KGF: ಯಶ್ ನಟನೆಯ ‘ಕೆಜಿಎಫ್’ಗೆ 3 ವರ್ಷ; ಈ ಚಿತ್ರ ತೆರೆಕಂಡ ನಂತರ ಆದ ಬದಲಾವಣೆಗಳೇನು?
ಪ್ರಶಾಂತ್ ನೀಲ್ ಅವರು ‘ಉಗ್ರಂ’ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದರು. ಆ ಬಳಿಕ ಅವರು ಕೈಗೆತ್ತಿಕೊಂಡಿದ್ದು ‘ಕೆಜಿಎಫ್’ ಸಿನಿಮಾ. 2018ರ ಡಿಸೆಂಬರ್ 21ರಂದು ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗಿ ಧೂಳೆಬ್ಬಿಸಿತ್ತು.
ಪ್ರಶಾಂತ್ ನೀಲ್ (Prashanth Neel) ನಿರ್ದೇಶನದ, ಯಶ್ (yash)ನಟನೆಯ, ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ‘ಕೆಜಿಎಫ್’ (KGF) ಸಿನಿಮಾ ತೆರೆಗೆ ಬಂದು ಇಂದಿಗೆ (ಡಿಸೆಂಬರ್ 21) ಮೂರು ವರ್ಷ ಕಳೆದಿದೆ. ಈ ಸಿನಿಮಾ ರಿಲೀಸ್ ಆದ ನಂತರದಲ್ಲಿ ಕನ್ನಡ ಚಿತ್ರರಂಗವನ್ನು ಪರಭಾಷಿಕರು ನೋಡುವ ದೃಷ್ಟಿ ಬದಲಾಗಿದೆ. ಈ ವಿಶೇಷ ದಿನವನ್ನು ‘ಕೆಜಿಎಫ್’ ತಂಡ ನೆನಪು ಮಾಡಿಕೊಂಡಿದೆ. ಹಾಗಾದರೆ, ಈ ಚಿತ್ರ ತೆರೆಗೆಬಂದ ನಂತರದಲ್ಲಿ ಏನೆಲ್ಲ ಆಯಿತು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಪ್ರಶಾಂತ್ ನೀಲ್ ಅವರು ‘ಉಗ್ರಂ’ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದರು. ಆ ಬಳಿಕ ಅವರು ಕೈಗೆತ್ತಿಕೊಂಡಿದ್ದು ‘ಕೆಜಿಎಫ್’ ಸಿನಿಮಾ. ಈ ಚಿತ್ರದ ಟ್ರೇಲರ್ ಸಾಕಷ್ಟು ಸದ್ದು ಮಾಡಿತ್ತು. ಹೀಗಾಗಿ, ಸಿನಿಮಾ ಬಗ್ಗೆ ದೊಡ್ಡ ಮಟ್ಟದಲ್ಲಿ ಟಾಕ್ ಸೃಷ್ಟಿ ಆಗಿತ್ತು. 2018ರ ಡಿಸೆಂಬರ್ 21ರಂದು ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರ ರಿಲೀಸ್ ಆಗಿ ಧೂಳೆಬ್ಬಿಸಿತ್ತು.
ಯಶ್ ನಟನೆಯ ಈ ಸಿನಿಮಾದ ಎದುರಿನಲ್ಲಿ ಶಾರುಖ್ ಅಭಿನಯದ ‘ಜೀರೋ’ ಚಿತ್ರ ತೆರೆಕಂಡಿತ್ತು. ಆದರೂ ‘ಕೆಜಿಎಫ್’ ಜಗ್ಗಲಿಲ್ಲ. ಮೊದಲ ದಿನವೇ ಹಿಂದಿ ಅವತರಣಿಕೆಯಿಂದ ಈ ಚಿತ್ರಕ್ಕೆ 2.10 ಕೋಟಿ ರೂ. ಆದಾಯ ಹರಿದುಬಂದಿತ್ತು. 8 ವಾರಗಳ ಕಾಲ ಪ್ರದರ್ಶನ ಕಂಡ ಈ ಸಿನಿಮಾ ಹಿಂದಿ ವರ್ಷನ್ನಿಂದ ಒಟ್ಟಾರೆ ಗಳಿಸಿದ್ದ 44 ಕೋಟಿ ರೂಪಾಯಿ. ಕನ್ನಡದಲ್ಲಿ ತಯಾರಾದ ಒಂದು ಸಿನಿಮಾ ಹಿಂದಿಗೆ ಡಬ್ ಆಗಿ ತೆರೆಕಂಡು ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದು ಅದು ಇದೇ ಮೊದಲು.
