83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್​ಪ್ರಿಯರ ಎಮೋಷನ್​, ವಿಶ್ವಕಪ್​ ಗೆಲುವಿನ ಹೊಸ ಸೆಲೆಬ್ರೇಷನ್​

83 Movie Review: ರಣವೀರ್​ ಸಿಂಗ್​ ನಟನೆಯ ‘83’ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಕಬೀರ್ ಖಾನ್​ ನಿರ್ದೇಶನ ಮಾಡಿದ್ದಾರೆ. ಕಪಿಲ್​ ದೇವ್​ ಪತ್ನಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ.

83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್​ಪ್ರಿಯರ ಎಮೋಷನ್​, ವಿಶ್ವಕಪ್​ ಗೆಲುವಿನ ಹೊಸ ಸೆಲೆಬ್ರೇಷನ್​
83 ಸಿನಿಮಾ
Follow us
ಮದನ್​ ಕುಮಾರ್​
| Updated By: Digi Tech Desk

Updated on:Dec 24, 2021 | 9:36 AM

ಚಿತ್ರ: 83 ನಿರ್ದೇಶನ: ಕಬೀರ್​ ಖಾನ್​ ಪಾತ್ರವರ್ಗ: ರಣವೀರ್​ ಸಿಂಗ್ (Ranveer Singh)​, ದೀಪಿಕಾ ಪಡುಕೋಣೆ (Deepika Padukone), ಪಂಕಜ್​ ತ್ರಿಪಾಠಿ, ಜೀವ, ಜತಿನ್​ ಸರ್ನಾ, ಹಾರ್ಡಿ ಸಂಧು ಮಂತಾದವರು.  ಸ್ಟಾರ್​: 4.5/5 

ಅಂತಾರಾಷ್ಟ್ರೀಯ ಏಕದಿನ ವಿಶ್ವಕಪ್​ ಕ್ರಿಕೆಟ್​ನಲ್ಲಿ ಭಾರತ ತಂಡ ಮೊದಲ ಬಾರಿ ಟ್ರೋಫಿ ಗೆದ್ದಿದ್ದು 1983ರಲ್ಲಿ. ಇಂದಿನ ಹಲವು ತಲೆಮಾರಿನ ಜನರಿಗೆ ಆ ಐತಿಹಾಸಿಕ ಕ್ಷಣವನ್ನು ಸಂಭ್ರಮಿಸುವ ಅವಕಾಶ ಸಿಕ್ಕಿರಲಿಲ್ಲ. ಬರೋಬ್ಬರಿ 38 ವರ್ಷಗಳ ಹಿಂದೆ ನಡೆದ ಆ ಅದ್ಭುತ ಘಟನೆಯನ್ನು ಇಟ್ಟುಕೊಂಡು ಈಗ ‘83’ ಸಿನಿಮಾ (83 Movie) ಮಾಡಲಾಗಿದೆ. ಈ ಸಿನಿಮಾ ಮೂಲಕ ಅಂದಿನ ಗೆಲುವನ್ನು ಚಿತ್ರಮಂದಿರಗಳಲ್ಲಿ ಸಂಭ್ರಮಿಸುವ ಅವಕಾಶ ಇಂದು ಸಿಕ್ಕಿದೆ. ಖ್ಯಾತ ನಿರ್ದೇಶಕ ಕಬೀರ್​ ಖಾನ್ (Kabir Khan) ಅವರು ಈ ಚಿತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. 1983ರ ವಿಶ್ವಕಪ್​ (1983 world cup) ಗೆಲುವಿನ ರೀತಿಯೇ ಈ ಸಿನಿಮಾ ಕೂಡ ಭಾರತೀಯ ಚಿತ್ರರಂಗದ ಇತಿಹಾಸದ ಪುಟದಲ್ಲಿ ವಿಶೇಷ ಪ್ರಯತ್ನವಾಗಿ ಗಮನ ಸೆಳೆಯುತ್ತದೆ. ಅಷ್ಟರಮಟ್ಟಿಗೆ ನಾಜೂಕಾಗಿ ಈ ಸಿನಿಮಾವನ್ನು ತಯಾರಿಸಲಾಗಿದೆ. ಒಟ್ಟಾರೆಯಾಗಿ ‘83’ ಸಿನಿಮಾ ಹೇಗಿದೆ ಎಂಬುದಕ್ಕೆ ಈ ವಿಮರ್ಶೆಯಲ್ಲಿ (83 Movie Review) ಉತ್ತರವಿದೆ.

