‘ಪುಷ್ಪ’ ವಿರುದ್ಧ ತೊಡೆತಟ್ಟಿದ ‘ಸ್ಪೈಡರ್​ ಮ್ಯಾನ್​’; ಮೊದಲ ದಿನ ಬೆಂಗಳೂರಿನಲ್ಲಿ 700ಕ್ಕೂ ಅಧಿಕ ಶೋ

Spider-Man No Way Home: ಟಾಮ್​ ಹಾಲೆಂಡ್​ ನಟಿಸಿರುವ ಈ ಚಿತ್ರದ ಟ್ರೇಲರ್​ ಹವಾ ಸೃಷ್ಟಿ ಮಾಡಿತ್ತು. ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ವಿಶ್ವಾದ್ಯಂತ ಡಿ.17ರಂದು ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಚಿತ್ರ ಬಿಡುಗಡೆ ಆಗುತ್ತಿದೆ.

‘ಪುಷ್ಪ’ ವಿರುದ್ಧ ತೊಡೆತಟ್ಟಿದ ‘ಸ್ಪೈಡರ್​ ಮ್ಯಾನ್​’; ಮೊದಲ ದಿನ ಬೆಂಗಳೂರಿನಲ್ಲಿ 700ಕ್ಕೂ ಅಧಿಕ ಶೋ
ಸ್ಪೈಡರ್​ ಮ್ಯಾನ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 16, 2021 | 8:02 AM

ಹಾಲಿವುಡ್​ ಸಿನಿಮಾಪ್ರೇಮಿಗಳೆಲ್ಲರೂ ‘ಸ್ಪೈಡರ್​ ಮ್ಯಾನ್​’ (Spider Man) ಸರಣಿಯ ಹೊಸ ಸಿನಿಮಾ ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಬಿಡುಗಡೆಗಾಗಿ ಎಲ್ಲರೂ ಕಾಯುತ್ತಿದ್ದರು. ಆ ದಿನ ಬಂದೇ ಬಿಟ್ಟಿದೆ. ಇಂದು (ಡಿಸೆಂಬರ್​ 16) ಸಿನಿಮಾ ಭಾರತದಲ್ಲಿ ತೆರೆಗೆ ಬರುತ್ತಿದೆ. ಅನೇಕ ಕಾರಣಗಳಿಗಾಗಿ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಈವರೆಗೆ ಮೂಡಿಬಂದ ಎಲ್ಲ ‘ಸ್ಪೈಡರ್ ಮ್ಯಾನ್​’ ಚಿತ್ರಗಳಿಗಿಂತಲೂ ಅದ್ದೂರಿಯಾಗಿ ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ (Spider Man: No Way Home) ಸಿನಿಮಾವನ್ನು ಕಟ್ಟಿಕೊಡಲಾಗಿದೆ ಎನ್ನಲಾಗುತ್ತಿದೆ. ಬೆಂಗಳೂರಲ್ಲಿ ಈ ಸಿನಿಮಾದ ಹವಾ ಹೆಚ್ಚಿದೆ. ಮೊದಲ ದಿನ ಬೆಂಗಳೂರಿನಲ್ಲೊಂದೇ ಬರೋಬ್ಬರಿ 700ಕ್ಕೂ ಅಧಿಕ ಶೋ ಪ್ರದರ್ಶನ ಕಾಣುತ್ತಿದೆ.  

ಟಾಮ್​ ಹಾಲೆಂಡ್​ ನಟಿಸಿರುವ ಈ ಚಿತ್ರದ ಟ್ರೇಲರ್​ ಹವಾ ಸೃಷ್ಟಿ ಮಾಡಿತ್ತು. ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಡಿ.17ರಂದು ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಚಿತ್ರ ಬಿಡುಗಡೆ ಆಗುತ್ತಿದೆ. ವಿಶೇಷ ಎಂದರೆ ಭಾರತದಲ್ಲಿ ಒಂದು ದಿನ ಮೊದಲು ಅಂದರೆ ಡಿಸೆಂಬರ್​ 16ರಂದು ರಿಲೀಸ್​ ಆಗುತ್ತಿದೆ. ಈ ಕಾರಣಕ್ಕೆ ಸಿನಿಮಾ ಬಗ್ಗೆ ದೊಡ್ಡ ಹೈಪ್​ ಸಿಕ್ಕಿದೆ.

