‘ರೈಡರ್’ ಬಗ್ಗೆ ನಿಖಿಲ್ ಕುಮಾರ್ ಭಾವುಕ ನುಡಿ
ಹಿರಿಯ ನಟ ದತ್ತಣ್ಣ, ಗರುಡ ರಾಮ್, ಚಿಕ್ಕಣ್ಣ, ಶೋಭರಾಜ್, ಶಿವರಾಜ್.ಕೆ.ಆರ್.ಪೇಟೆ, ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ, ನಿಹಾರಿಕ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ. ಸಿನಿಮಾ ಬಗ್ಗೆ ನಿಖಿಲ್ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.
ಕ್ರಿಸ್ಮಸ್ ಪ್ರಯುಕ್ತ ಇಂದು (ಡಿಸೆಂಬರ್ 24) ನಿಖಿಲ್ ಕುಮಾರ್ ನಟನೆಯ ‘ರೈಡರ್’ ಸಿನಿಮಾ ತೆರೆಗೆ ಬಂದಿದೆ. ಸಿನಿಮಾದಲ್ಲಿ ನಿಖಿಲ್ ಸಖತ್ ಆ್ಯಕ್ಷನ್ನಲ್ಲಿ ಮಿಂಚಿದ್ದು, ಲವ್ ಸ್ಟೋರಿ ಹೈಲೈಟ್ ಆಗಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ವಿಲನ್ ಆಗಿ ಗರುಡ ರಾಮ್ ಕಾಣಿಸಿಕೊಂಡಿದ್ದಾರೆ. ವಿಜಯ್ ಕುಮಾರ್ ಕೊಂಡ ಅವರು ‘ರೈಡರ್’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಬಗ್ಗೆ ನಿಖಿಲ್ ಭಾವುಕರಾಗಿ ಮಾತನಾಡಿದ್ದಾರೆ. ‘ರೈಡರ್’ ಸಿನಿಮಾ ದೊಡ್ಡ ಸ್ಪರ್ಧೆ ಎದುರಿಸುತ್ತಿದೆ. ಈಗ ದೊಡ್ಡ ಬಜೆಟ್ನ ಹಲವು ಸಿನಿಮಾಗಳು ತೆರೆಗೆ ಬರುತ್ತಿವೆ. ಜನವರಿಯಲ್ಲೂ ಹಲವು ಚಿತ್ರಗಳು ರಿಲೀಸ್ ಆಗುತ್ತಿವೆ. ಚಿತ್ರದಲ್ಲಿ ದೊಡ್ಡ ತಾರಾಬಳಗವಿದೆ. ಹಿರಿಯ ನಟ ದತ್ತಣ್ಣ, ಗರುಡ ರಾಮ್, ಚಿಕ್ಕಣ್ಣ, ಶೋಭರಾಜ್, ಶಿವರಾಜ್.ಕೆ.ಆರ್.ಪೇಟೆ, ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ, ನಿಹಾರಿಕ ಸೇರಿದಂತೆ ಅನೇಕರು ಚಿತ್ರದಲ್ಲಿದ್ದಾರೆ. ಸಿನಿಮಾ ಬಗ್ಗೆ ನಿಖಿಲ್ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ನಿಖಿಲ್ ಕುಮಾರಸ್ವಾಮಿ ನಟನೆಯ ‘ರೈಡರ್’ ಸಿನಿಮಾ ರಿಲೀಸ್; ಚಿತ್ರಮಂದಿರದಲ್ಲಿ ಹೇಗಿದೆ ಸಂಭ್ರಮ?