ನಂದಿಗಿರಿಧಾಮದಲ್ಲಿ ಕ್ರಿಸ್ಮಸ್ ಆಚರಣೆಗೆ ಬ್ರೇಕ್; ವೀಕೆಂಡ್ನಲ್ಲಿ ಗಿರಿಧಾಮ ಬಂದ್ ಮಾಡಿದ ಹಿನ್ನಲೆ ಪ್ರವಾಸಿಗರ ಪರದಾಟ
ಇಂದು ರಜೆ ದಿನ ಹಾಗೂ ಕ್ರಿಸ್ಮಸ್ ದಿನಾಚರಣೆ ಹಿನ್ನಲೆ ಬಿಡುವು ಮಾಡಿಕೊಂಡ ರಾಜಧಾನಿ ಬೆಂಗಳೂರಿನ ಜನ, ನಂದಿಗಿರಿಧಾಮದತ್ತ ಆಗಮಿಸಿ ಗಿರಿಧಾಮದ ಮೇಲೆ ಕ್ರಿಸ್ಮಸ್ ಆಚರಣೆ ಮಾಡುವ ತಯಾರಿಯಲ್ಲಿದ್ದರು. ಆದರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಭೀತಿ ಹಿನ್ನಲೆ ನಂದಿಗಿರಿಧಾಮ ಬಂದ್ ಮಾಡಿದೆ.
ಚಿಕ್ಕಬಳ್ಳಾಪುರ: ವಿಶ್ವಪ್ರಸಿದ್ಧ ಪ್ರವಾಸಿತಾಣ, ಪ್ರಕೃತಿ ಪ್ರೀಯರ ಅಚ್ಚು ಮೆಚ್ಚಿನ ತಾಣ, ಅದರಲ್ಲೂ ಪ್ರೇಮಿಗಳ ಸೌಧ ಎಂದೇ ಖ್ಯಾತಿಯಾಗಿರುವ ನಂದಿಗಿರಿಧಾಮದಲ್ಲಿ ಕ್ರಿಸ್ಮಸ್ ಆಚರಣೆಗೆ ಆಗಮಿಕಿಸಿದ ಜೋಡಿಗಳು, ನಂದಿಗಿರಿಧಾಮ ಬಂದ್ ಹಿನ್ನಲೆ ರಸ್ತೆ ಬದಿಯೆ ಕ್ರಿಸ್ಮಸ್ ಶುಭ ಕೊರಿ ಕ್ರಿಸ್ಮಸ್ ಆಚರಿಸಿಕೊಂಡ ಪ್ರಸಂಗ ನಡೆಯಿತು. ಚುಮು ಚುಮು ಕೊರೆಯುವ ಚಳಿ, ಸಂಗಾತಿಯ ಜೊತೆ ಬೈಕ್ ಕಾರುಗಳಲ್ಲಿ ನಂದಿಗಿರಿಧಾಮಕ್ಕೆ ಆಗಮಿಸಿರುವ ಪ್ರವಾಸಿಗರು, ಅತ್ತ ದರಿ ಇತ್ತ ಪುಲಿ ಎನ್ನುವ ಹಾಗೆ ಗಿರಿಧಾಮದ ರಸ್ತೆಗಳಲ್ಲಿ ಪರದಾಡುತ್ತಿದ್ದಾರೆ. ವೀಕೆಂಡ್ನಲ್ಲಿ ಗಿರಿಧಾಮ ಬಂದ್ ಮಾಡಿದ ಹಿನ್ನಲೆ ಪ್ರವಾಸಿಗರು ಸರ್ಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇಂದು ರಜೆ ದಿನ ಹಾಗೂ ಕ್ರಿಸ್ಮಸ್ ದಿನಾಚರಣೆ ಹಿನ್ನಲೆ ಬಿಡುವು ಮಾಡಿಕೊಂಡ ರಾಜಧಾನಿ ಬೆಂಗಳೂರಿನ ಜನ, ನಂದಿಗಿರಿಧಾಮದತ್ತ ಆಗಮಿಸಿ ಗಿರಿಧಾಮದ ಮೇಲೆ ಕ್ರಿಸ್ಮಸ್ ಆಚರಣೆ ಮಾಡುವ ತಯಾರಿಯಲ್ಲಿದ್ದರು. ಆದರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಭೀತಿ ಹಿನ್ನಲೆ ನಂದಿಗಿರಿಧಾಮ ಬಂದ್ ಮಾಡಿದ ಕಾರಣ ಪ್ರವಾಸಿಗರು, ಅದರಲ್ಲೂ ಪ್ರೇಮಿಗಳು ರಸ್ತೆಯಲ್ಲಿ ಪರದಾಡುತ್ತಿದ್ದಾರೆ.
ಇದನ್ನೂ ಓದಿ:
Christmas 2021: ಜಗತ್ತಿನ ವಿವಿಧ ದೇಶಗಳಲ್ಲಿ ಕ್ರಿಸ್ಮಸ್ಗೆ ತಯಾರಿಸುವ ತಿಂಡಿಗಳು ಯಾವುದೆಂದು ಗೊತ್ತಾ? ಇಲ್ಲಿದೆ ಮಾಹಿತಿ