ಇದು ಯಾರ ಕಥೆ?

‘83’ ಎಂದರೆ ಕೇವಲ 1983ರಲ್ಲಿ ವಿಶ್ವಕಪ್​ ಗೆದ್ದ ತಂಡದವರ ಕಥೆ ಅಲ್ಲವೇ ಅಲ್ಲ. 11 ಆಟಗಾರರನ್ನು ಪ್ರೋತ್ಸಾಹಿಸಿದ ಕೋಟ್ಯಂತರ ಜನರ ಭಾವನೆಗಳಿಗೆ ಸಂಬಂಧಿಸಿದ ಕಥೆ. 4 ದಶಕದ ಹಿಂದೆ ಭಾರತದಲ್ಲಿ ಕ್ರಿಕೆಟ್​ಗೆ ಯಾವ ಸ್ಥಾನಮಾನ ಇತ್ತು ಎಂಬುದನ್ನು ಎತ್ತಿ ತೋರಿಸುವ ಕಥೆ. ನಂಬಿಕೆ ಮತ್ತು ಆತ್ಮವಿಶ್ವಾಸ ಇದ್ದರೆ ಎಂತಹ ಎದುರಾಳಿಯನ್ನೂ ಮಣಿಸಬಹುದು ಎಂಬ ಭರವಸೆಯ ಕಥೆ. ಭಾರತದಂತಹ ರಾಷ್ಟ್ರಕ್ಕೆ ಕ್ರಿಕೆಟ್​ ಎಂದರೆ ಯಾವ ರೀತಿಯ ಎಮೋಷನ್​ ಇದೆ ಎಂಬುದನ್ನು ತಿಳಿಸುವ ಕಥೆ. ವಿಶ್ವಕಪ್​ ಗೆಲ್ಲಲು ಟೀಮ್​ ಇಂಡಿಯಾದ ಆಟಗಾರರು ಎದುರಿಸಿದ ಸವಾಲುಗಳ ಕಥೆ. ಅಸಂಖ್ಯಾತ ಜನರಿಗೆ ಸ್ಫೂರ್ತಿ ತುಂಬುವಂತಹ ಕಥೆ. ಈ ಕಾರಣಕ್ಕಾಗಿ ‘83’ ಸಿನಿಮಾ ಮಹತ್ವದ್ದು ಎನಿಸಿಕೊಳ್ಳುತ್ತದೆ.

ರಣವೀರ್​ ಸಿಂಗ್​ ಎಂದು ನಂಬಲು ಮನಸ್ಸು ಒಪ್ಪಲ್ಲ!