Love is pouring in from all over! Watch #KGFChapter1 only on @PrimeVideoIN.https://t.co/jo8LIVtv8lhttps://t.co/htaZSsiIW1https://t.co/rVu3xYQfsQhttps://t.co/0nrNMEP28whttps://t.co/HFlwQLaDU6#3YearsforKGF pic.twitter.com/0SRhhi8wti
— Hombale Films (@hombalefilms) December 21, 2021
‘ಕೆಜಿಎಫ್’ ತೆರೆಕಂಡ ನಂತರದಲ್ಲಿ ಇಡೀ ದೇಶ ಕನ್ನಡ ಚಿತ್ರರಂಗದತ್ತ ಮುಖ ಮಾಡಿದೆ. ಯಶ್ ಖ್ಯಾತಿ ಹೆಚ್ಚಾಗಿದೆ. ಪ್ರಶಾಂತ್ ನೀಲ್ ವೃತ್ತಿ ಜೀವನಕ್ಕೆ ದೊಡ್ಡ ಮೈಲೇಜ್ ನೀಡಿದ್ದು ‘ಕೆಜಿಎಫ್’ ಸಿನಿಮಾ. ಇದಾದ ಬಳಿಕ ಪ್ರಶಾಂತ್ ನೀಲ್, ‘ಕೆಜಿಎಫ್ 2’ ಚಿತ್ರವನ್ನು ಕೈಗೆತ್ತಿಕೊಂಡು ಶೂಟಿಂಗ್ ಪೂರ್ಣಗೊಳಿಸಿದ್ದಾರೆ. ‘ಕೆಜಿಎಫ್’ಗೆ ಸಿಕ್ಕ ಯಶಸ್ಸಿನಿಂದಾಗಿ ಬಾಲಿವುಡ್ನ ಸ್ಟಾರ್ ನಟರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ‘ಕೆಜಿಎಫ್ 2’ಗೆ ಬಣ್ಣ ಹಚ್ಚೋಕೆ ಒಪ್ಪಿಕೊಂಡರು. ‘ಕೆಜಿಎಫ್’ ಕನ್ನಡದಲ್ಲಿ ಸೃಷ್ಟಿಸಿದ ಅನೇಕ ದಾಖಲೆಗಳನ್ನು ಯಾರಿಂದಲೂ ಪುಡಿ ಮಾಡೋಕೆ ಸಾಧ್ಯವಾಗಿಲ್ಲ. ಇದಕ್ಕೆ ‘ಕೆಜಿಎಫ್ 2’ ಚಿತ್ರವೇ ತೆರೆಗೆ ಬರಬೇಕು ಎನ್ನುವ ಅಭಿಪ್ರಾಯ ಅನೇಕರದ್ದು.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ‘ಕೆಜಿಎಫ್ 2’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ವಸಿಷ್ಠ ಸಿಂಹ, ಪ್ರಕಾಶ್ ರಾಜ್, ಸಂಜಯ್ ದತ್, ರವೀನಾ ಟಂಡನ್ ಮೊದಲಾದವರು ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಇದನ್ನೂ ಓದಿ: ‘ಪುಷ್ಪ ಸಿನಿಮಾ 10 ಕೆಜಿಎಫ್ಗೆ ಸಮ ಎಂದವರು ಈಗೆಲ್ಲಿ ಹೋದ್ರಿ?’; ಟ್ರೋಲ್ ಆದ ಅಲ್ಲು ಅರ್ಜುನ್ ಸಿನಿಮಾ
‘ಕೆಜಿಎಫ್’ ವರ್ಸಸ್ ‘ಪುಷ್ಪ’; ಮೊದಲ ದಿನ ಹಿಂದಿ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಗಳು ಗಳಿಸಿದ್ದೆಷ್ಟು?