- Kannada News Photo gallery World Saree Day 2021 here is Sandalwood Bollywood Tollywood celebrities in Saree see pics
World Saree Day 2021: ಸೀರೆ ಧರಿಸಿ ಸಖತ್ ಸ್ಟೈಲಿಶ್ ಆಗಿ ಮಿಂಚುತ್ತಿರುವ ತಾರೆಯರು; ಅಪರೂಪದ ಚಿತ್ರಗಳು ಇಲ್ಲಿವೆ
ಡಿಸೆಂಬರ್ 21ರಂದು ವಿಶ್ವ ಸೀರೆ ದಿನವನ್ನಾಗಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಚಿತ್ರರಂಗದ ತಾರೆಯರು ನವೀನ ಬಗೆಯ ಸೀರೆ ಧರಿಸಿ, ಸಖತ್ ಸ್ಟೈಲಿಶ್ ಆಗಿ ಮಿಂಚುತ್ತಾ ಎಲ್ಲರ ಗಮನ ಸೆಳೆಯುತ್ತಾರೆ. ಸ್ಯಾಂಡಲ್ವುಡ್, ಬಾಲಿವುಡ್ ಸೇರಿದಂತೆ ವಿವಿಧ ಚಿತ್ರರಂಗದ ತಾರೆಯರು ಸಾಂಪ್ರದಾಯಿಕ ದಿರಿಸಿನಲ್ಲಿ ಕಾಣಿಸಿಕೊಂಡಿರುವ ಅಪರೂಪದ ಚಿತ್ರಗಳು ಇಲ್ಲಿವೆ.
Updated on: Dec 21, 2021 | 11:45 AM

ಡಿಸೆಂಬರ್ 21ರಂದು ವಿಶ್ವ ಸೀರೆ ದಿನವನ್ನಾಗಿ ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಎಲ್ಲಾ ಚಿತ್ರರಂಗದ ತಾರೆಯರು ಪ್ರಮುಖ ಕಾರ್ಯಕ್ರಮಗಳಲ್ಲಿ ನವೀನ ಬಗೆಯ ಸೀರೆ ಧರಿಸಿ ಎಲ್ಲರ ಗಮನ ಸೆಳೆಯುತ್ತಾರೆ. ಕನ್ನಡ ಸೇರಿದಂತೆ ವಿವಿಧ ಚಿತ್ರರಂಗದ ತಾರೆಯರು ಸಾಂಪ್ರದಾಯಿಕ ದಿರಿಸಿನಲ್ಲಿ ಕಾಣಿಸಿಕೊಂಡಿರುವ ಅಪರೂಪದ ಚಿತ್ರಗಳು ಇಲ್ಲಿವೆ.

ಸ್ಯಾಂಡಲ್ವುಡ್ ತಾರೆ ರಚಿತಾ ರಾಮ್ ಚಿತ್ರಗಳಲ್ಲೂ ಡಿಗ್ಲಾಮ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದಿದೆ. ಇದರ ಹೊರತಾಗಿ ಅವರು ಸಾಂಪ್ರದಾಯಿಕ ದಿರಿಸಿನಲ್ಲಿ ಫೋಟೋಶೂಟ್ ಮಾಡಿಸಿ ಆಗಾಗ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಚಂದನವನದ ಮತ್ತೋರ್ವ ಬೆಡಗಿ ಆಶಿಕಾ ರಂಗನಾಥ್ ಕೂಡ ಟ್ರೆಡಿಷನಲ್ ಅವತಾರದಲ್ಲಿ ಮಿಂಚುತ್ತಿರುವ ಚಿತ್ರಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.

ಪ್ರಸ್ತುತ ಸ್ಯಾಂಡಲ್ವುಡ್ನಲ್ಲಿ ಮುಂಚೂಣಿಯಲ್ಲಿರುವ ನಟಿಯರಲ್ಲಿ ಒಬ್ಬರಾದ ಅದಿತಿ ಪ್ರಭುದೇವ ಕಳೆದ ವರ್ಷ ವಿಶೇಷ ಸೀರೆಯೊಂದನ್ನು ಧರಿಸಿ ಫೋಟೋಶೂಟ್ ಮಾಡಿಸಿದ್ದರು.