ಸಿನಿಮಾ ಶುರು ಆಗುತ್ತಿದ್ದಂತೆಯೇ ನಿರ್ದೇಶಕರು ಪ್ರೇಕ್ಷಕರನ್ನು 38 ವರ್ಷಗಳಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತಾರೆ. ಕಪಿಲ್​ ದೇವ್​ ಪಾತ್ರದಲ್ಲಿ ರಣವೀರ್​ ಸಿಂಗ್​ ಎದುರಾಗುತ್ತಾರೆ. ಆದರೆ ಅವರನ್ನು ರಣವೀರ್​ ಸಿಂಗ್​ ಎಂದು ನಂಬಲು ಮನಸ್ಸು ಒಪ್ಪುವುದಿಲ್ಲ. ಯಾಕೆಂದರೆ ಅವರು ಕಪಿಲ್​ ದೇವ್​ ಆಗಿಯೇ ತಮ್ಮನ್ನು ತಾವು ಮಾರ್ಪಡಿಸಿಕೊಂಡಿದ್ದಾರೆ. ಆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. ಒಬ್ಬ ಮಾಂತ್ರಿಕನ ರೀತಿಯಲ್ಲಿ, ಗೊತ್ತೇ ಆಗದಂತೆ, ತುಂಬಾ ಸಹಜವಾಗಿ ಪ್ರೇಕ್ಷಕರನ್ನು ಅವರು ಆವರಿಸಿಕೊಳ್ಳುತ್ತಾರೆ. ನಿಜವಾದ ಕಪಿಲ್​ ದೇವ್​ ಇವರೇ ಇರಬಹುದೇನೋ ಎಂಬಂತಿದೆ ರಣವೀರ್​ ಸಿಂಗ್​ ನಟನೆ ಮತ್ತು ಹಾವ ಭಾವ.

ಇನ್ನುಳಿದ ಪಾತ್ರಗಳಲ್ಲಿ ನಟಿಸಿದ ಎಲ್ಲ ಕಲಾವಿದರಿಗೂ ಹ್ಯಾಟ್ಸಾಫ್​ ಎನ್ನಲೇಬೇಕು. ಸುನಿಲ್​ ಗವಾಸ್ಕರ್​ ಪಾತ್ರದಲ್ಲಿ ತಾಹಿರ್​ ರಾಜ್​ ಭಸಿನ್​, ಕೃಷ್ಣಮಚಾರಿ ಶ್ರೀಕಾಂತ್​ ಪಾತ್ರದಲ್ಲಿ ಜೀವ, ಮೊಹಿಂದರ್​ ಅಮರ್​ನಾಥ್​ ಪಾತ್ರದಲ್ಲಿ ಸಾಖಿಬ್​ ಸಲೀಮ್​, ಯಶ್​ಪಾಲ್​ ಶರ್ಮಾ ಪಾತ್ರದಲ್ಲಿ ಜತಿನ್​ ಸರ್ನಾ, ಸಂದೀಪ್​ ಪಾಟಿಲ್​ ಪಾತ್ರದಲ್ಲಿ ಚಿರಾಗ್​ ಪಾಟಿಲ್​, ಕೀರ್ತಿ ಆಜಾದ್​ ಪಾತ್ರದಲ್ಲಿ ದಿನಕರ್​ ಶರ್ಮಾ, ರೋಜರ್​ ಬಿನ್ನಿ ಪಾತ್ರದಲ್ಲಿ ನಿಶಾಂತ್​ ದಹಿಯಾ, ಮದನ್​ ಲಾಲ್​ ಪಾತ್ರದಲ್ಲಿ ಹಾರ್ಡಿ ಸಂಧು, ಸೈಯದ್​ ಕಿರ್ಮಾನಿ ಪಾತ್ರದಲ್ಲಿ ಸಾಹಿಲ್​ ಕಟ್ಟರ್​, ಬಲ್ವಿಂದರ್​ ಸಂಧು ಪಾತ್ರದಲ್ಲಿ ಎಮಿ ವಿರ್ಕ್​, ರವಿ ಶಾಸ್ತ್ರಿ ಪಾತ್ರದಲ್ಲಿ ಧೈರ್ಯ ಕರ್ವ ಹೀಗೆ ಎಲ್ಲ ಕಲಾವಿದರು ಕೂಡ ಆಯಾ ಪಾತ್ರಗಳಿಗೆ ಜೀವ ತುಂಬಿದ್ದಾರೆ.

