‘ರೈಡರ್’ ಚಿತ್ರಕ್ಕೆ ವಿಜಯ್ ಕುಮಾರ್ ಕೊಂಡ ನಿರ್ದೇಶನ ಮಾಡಿದ್ದಾರೆ. ನಿಖಿಲ್ ಕುಮಾರಸ್ವಾಮಿಗೆ ಜೋಡಿಯಾಗಿ ಕಾಶ್ಮೀರಾ ಪರದೇಶಿ ನಟಿಸಿದ್ದಾರೆ. ಚಂದ್ರು ಮನೋಹರನ್ ಮತ್ತು ಸುನೀಲ್ ಗೌಡ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ‘ರೈಡರ್’ ನೋಡಿದ ಬಳಿಕ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳ ಎದುರು ಹಂಚಿಕೊಂಡಿದ್ದಾರೆ.
‘ರಾಜಕೀಯಕ್ಕಿಂತಲೂ ಹೆಚ್ಚಾಗಿ, ಕನ್ನಡ ಚಿತ್ರರಂಗದಲ್ಲಿ ಕಲಾವಿದನಾಗಿ ನಿಖಿಲ್ ಅವರು ಅನೇಕ ವರ್ಷಗಳು ಈ ವೃತ್ತಿಯಲ್ಲಿ ತೊಡಗಿಕೊಳ್ಳಲಿ. ಉತ್ತಮವಾದ ಕಲಾವಿದನಾಗುವ ಸಾಮರ್ಥ್ಯವನ್ನು ದೇವರು ಅವರಿಗೆ ಕೊಟ್ಟಿದ್ದಾನೆ. ಮೂರನೇ ಸಿನಿಮಾದಲ್ಲಿ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗಕ್ಕೆ ನಟರ ಅವಶ್ಯಕತೆ ಇದೆ. ಅದನ್ನು ನಿಖಿಲ್ ಪೂರೈಸಲಿ. ರಾಜಕಾರಣದ ಹಿನ್ನೆಲೆಯಿಂದ ಸಿನಿಮಾ ಬಗ್ಗೆ ಹೆಚ್ಚು ಗಮನ ಇರಲಿಲ್ಲ. ಈ ಸಿನಿಮಾ ನೋಡಿದ ಬಳಿಕ ನನಗೆ ಅನಿಸಿದ್ದು ಏನೆಂದರೆ, ಅವರು ರಾಜಕಾರಣದಲ್ಲಿ ತೊಡಗಿಕೊಳ್ಳುವುದಕ್ಕಿಂತಲೂ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡ ಭಾಷೆಗೆ ಪ್ರಾಮಾಣಿಕ ಸೇವೆ ಸಲ್ಲಿಸಲಿ ಅಂತ ಅನಿಸಿದೆ. ನಾನು ಅವರ ಜತೆ ಮಾತನಾಡುತ್ತೇನೆ. ಚಿತ್ರರಂಗದಲ್ಲಿ ಮುಂದುವರಿಯುವ ಮುಖಾಂತರ ಒಳ್ಳೆಯ ಕಲಾವಿದ ಆಗಲಿ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ:
ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಸಿನಿಮಾ ರಿಲೀಸ್; ಚಿತ್ರಮಂದಿರದಲ್ಲಿ ಹೇಗಿದೆ ಸಂಭ್ರಮ?
‘ಪುನೀತ್ ಅಣ್ಣ ಇಲ್ಲದೇ ನಾವು ತಬ್ಬಲಿ ಆಗಿದ್ದೇವೆ’: ಅಪ್ಪು ಹೇಳಿಕೊಟ್ಟ ಪಾಠಗಳ ಬಗ್ಗೆ ನಿಖಿಲ್ ಮಾತು