Humble Politiciann Nograj: ಮತ್ತೆ ‘ಹಂಬಲ್ ಪೊಲಿಟಿಶಿಯನ್’ ಆದ ದಾನಿಶ್; ಮಜವಾದ ಟ್ರೈಲರ್ ಇಲ್ಲಿದೆ

Humble Politiciann Nograj: ಮತ್ತೆ ‘ಹಂಬಲ್ ಪೊಲಿಟಿಶಿಯನ್’ ಆದ ದಾನಿಶ್; ಮಜವಾದ ಟ್ರೈಲರ್ ಇಲ್ಲಿದೆ
‘ಹಂಬಲ್ ಪೊಲಿಟಿಶಿಯನ್ ನಾಗ್ರಾಜ್’ ಪೋಸ್ಟರ್

Danish Sait: ನಿರೂಪಕ, ನಟ ದಾನಿಸ್ ಸೇಠ್ ಅಭಿನಯದ ಕಾಮಿಡಿ ಸೀರೀಸ್ ‘ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಟ್ರೈಲರ್ ಬಿಡುಗಡೆಯಾಗಿದೆ. ಹ್ಯೂಮರ್​ನಿಂದ ಗಮನ ಸೆಳೆಯುತ್ತಿರುವ ಟ್ರೈಲರ್ ಇಲ್ಲಿದೆ.

TV9kannada Web Team

| Edited By: shivaprasad.hs

Dec 24, 2021 | 9:47 AM

ನಟ, ನಿರೂಪಕ ದಾನಿಶ್ ಸೇಠ್ (Danish Sait) ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಬಗೆಯ ಕಾಮಿಡಿ ಚಿತ್ರಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ಈ ಹಿಂದಿನ ಚಿತ್ರ ‘ಫ್ರೆಂಚ್ ಬಿರಿಯಾನಿ’ (French Biriyani) ಎಲ್ಲರ ಗಮನ ಸೆಳೆದಿತ್ತು. ಇದೀಗ ದಾನಿಶ್ ನಟನೆಯ ವೆಬ್ ಸೀರೀಸ್ ಬಿಡುಗಡೆಯಾಗಲು ಸಿದ್ಧವಾಗಿದೆ. ಈ ಹಿಂದೆ ರೇಡಿಯೋದಲ್ಲಿ ಧ್ವನಿ ರೂಪದಲ್ಲಿ ಮೂಡಿಬಂದಿದ್ದ ಅವರ ‘ನೋಗರಾಜ್’ (Nograj) ಪಾತ್ರದ ಆಧಾರದಲ್ಲಿ ಸಿನಿಮಾ ತೆರೆಗೆ ಬಂದು ಮೆಚ್ಚುಗೆ ಗಳಿಸಿತ್ತು. ಇದೀಗ ವೆಬ್ ಸೀರೀಸ್ ರೂಪದಲ್ಲಿ ಮಜವಾದ ಕತೆಯೊಂದಿಗೆ ‘ಹಂಬಲ್ ಪೊಲಿಟಿಶಿಯನ್ ನೋಗರಾಜ್’ (Humble Politiciann Nograj) ಜನರ ಮುಂದೆ ಬರಲಿದ್ದಾನೆ. ವೂಟ್ ಸೆಲೆಕ್ಟ್​​ನಲ್ಲಿ ಬಿಡುಗಡೆಯಾಗುತ್ತಿರುವ ಈ ಸೀರೀಸ್ ಒಟ್ಟು 10 ಎಪಿಸೋಡ್​ಗಳನ್ನು ಹೊಂದಿದೆ. ಇದೀಗ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದ್ದು, ಎಲ್ಲರ ಗಮನ ಸೆಳೆದಿದೆ.

