‘83’ ಸಿನಿಮಾ ಬಹಿಷ್ಕರಿಸಲು ಟ್ವಿಟರ್​ನಲ್ಲಿ ಅಭಿಯಾನ; ಈ ಪರಿ ವಿರೋಧಕ್ಕೆ ಕಾರಣ ಏನು?

‘83’ ಸಿನಿಮಾ ಬಹಿಷ್ಕರಿಸಲು ಟ್ವಿಟರ್​ನಲ್ಲಿ ಅಭಿಯಾನ; ಈ ಪರಿ ವಿರೋಧಕ್ಕೆ ಕಾರಣ ಏನು?
ರಣವೀರ್​ ಸಿಂಗ್​, ದೀಪಿಕಾ ಪಡುಕೋಣೆ

Boycott 83: ‘83’ ಚಿತ್ರವನ್ನು ಜನರು ವಿರೋಧಿಸಲು ಅನೇಕ ಕಾರಣಗಳಿವೆ. ಆದರೆ ಯಾವುದೂ ಕೂಡ ಹೊಸ ಕಾರಣ ಅಲ್ಲ. ಹಲವು ಘಟನೆಗಳನ್ನು ನೆಪ ಮಾಡಿಕೊಂಡು ಈ ಚಿತ್ರವನ್ನು ಬಹಿಷ್ಕರಿಸುವಂತೆ ಒಂದು ವರ್ಗದ ನೆಟ್ಟಿಗರು ಪಟ್ಟು ಹಿಡಿದಿದ್ದಾರೆ.

TV9kannada Web Team

| Edited By: Madan Kumar

Dec 24, 2021 | 12:39 PM

ರಣವೀರ್​ ಸಿಂಗ್​ (Ranveer Singh) ನಟನೆಯ ‘83’ ಸಿನಿಮಾ (83 Movie) ದೊಡ್ಡ ಮಟ್ಟದ ಓಪನಿಂಗ್​ ಪಡೆದುಕೊಂಡಿದೆ. ಕಬೀರ್​ ಖಾನ್​ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಕಪಿಲ್​ ದೇವ್​ ಅವರ ಪಾತ್ರವನ್ನು ರಣವೀರ್​ ಸಿಂಗ್​ ನಿಭಾಯಿಸಿದ್ದಾರೆ. ಕ್ರಿಕೆಟ್​ ಪ್ರಿಯರಿಂದ ಈ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ‘83’ ಸಿನಿಮಾವನ್ನು ಬಹಿಷ್ಕರಿಸುವಂತೆ ಒಂದಷ್ಟು ಜನರು ಅಭಿಯಾನ ನಡೆಸುತ್ತಿದ್ದಾರೆ. #Boycott83 ಹ್ಯಾಶ್​ ಟ್ಯಾಗ್​ ಮೂಲಕ ಸೋಶಿಯಲ್​ ಮೀಡಿಯಾದಲ್ಲಿ ಈ ಚಿತ್ರವನ್ನು ವಿರೋಧಿಸಲಾಗುತ್ತಿದೆ. ಟ್ವಿಟರ್​ನಲ್ಲಿ #Boycott83 ಹ್ಯಾಶ್​ ಟ್ಯಾಗ್​ ಟ್ರೆಂಡ್​ (Twitter Trending) ಆಗಿದೆ. ಸುಶಾಂತ್​ ಸಿಂಗ್​ ರಜಪೂತ್ (Sushant Singh Rajput)​ ಅಭಿಮಾನಿಗಳು ಕೂಡ ಈ ಸಿನಿಮಾವನ್ನು ಬಹಿಷ್ಕರಿಸುವಂತೆ ​ಒತ್ತಾಯಿಸುತ್ತಿದ್ದಾರೆ.

‘83’ ಚಿತ್ರವನ್ನು ಜನರು ವಿರೋಧಿಸಲು ಅನೇಕ ಕಾರಣಗಳಿವೆ. ಆದರೆ ಯಾವುದೂ ಕೂಡ ಹೊಸ ಕಾರಣ ಅಲ್ಲ. ಹಳೇ ಘಟನೆಗಳನ್ನೆಲ್ಲ ನೆಪ ಮಾಡಿಕೊಂಡು ಈ ಚಿತ್ರವನ್ನು ಬಹಿಷ್ಕರಿಸುವಂತೆ ಒಂದು ವರ್ಗದ ನೆಟ್ಟಿಗರು ಪಟ್ಟು ಹಿಡಿದಿದ್ದಾರೆ. ಈ ಹಿಂದೆ ರಣವೀರ್​ ಸಿಂಗ್​ ಅವರು ಒಂದು ಜಾಹೀರಾತಿನಲ್ಲಿ ನಟಿಸಿದ್ದರು. ಅದರಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ಪರೋಕ್ಷವಾಗಿ ಅವಮಾನ ಮಾಡಲಾಗಿತ್ತು ಎಂಬುದು ಸುಶಾಂತ್​ ಅಭಿಮಾನಿಗಳ ಆರೋಪವಾಗಿತ್ತು. ಅದನ್ನೇ ಮುಂದಿಟ್ಟುಕೊಂಡು ಈಗ ‘83’ ಸಿನಿಮಾವನ್ನು ವಿರೋಧಿಸಲಾಗುತ್ತಿದೆ.

