‘ಬರ್ತ್​ಡೇಗೆ ‘ಕೆಜಿಎಫ್​ 2’ ಟೀಸರ್​ ಬರಲ್ಲ, ಸ್ವಲ್ಪ ದಿನ ಕಾಯಿರಿ ಟ್ರೇಲರ್​ ಬಿಡ್ತೀವಿ’; ಯಶ್​

ಜನವರಿ 8ರಂದು ಯಶ್​ ಜನ್ಮ ದಿನ. ಅಂದು ಸಿನಿಮಾದ ಟೀಸರ್​ ರಿಲೀಸ್​ ಆಗಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಅಂದು ಯಾವುದೇ ಟೀಸರ್​ ರಿಲೀಸ್ ಆಗುವುದಿಲ್ಲ ಎನ್ನುವ ಮಾತನ್ನು ಯಶ್​ ಹೇಳಿದ್ದಾರೆ.

TV9kannada Web Team

| Edited By: Rajesh Duggumane

Dec 24, 2021 | 8:37 PM

ಯಶ್​ ನಟನೆಯ ‘ಕೆಜಿಎಫ್​ 2’ ಸಿನಿಮಾ ಏಪ್ರಿಲ್​ 14ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕಾಗಿ ಎಲ್ಲರೂ ಕಾದು ಕೂತಿದ್ದಾರೆ. ಜನವರಿ 8ರಂದು ಯಶ್​ ಜನ್ಮ ದಿನ. ಅಂದು ಸಿನಿಮಾದ ಟೀಸರ್​ ರಿಲೀಸ್​ ಆಗಬಹುದು ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ, ಅಂದು ಯಾವುದೇ ಟೀಸರ್​ ರಿಲೀಸ್ ಆಗುವುದಿಲ್ಲ ಎನ್ನುವ ಮಾತನ್ನು ಯಶ್​ ಹೇಳಿದ್ದಾರೆ. ಬೆಂಗಳೂರಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯಶ್​, ‘ಈ ಬಾರಿ ಮತ್ತೆ ಕೊವಿಡ್​ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಅಭಿಮಾನಿಗಳು ಬಂದು ಬರ್ತ್​​ಡೇ ಆಚರಣೆ ಮಾಡುವುದು ಸರಿಯಲ್ಲ ಅನಿಸುತ್ತದೆ. ಎಲ್ಲರೂ ಎಲ್ಲಿದ್ದಿರೋ ಅಲ್ಲಿಂದಲೇ ವಿಶ್​ ಮಾಡಿ ಸಾಕು’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡರು. ಅದೇ ರೀತಿ ಟೀಸರ್​ ರಿಲೀಸ್​ ವಿಚಾರಕ್ಕೆ ಸಂಬಂಧಿಸಿದಂತೆಯೂ ಯಶ್​ ಮಾತನಾಡಿದರು.

ಇದನ್ನೂ ಓದಿ: ಯಶ್​ ಜತೆಗಿನ ಸೆಲ್ಫಿಗಾಗಿ ರಾಧಿಕಾ ಇಷ್ಟು ಕಷ್ಟಪಡಬೇಕಾ? ಇಲ್ಲಿವೆ ಫನ್ನಿ ಫೋಟೋಗಳು

KGF: ಯಶ್​ ನಟನೆಯ ‘ಕೆಜಿಎಫ್’​ಗೆ 3 ವರ್ಷ; ಈ ಚಿತ್ರ ತೆರೆಕಂಡ ನಂತರ ಆದ ಬದಲಾವಣೆಗಳೇನು?

Follow us on

Click on your DTH Provider to Add TV9 Kannada