1983ರ ಭಾರತ ವಿಶ್ವಕಪ್​ ತಂಡದ ಮ್ಯಾನೇಜರ್​ ಆಗಿದ್ದ ಪಿಆರ್ ಮಾನ್​ ಸಿಂಗ್​ ಪಾತ್ರದಲ್ಲಿ ಪಂಕಜ್​ ತ್ರಿಪಾಠಿ ನಟನೆಗೆ ಭೇಷ್​ ಎನ್ನಲೇಬೇಕು. ಕಪಿಲ್​ ದೇವ್​ ಅವರ ಪತ್ನಿ ರೋಮಿ ಭಾಟಿಯಾ ಪಾತ್ರವನ್ನು ನಟಿ ದೀಪಿಕಾ ಪಡುಕೋಣೆ ನಿಭಾಯಿಸಿದ್ದಾರೆ. ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಸಹ ಅವರು ಚಪ್ಪಾಳೆ ಗಿಟ್ಟಿಸುತ್ತಾರೆ.

ಈ ಸಿನಿಮಾದ ಹೀರೋ ಕಬೀರ್​ ಖಾನ್​!

‘83’ ಸಿನಿಮಾವನ್ನು ಕಟ್ಟಿಕೊಡುವುದು ನಿಜಕ್ಕೂ ಸವಾಲಿನ ಕೆಲಸ ಆಗಿತ್ತು. 1983ರಲ್ಲಿ ಏನೆಲ್ಲ ನಡೆಯಿತು ಎಂಬುದಕ್ಕೆ ಸೂಕ್ತ ದಾಖಲೆಗಳಿಲ್ಲ. ಲಭ್ಯವಿರುವ ವಿಡಿಯೋ ತುಣುಕುಗಳು ಕೂಡ ವಿರಳ. ಸೂಕ್ತ ಮಾಹಿತಿ ಕಲೆಹಾಕಲು ಕಬೀರ್​ ಖಾನ್​ ಅವರ ತಂಡ ಸಾಕಷ್ಟು ಶ್ರಮ ವಹಿಸಿದೆ. 38 ವರ್ಷಗಳ ಹಿಂದಿನ ಕಾಲಘಟ್ಟವನ್ನು ತುಂಬ ಚೆನ್ನಾಗಿ ಚಿತ್ರಿಸಲಾಗಿದೆ. ವಿಶ್ವಕಪ್​ ಗೆಲುವಿನ ಹಿಂದೆ ಹಲವಾರು ಆಸಕ್ತಿಕರ ಘಟನೆಗಳಿವೆ. ಆ ಪೈಕಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು? ಯಾವುದಕ್ಕೆ ಹೆಚ್ಚು ಮಹತ್ವ ನೀಡಬೇಕು? ಎಷ್ಟು ಮೆಲೋಡ್ರಾಮಾ ಇರಬೇಕು? ಕ್ರಿಕೆಟ್​ ಆಟದ ದೃಶ್ಯಗಳನ್ನು ಎಷ್ಟು ತೋರಿಸಬೇಕು ಎಂಬಿತ್ಯಾದಿ ವಿಚಾರದಲ್ಲಿ ಅವರು ತೆಗೆದುಕೊಂಡ ನಿರ್ಧಾರ ಗಮನಾರ್ಹ. ಇದರಿಂದಾಗಿ ಈ ಸಿನಿಮಾ ಎಲ್ಲಿಯೂ ಕೂಡ ಒಂದು ಸಾಕ್ಷ್ಯಚಿತ್ರದ ರೀತಿ ಫೀಲ್​ ನೀಡುವುದಿಲ್ಲ. ಎಲ್ಲ ರುಚಿಗಳ ಹದವರಿತ ನುರಿತ ಬಾಣಸಿಗನಂತೆ ಕಬೀರ್​ ಖಾನ್​ ಅವರು ಈ ಮನರಂಜನೆಯ ಭೋಜನ ತಯಾರಿಸಿದ್ದಾರೆ.