ಈ ಸಿನಿಮಾದಲ್ಲಿ ಕಪಿಲ್​ ದೇವ್​ ಪತ್ನಿಯ ಪಾತ್ರವನ್ನು ದೀಪಿಕಾ ಪಡುಕೋಣೆ ನಿಭಾಯಿಸಿದ್ದಾರೆ. ಪ್ರತಿ ಬಾರಿ ಅವರ ಸಿನಿಮಾಗಳು ರಿಲೀಸ್​ ಆದಾಗ ಒಂದಷ್ಟು ಜನರು ಕಿಡಿಕಾರುತ್ತಾರೆ. ಈ ಹಿಂದೆ ಅವರು ಜೆಎನ್​ಯು ಕ್ಯಾಂಪಸ್​ಗೆ ಭೇಟಿ ನೀಡಿದ್ದೇ ಅದಕ್ಕೆ ಕಾರಣ. ಈಗ ಮತ್ತೆ ಜೆಎನ್​ಯು ವಿಚಾರವನ್ನು ಎಳೆದುತಂದು ‘83’ ಸಿನಿಮಾ ಬಹಿಷ್ಕರಿಸುವಂತೆ ಕೆಲವರು ಅಭಿಯಾನ ಮಾಡುತ್ತಿದ್ದಾರೆ.

ಯಾರು ಎಷ್ಟೇ ವಿರೋಧಿಸಿದರೂ ‘83’ ಚಿತ್ರಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್​ ಸಿಗುತ್ತಿದೆ. ಅನೇಕ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಹಿಂದಿಯಲ್ಲಿ ತಯಾರಾಗಿರುವ ಈ ಚಿತ್ರ ಕನ್ನಡ, ತಮಿಳು, ಮಲಯಾಳಂ ಮತ್ತು ತೆಲುಗು ಭಾಷೆಗೆ ಡಬ್​ ಆಗಿ ತೆರೆಕಂಡಿದೆ. 1983ರ ವಿಶ್ವಕಪ್​ನಲ್ಲಿ ಭಾರತ ತಂಡ ಟ್ರೋಫಿ ಗೆದ್ದ ಘಟನೆಯನ್ನು ಆಧರಿಸಿ ‘83’ ಮೂಡಿಬಂದಿದೆ. ರಣವೀರ್​ ಸಿಂಗ್​ ಅಭಿನಯಕ್ಕೆ ವಿಮರ್ಶಕರಿಂದ ಮೆಚ್ಚುಗೆ ಸಿಗುತ್ತಿದೆ.

ಕರ್ನಾಟಕದಲ್ಲಿ ಈ ಚಿತ್ರವನ್ನು ಕಿಚ್ಚ ಸುದೀಪ್​ ಅವರು ಅರ್ಪಿಸಿದ್ದಾರೆ. ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್​ಟೇನ್ಮೆಂಟ್​ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಹೊತ್ತುಕೊಂಡಿವೆ. ದೀಪಿಕಾ ಪಡುಕೋಣೆ, ಕಬೀರ್ ಖಾನ್, ವಿಷ್ಣು ವರ್ಧನ್ ಇಂದುರಿ, ಸಾಜಿದ್ ನಾಡಿಯದ್ವಾಲ, ಫಾಂಟಮ್ ಫಿಲ್ಮ್ಸ್ ಹಾಗೂ 83 ಫಿಲ್ಮ್ ಲಿಮಿಟೆಡ್ ಮೂಲಕ ಈ ಚಿತ್ರ ನಿರ್ಮಾಣ ಆಗಿದೆ.

ಇದನ್ನೂ ಓದಿ:

ಬಿಡುಗಡೆಗೂ ಮುನ್ನ ‘83’ ಚಿತ್ರ ನೋಡಲು ನಿರಾಕರಿಸಿದ್ದ 1983 ವಿಶ್ವಕಪ್​ ಟೀಮ್ ಆಟಗಾರರು​; ಕಾರಣ ಏನು?

83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್​ಪ್ರಿಯರ ಎಮೋಷನ್​, ವಿಶ್ವಕಪ್​ ಗೆಲುವಿನ ಹೊಸ ಸೆಲೆಬ್ರೇಷನ್​

Follow us on

Related Stories

Most Read Stories

Click on your DTH Provider to Add TV9 Kannada