ನಿಖಿಲ್​ ಕುಮಾರಸ್ವಾಮಿ ನಟನೆಯ ‘ರೈಡರ್​’ ಸಿನಿಮಾ ರಿಲೀಸ್​; ಚಿತ್ರಮಂದಿರದಲ್ಲಿ ಹೇಗಿದೆ ಸಂಭ್ರಮ?

‘ರೈಡರ್​’ ಚಿತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಜೋಡಿಯಾಗಿ ಕಾಶ್ಮೀರಾ ಪರದೇಸಿ ನಟಿಸಿದ್ದಾರೆ. ವಿಜಯ್​ ಕುಮಾರ್​ ಕೊಂಡ ನಿರ್ದೇಶನ ಮಾಡಿದ್ದು, ಚಂದ್ರು ಮನೋಹರನ್​ ಹಾಗೂ ಸುನೀಲ್​ ಗೌಡ ನಿರ್ಮಾಣ ಮಾಡಿದ್ದಾರೆ.

TV9kannada Web Team

| Edited By: Madan Kumar

Dec 24, 2021 | 10:11 AM

ನಿಖಿಲ್​ ಕುಮಾರಸ್ವಾಮಿ ಅಭಿನಯದ ‘ರೈಡರ್​’ ಸಿನಿಮಾ ಗ್ರ್ಯಾಂಡ್​ ಆಗಿ ಬಿಡುಗಡೆ ಆಗಿದೆ. ಟ್ರೇಲರ್​ ಮತ್ತು ಹಾಡುಗಳ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ್ದ ಈ ಚಿತ್ರವನ್ನು ಮೊದಲ ದಿನವೇ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅನೇಕ ಚಿತ್ರಮಂದಿರಗಳ ಎದುರು ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ನಿಖಿಲ್​ ಕುಮಾರಸ್ವಾಮಿ ಅಭಿಮಾನಿಗಳು ಕುಣಿದು ಸಂಭ್ರಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ನಿಖಿಲ್​ಗೆ ಜೋಡಿಯಾಗಿ ಕಾಶ್ಮೀರಾ ಪರದೇಸಿ ನಟಿಸಿದ್ದಾರೆ. ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಹಿರಿಯ ನಟ ದತ್ತಣ್ಣ, ಗರುಡ ರಾಮ್, ಚಿಕ್ಕಣ್ಣ, ಶೋಭರಾಜ್, ಶಿವರಾಜ್ ಕೆ.ಆರ್. ಪೇಟೆ, ಬಿಗ್​ ಬಾಸ್​ ವಿನ್ನರ್​ ಮಂಜು ಪಾವಗಡ, ನಿಹಾರಿಕಾ ಸೇರಿದಂತೆ ಅನೇಕರು ಬಣ್ಣ ಹಚ್ಚಿದ್ದಾರೆ. ವಿಜಯ್​ ಕುಮಾರ್​ ಕೊಂಡ ನಿರ್ದೇಶನ ಮಾಡಿದ್ದು, ಚಂದ್ರು ಮನೋಹರನ್​ ಹಾಗೂ ಸುನೀಲ್​ ಗೌಡ ನಿರ್ಮಾಣ ಮಾಡಿದ್ದಾರೆ. ಅರ್ಜುನ್​ ಜನ್ಯ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಇದನ್ನೂ ಓದಿ:

‘ರೈಡರ್​’, ‘ಬಡವ ರಾಸ್ಕಲ್​’ ಚಿತ್ರಗಳ ಬಗ್ಗೆ ರಮ್ಯಾ ನಿರೀಕ್ಷೆ; ಡಾಲಿ ಧನಂಜಯಗೆ ಮತ್ತೆ ಮತ್ತೆ ಪ್ರೀತಿ-ಪ್ರೋತ್ಸಾಹ

‘ದಯವಿಟ್ಟು ಸಿನಿಮಾ ಮಾಡೋದು ನಿಲ್ಲಿಸಣ್ಣ..’: ನಿಖಿಲ್​ ಕುಮಾರಸ್ವಾಮಿಗೆ ಮನವಿ ಮಾಡಿದ್ದು ಯಾರು?

Follow us on

Click on your DTH Provider to Add TV9 Kannada