ಟಾಲಿವುಡ್ ತಾರೆ ಸಮಂತಾ ಸ್ಟೈಲ್ ಐಕಾನ್ ಎಂದರೂ ತಪ್ಪಾಗಲಾರದು. ಸಾಂಪ್ರದಾಯಿಕ ಸೀರೆ ಧರಿಸಿದರೂ ಅದರಲ್ಲಿ ಹೊಸ ಪ್ರಯೋಗವನ್ನು ಮಾಡಿ ಅವರು ಎಲ್ಲರ ಗಮನ ಸೆಳೆಯುತ್ತಾರೆ.

ಕನ್ನಡ ಬೆಡಗಿ ಶ್ರೀಲೀಲಾ ಪ್ರಸ್ತುತ ಟಾಲಿವುಡ್ನಲ್ಲೂ ಸಕ್ರಿಯರಾಗಿದ್ದಾರೆ. ಅವರೂ ಕೂಡ ಸೀರೆ ತೊಟ್ಟು ಫೋಟೋಶೂಟ್ ಮಾಡಿಸಿ ಎಲ್ಲರ ಗಮನ ಸೆಳೆಯುವುದಿದೆ.

ಇತ್ತೀಚೆಗೆ ಬಾಲಿವುಡ್ ತಾರಾ ಜೋಡಿ ಕತ್ರಿನಾ ಕೈಫ್- ಹಾಗೂ ವಿಕ್ಕಿ ಕೌಶಲ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಆಗ ಕತ್ರಿನಾ ಧರಿಸಿದ್ದ ಈ ಸೀರೆಗಳು ಫ್ಯಾಶನ್ ಪ್ರಿಯರ ಮನಗೆದ್ದಿತ್ತು.

ಕನ್ನಡ ಮೂಲದ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಟಾಲಿವುಡ್, ಬಾಲಿವುಡ್ನಲ್ಲಿ ಬಹುಬೇಡಿಕೆಯ ನಟಿ. ರಶ್ಮಿಕಾ ಗೀತ ಗೋವಿಂದಂ ಸೇರಿದಂತೆ ಅನೇಕ ಚಿತ್ರಗಳಲ್ಲಿ ಮಾದಕವಾಗಿ ಸೇರೆ ಧರಿಸಿ ಪಡ್ಡೆಹುಡುಗರ ನಿದ್ದೆಗೆಡಿಸಿದ್ದರು.

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಕೂಡ ಸ್ಟೈಲಿಶ್ ಆಗಿ ಟ್ರೆಡಿಷನಲ್ ಉಡುಗೆಗಳನ್ನು ತೊಟ್ಟು ಫೋಟೋಶೂಟ್ ಮಾಡಿಸಿಕೊಳ್ಳುವುದಿದೆ.

ಆಲಿಯಾ ಭಟ್ ಕೂಡ ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುವುದರಿಂದ ಹಿಂದೆ ಬಿದ್ದಿಲ್ಲ. ಅವರು ಸೀರೆ ತೊಟ್ಟು ಕಾಣಿಸಿಕೊಂಡ ಚಿತ್ರ ಇಲ್ಲಿದೆ.

ನಟಿ ಜೆನಿಲಿಯಾ ದೇಶ್ಮುಖ್ ಸಾಂಪ್ರದಾಯಿಕ ದಿರಿಸಿನಲ್ಲಿ ಕಾಣಿಸಿಕೊಂಡಿರುವುದು.

ಕಾಲಿವುಡ್ ನಟಿ ಮಾಳವಿಕಾ ಮೋಹನನ್ ಸಾಂಪ್ರದಾಯಿಕ ದಿರಿಸಿನಲ್ಲಿ ಕಾಣಿಸಿಕೊಂಡಿದ್ದು ಹೀಗೆ.



