ಓರ್ವ ಸ್ವಯಂಸೇವಕನಾಗಿ ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ನಾಗರಾಜ್ ನಂತರ ಮುಖ್ಯಮಂತ್ರಿ ಸ್ಥಾನಕ್ಕೇರಲು ಏನೆಲ್ಲಾ ಸರ್ಕಸ್ ಮಾಡುತ್ತಾನೆ ಎಂಬುದನ್ನು ಸೀರೀಸ್ ಮಜವಾಗಿ ಕಟ್ಟಿಕೊಡಲಿದೆ. ಟ್ರೈಲರ್ ಇದನ್ನು ಸ್ಪಷ್ಟಪಡಿಸಿದ್ದು, ಪಕ್ಕಾ ಕಾಮಿಡಿ ಎಂಟರ್​ಟೈನರ್ ಸೀರೀಸ್ ಇದಾಗಿರಲಿದೆ ಎಂಬುದನ್ನು ಪುಷ್ಠೀಕರಿಸಿದೆ.

‘ಹಂಬಲ್ ಪೊಲಿಟಿಶಿಯನ್ ನಾಗರಾಜ್’ ಟ್ರೈಲರ್ ಇಲ್ಲಿದೆ:

ಜನವರಿ 6ರಂದು ವೂಟ್​ನಲ್ಲಿ ಬಿಡುಗಡೆ: ಇತ್ತೀಚೆಗೆ ದಾನಿಶ್ ಸೇಠ್ ಅವರು ವಿಡಿಯೋ ಹಂಚಿಕೊಂಡು, ಸೀರೀಸ್ ಕುರಿತು ಸಂತಸ ಹಂಚಿಕೊಂಡಿದ್ದರು. ‘‘ನಮಸ್ಕಾರ ಸ್ನೇಹಿತರೆ. ಇಂದು ನಾನು ತುಂಬ ಭಾವುಕನಾಗಿದ್ದೇನೆ. ರೇಡಿಯೋದಲ್ಲಿ ಒಂದು ಧ್ವನಿಯಾಗಿ ನೋಗರಾಜ್​ ಪಾತ್ರ ಮೂಡಿಬಂದಿತ್ತು. ನಂತರ ಅದು ಸಿನಿಮಾ ಆಯಿತು. ಈಗ ಅದು ಒಂದು ವೆಬ್​ ಸಿರೀಸ್​ ಆಗಿದೆ’’ ಎಂದು ಅವರು ಹೇಳಿದ್ದರು. ಇದೀಗ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದ್ದು, ಹೊಸ ವರ್ಷದ ಮೊದಲ ವಾರದಲ್ಲಿ ತೆರೆ ಕಾಣಲಿದೆ.

ಸಾದ್ ಖಾನ್ ನಿರ್ದೇಶಿಸಿರುವ ಈ ಸೀರೀಸ್, ಜನವರಿ 6ರಂದು ವೂಟ್ ಸೆಲೆಕ್ಟ್​ ಒಟಿಟಿ ಮೂಲಕ ತೆರೆಕಾಣಲಿದೆ. ಪ್ರಕಾಶ್ ಬೆಳವಾಡಿ, ವಿಜಯ್ ಚೆಂಡೂರ್, ದಿಶಾ ಮದನ್ ಮೊದಲಾದವರು ಇದರಲ್ಲಿ ಕಾಣಿಸಿಕೊಂಡಿದ್ದಾರೆ. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶಿಸಿದ್ದಾರೆ.

ಇದನ್ನೂ ಓದಿ:

ಕನ್ನಡ ಕಿರುತೆರೆ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಉಮಾಶ್ರೀ ಸೀರಿಯಲ್​ ‘ಪುಟ್ಟಕ್ಕನ ಮಕ್ಕಳು’

Sunny Leone: ಸನ್ನಿ ಹೊಸ ಹಾಡಿನಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಅಪಮಾನ?; ನೆಟ್ಟಿಗರ ತೀವ್ರ ವಿರೋಧ

Follow us on

Related Stories

Most Read Stories

Click on your DTH Provider to Add TV9 Kannada