ಆಸಿಮ್​ ಮಿಶ್ರಾ ಅವರ ಛಾಯಾಗ್ರಹಣದಲ್ಲಿ 38 ವರ್ಷಗಳ ಹಿಂದಿನ ಕ್ರಿಕೆಟ್​ ಮೈದಾನದ ಚಿತ್ರಣ ಕಣ್ಣಿಗೆ ಕಟ್ಟಿದೆ. ಘಟಾನುಘಟಿ ತಂಡಗಳ ಎದುರು ಭಾರತ ತಂಡ ಕಣಕ್ಕೆ ಇಳಿದ ಪಂದ್ಯಗಳ ಕೌತುಕದ ದೃಶ್ಯಗಳಲ್ಲಿ ಪ್ರೇಕ್ಷಕರ ಎದೆಬಡಿತ ಹೆಚ್ಚಿಸುವಂತಹ ಹಿನ್ನೆಲೆ ಸಂಗೀತ ನೀಡಿದ್ದಾರೆ ಸಂಗೀತ ನಿರ್ದೇಶಕ ಜೂಲಿಯಸ್​ ಪ್ಯಾಕಿಮ್​. ಅವರ ಹಿನ್ನೆಲೆ ಸಂಗೀತದಿಂದಾಗಿ ಎಮೋಷನಲ್​ ದೃಶ್ಯಗಳ ಮೆರುಗು ಹೆಚ್ಚಿದೆ. ಅದೇ ರೀತಿ ಹಾಡುಗಳಲ್ಲಿ ಪ್ರೀತಂ ಅವರು ತಮ್ಮ ಕಸುಬುದಾರಿಕೆ ತೋರಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಕ್ರಿಕೆಟ್​ಪ್ರೇಮಿಗಳಿಗೆ ‘83’ ಸಿನಿಮಾ ಸಖತ್​ ಇಷ್ಟವಾಗುತ್ತದೆ. ಕ್ರೀಡೆಯನ್ನು ಆಧರಿಸಿ ತಯಾರಾದ ಕೆಲವೇ ಸಿನಿಮಾಗಳ ಸಾಲಿನಲ್ಲಿ ಇದೊಂದು ಮೇರುಕೃತಿಯಾಗಿ ಗಮನ ಸೆಳೆಯುತ್ತದೆ. ಸಿನಿಮಾದಲ್ಲಿ ತೋರಿಸಿರುವ ಕ್ರಿಕೆಟ್ ಮೈದಾನದ ಹೊರಗಿನ ವಿವರಗಳು ಎಷ್ಟು ವಿಶ್ವಾಸಾರ್ಹ ಎಂಬುದು ಅವರವರ ನಂಬಿಕೆಗೆ ಬಿಟ್ಟದ್ದು. ಅವುಗಳನ್ನು ಪ್ರಶ್ನಿಸುವುದಕ್ಕಾಗಲೀ, ಸಾಬೀತು ಮಾಡುವುದಕ್ಕಾಗಲೀ ಮೊದಲೇ ಹೇಳಿದಂತೆ ಸೂಕ್ತ ದಾಖಲೆಗಳೇನೂ ಇಲ್ಲ. ಆಟಗಾರರು ನೀಡಿದ ಮಾಹಿತಿಯನ್ನೇ ಬಹುಪಾಲು ಆಧರಿಸಿ ಈ ಸಿನಿಮಾ ತಯಾರಾಗಿದೆ.

ಇದನ್ನೂ ಓದಿ:

1983ರ ವಿಶ್ವಕಪ್​ ಟೀಮ್​ ಆಟಗಾರರಿಗೆ ಈಗ ಸಿಕ್ಕಿದೆ ಕೋಟಿ ಕೋಟಿ ಸಂಭಾವನೆ; ಕಪಿಲ್​ ದೇವ್​ಗೆ 5 ಕೋಟಿ

ಡಬ್ಬಿಂಗ್​ ಚಿತ್ರದ ಕನ್ನಡ ವರ್ಷನ್​ಗೆ ಹೆಚ್ಚು ಥಿಯೇಟರ್​ ಸಿಗಲ್ಲ ಯಾಕೆ? ಪ್ರಾಕ್ಟಿಕಲ್​ ಕಾರಣ ತಿಳಿಸಿದ ‘83’ ವಿತರಕ ಜಾಕ್​​ ಮಂಜು

Published On - 7:54 am, Fri, 24 December 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