ಡಿಸೆಂಬರ್​ 17ರಂದು ‘ಪುಷ್ಪ’ ಸಿನಿಮಾ ತೆರೆಗೆ ಬರುತ್ತಿದೆ. ಈ ಚಿತ್ರಕ್ಕೂ ದೊಡ್ಡ ಹೈಪ್​ ಇದೆ. ಅದಕ್ಕೂ ಮೊದಲೇ ‘ಸ್ಪೈಡರ್​ ಮ್ಯಾನ್​’ ರಿಲೀಸ್​ ಆಗಿ ಹವಾ ಸೃಷ್ಟಿಸೋಕೆ ರೆಡಿ ಆಗುತ್ತಿದೆ. 3ಡಿ ಅವತರಣಿಕೆಯಲ್ಲೂ ಸಿನಿಮಾ ರಿಲೀಸ್​ ಆಗುತ್ತಿದ್ದು, ಭಾರೀ ಬೇಡಿಕೆ ಸೃಷ್ಟಿ ಆಗಿದೆ. ಬೆಂಗಳೂರಲ್ಲಿ ಬಹುತೇಕ ಶೋಗಳು ಮಲ್ಟಿಫ್ಲೆಕ್ಸ್​ನಲ್ಲಿದ್ದು, ಹೌಸ್​ಫುಲ್​ ಆಗುತ್ತಿದೆ.

ಈ ಹಿಂದಿನ ಸಿನಿಮಾಗಳಲ್ಲಿ ಸ್ಪೈಡರ್​ ಮ್ಯಾನ್​ ಪಾತ್ರ ಮಾಡಿದ್ದ ಟಾಬಿ ಮಗ್ವಾಯರ್​ ಮತ್ತು ಆ್ಯಂಡ್ರೀವ್​ ಗಾರ್ಫೀಲ್ಡ್​​ ಕೂಡ ‘ಸ್ಪೈಡರ್​ ಮ್ಯಾನ್: ನೋ ವೇ ಹೋಮ್​’ ಚಿತ್ರದಲ್ಲಿ ಟಾಮ್​ ಹಾಲೆಂಡ್​ ಜೊತೆ ತೆರೆ ಹಂಚಿಕೊಂಡಿದ್ದಾರೆ ಎನ್ನಲಾಗಿತ್ತು. ಅದಕ್ಕೆ ಪುರಾವೆ ಒದಗಿಸುವಂತಹ ಫೋಟೋ ಕೂಡ ಲೀಕ್​ ಆಗಿತ್ತು. ಆದರೆ ನಂತರ ಬಿಡುಗಡೆ ಆಗಿದ್ದ ಟ್ರೇಲರ್​ನಲ್ಲಿ ಟಾಬಿ ಮಗ್ವಾಯರ್​ ಮತ್ತು ಆ್ಯಂಡ್ರೀವ್​ ಗಾರ್ಫೀಲ್ಡ್ ಕಾಣಿಸಿಕೊಂಡಿರಲಿಲ್ಲ. ಈ ಗೊಂದಲಕ್ಕೆ ಇಂದು ತೆರೆ ಬೀಳಲಿದೆ.

2002ರಿಂದ 2007ರವರೆಗೆ ಬಂದ ಮೂರು ಸಿನಿಮಾಗಳಲ್ಲಿ ಸ್ಪೈಡರ್​ ಮ್ಯಾನ್​ ಪಾತ್ರವನ್ನು ನಟ ಟಾಬಿ ಮಗ್ವಾಯರ್ ನಿಭಾಯಿಸಿದ್ದರು. ಆ ಬಳಿಕ 2012 ಮತ್ತು 2014ರಲ್ಲಿ ಬಂದ ‘ಸ್ಪೈಡರ್​ ಮ್ಯಾನ್​’ ಸಿನಿಮಾಗಳಲ್ಲಿ ನಟ ಆ್ಯಂಡ್ರೀವ್​ ಗಾರ್ಫೀಲ್ಡ್​​ ಹೀರೋ ಆಗಿದ್ದರು. 2016ರಿಂದ ಈಚೆಗೆ ಟಾಮ್​ ಹಾಲೆಂಡ್​ ಅವರು ಸ್ಪೈಡರ್​ ಮ್ಯಾನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಸ್ಪೈಡರ್​ ಮ್ಯಾನ್​’ ಟ್ರೇಲರ್​: ಗುಟ್ಟು ಕಾಪಾಡಲು ಚಿತ್ರತಂಡ ಮಾಡಿದ ಎಡವಟ್ಟು ಪತ್ತೆ ಹಚ್ಚಿದ ಫ್ಯಾನ್ಸ್​

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್