ಮ್ಯಾನ್ ನೋ ವೇ ಹೋಮ್ ನನ್ನ ನೆಚ್ಚಿನ ಚಲನಚಿತ್ರ. ಟಾಮ್ ಹಾಲೆಂಡ್ ನೀವು ಎಂದೆಂದಿಗೂ ನನ್ನ ಸ್ಪೈಡರ್ ಮ್ಯಾನ್ ಆಗಿರುತ್ತೀರಿ’ ಎಂದು ಅಭಿಮಾನಿಯೋರ್ವ ಬರೆದುಕೊಂಡಿದ್ದಾನೆ. ಕೆಲವರು ‘ಈ ವರ್ಷದ ಬೆಸ್ಟ್​ ಸಿನಿಮಾಗಳಲ್ಲಿ ಇದು ಒಂದು’ ಎಂದಿದ್ದಾರೆ.

ಟಾಮ್ ಹಾಲೆಂಡ್ ನಟಿಸಿರುವ ಈ ಚಿತ್ರದ ಟ್ರೇಲರ್ ಹವಾ ಸೃಷ್ಟಿ ಮಾಡಿತ್ತು. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿ.17ರಂದು ‘ಸ್ಪೈಡರ್ ಮ್ಯಾನ್: ನೋ ವೇ ಹೋಮ್’ ಚಿತ್ರ ಬಿಡುಗಡೆ ಆಗುತ್ತಿದೆ. ವಿಶೇಷ ಎಂದರೆ ಭಾರತದಲ್ಲಿ ಒಂದು ದಿನ ಮೊದಲು ಅಂದರೆ ಇಂದು (ಡಿಸೆಂಬರ್ 16ರಂದು) ರಿಲೀಸ್ ಆಗಿದೆ. ಈಗ ಚಿತ್ರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್ ಉಡೀಸ್ನಲ್ಲಿ ಒಳ್ಳೆಯ ಕಲೆಕ್ಷನ್ ಆಗುವ ಸಾಧ್ಯತೆ ಇದೆ.

ಡಿಸೆಂಬರ್ 17ರಂದು ‘ಪುಷ್ಪ’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೂ ದೊಡ್ಡ ಹೈಪ್ ಇದೆ. ಅದಕ್ಕೂ ಮೊದಲೇ ‘ಸ್ಪೈಡರ್ ಮ್ಯಾನ್’ ರಿಲೀಸ್ ಆಗಿ ಹವಾ ಸೃಷ್ಟಿ ಮಾಡಿದೆ. 3ಡಿ ಅವತರಣಿಕೆಯಲ್ಲೂ ಸಿನಿಮಾ ರಿಲೀಸ್ ಆಗಿದ್ದು, ಭಾರೀ ಬೇಡಿಕೆ ಸೃಷ್ಟಿ ಆಗಿದೆ. ಬೆಂಗಳೂರಲ್ಲಿ ಬಹುತೇಕ ಶೋಗಳು ಮಲ್ಟಿಫ್ಲೆಕ್ಸ್ನಲ್ಲಿದ್ದು, ಹೌಸ್ಫುಲ್ ಆಗಿದೆ.

ಇದನ್ನೂ ಓದಿ: ‘ಸ್ಪೈಡರ್​ ಮ್ಯಾನ್​’ ಟ್ರೇಲರ್​: ಗುಟ್ಟು ಕಾಪಾಡಲು ಚಿತ್ರತಂಡ ಮಾಡಿದ ಎಡವಟ್ಟು ಪತ್ತೆ ಹಚ್ಚಿದ ಫ್ಯಾನ್ಸ್​

‘ಪುಷ್ಪ’ ವಿರುದ್ಧ ತೊಡೆತಟ್ಟಿದ ‘ಸ್ಪೈಡರ್​ ಮ್ಯಾನ್​’; ಮೊದಲ ದಿನ ಬೆಂಗಳೂರಿನಲ್ಲಿ 700ಕ್ಕೂ ಅಧಿಕ ಶೋ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