AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: 5 ಶತಕ, 6 ಅರ್ಧಶತಕ: ದಕ್ಷಿಣ ಆಫ್ರಿಕಾದಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ಹೇಗಿದೆ?: ಇಲ್ಲಿದೆ ಅಂಕಿಅಂಶ

Virat Kohli in South Africa: ದಕ್ಷಿಣ ಆಫ್ರಿಕಾದಲ್ಲಿ ಈ ಹಿಂದೆ ವಿರಾಟ್ ಕೊಹ್ಲಿ ಪ್ರದರ್ಶನ ಹೇಗಿತ್ತು ಎಂಬ ಅಂಕಿಅಂಶವನ್ನು ನೋಡಿದರೆ, ಇಲ್ಲಿ ಕಿಂಗ್ ಕೊಹ್ಲಿಯದ್ದೇ ಪಾರುಪತ್ಯ. ಆಫ್ರಿಕಾನ್ನರ ನಾಡಿನಲ್ಲಿ ಇವರು ಒಟ್ಟು 6 ಶತಕ ಮತ್ತು 5 ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ.

TV9 Web
| Updated By: Vinay Bhat

Updated on: Dec 21, 2021 | 10:25 AM

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 26 ರಂದು ಸೆಂಚುರಿಯನ್​ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ಪಡೆ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಟೀಮ್ ಇಂಡಿಯಾಟ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ.

1 / 7
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅನೇಕ ವಿಚಾರಗಳಿಂದ ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲಿದೆ. ಒಂದು ಕಡೆ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿದ್ದರೆ ಮತ್ತೊಂದೆಡೆ ಆಫ್ರಿಕಾಕ್ಕೆ ತೆರಳುವ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಆಡಿದ ಮಾತು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಹೀಗೆ ಅನೇಕ ಕಾರಣಗಳಿಂದ ಕೊಹ್ಲಿ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

2 / 7
ಹರಿಣಗಳ ನಾಡಲ್ಲಿ ಈ ಹಿಂದೆ ವಿರಾಟ್ ಪ್ರದರ್ಶನ ಹೇಗಿತ್ತು ಎಂಬ ಅಂಕಿಅಂಶವನ್ನು ನೋಡಿದರೆ, ಇಲ್ಲಿ ಕಿಂಗ್ ಕೊಹ್ಲಿಯದ್ದೇ ಪಾರುಪತ್ಯ. ಆಫ್ರಿಕಾನ್ನರ ನಾಡಿನಲ್ಲಿ ಇವರು ಒಟ್ಟು 6 ಶತಕ ಮತ್ತು 5 ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ.

3 / 7
ದ. ಆಫ್ರಿಕಾದಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 10 ಇನ್ನಿಂಗ್ಸ್​ಗಳಲ್ಲಿ ತಲಾ 2 ಶತಕ ಮತ್ತು ಅರ್ಧಶತಕ ಬಾರಿಸಿದ್ದಾರೆ. ಗರಿಷ್ಠ ಸ್ಕೋರ್ 153 ರನ್ ಆಗಿದೆ. ಒಟ್ಟು 558 ರನ್ ಕಲೆಹಾಕಿದ್ದಾರೆ.

4 / 7
ಇನ್ನು ಏಕದಿನ ಪಂದ್ಯಗಳ ಅಂಕಿಅಂಶ ನೋಡುವುದಾದರೆ, 17 ಓಡಿಐ ಆಡಿದ್ದಾರೆ. ಇದರಲ್ಲಿ 3 ಶತಕ ಮತ್ತು 4 ಅರ್ಧಶತಕ ಸೇರಿವೆ. ಅಜೇಯ 160 ರನ್ ಗರಿಷ್ಠ ಸ್ಕೋರ್ ಆಗಿದೆ. ಒಟ್ಟು 877 ರನ್ ಚಚ್ಚಿದ್ದಾರೆ. ಹೀಗೆ ಆಫ್ರಿಕಾದಲ್ಲಿ ಕೊಹ್ಲಿ ದಾಖಲೆ ಚೆನ್ನಾಗಿಯೇ ಇದೆ.

5 / 7
ಇನ್ನು ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ತಲುಪುವ ಹೊಸ್ತಿಲಲ್ಲಿದ್ದಾರೆ. ಅದಕೂಡ ಕೋಚ್ ರಾಹುಲ್ ದ್ರಾವಿಡ್ ಅವರ ಸಾಧನೆ ಹಿಂದಿಕ್ಕಿ ಎಂಬುದು ವಿಶೇಷ. ಆಫ್ರಿಕಾ ವಿರುದ್ಧದ 12 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಈವರೆಗೆ 59.72 ಸರಾಸರಿಯಲ್ಲಿ 1075 ರನ್ ಕಲೆಹಾಕಿದ್ದಾರೆ.

6 / 7
ಕೊಹ್ಲಿಗಿಂತ ಅಧಿಕವಾಗಿ ಮೂರು ಭಾರತೀಯ ಬ್ಯಾಟರ್ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ 1741 ರನ್, ವಿರೇಂದ್ರ ಸೆಹ್ವಾಗ್ 1306 ರನ್ ಮತ್ತು ರಾಹುಲ್ ದ್ರಾವಿಡ್ 1252 ರನ್ ಕಲೆಹಾಕಿದ್ದಾರೆ. ದ. ಆಫ್ರಿಕಾ ವಿರುದ್ಧ ಭಾರತ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇಲ್ಲಿ ಕೊಹ್ಲಿ 232 ರನ್ ಬಾರಿಸಿದರೆ ಕೋಚ್ ರಾಹುಲ್ ದ್ರಾವಿಡ್ ಹಾಗೂ ವಿರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಅಳಿಸಿ ಹಾಕಿ ಎರಡನೇ ಸ್ಥಾನಕ್ಕೇರಲಿದ್ದಾರೆ.

7 / 7
Follow us
ಗ್ಯಾರಂಟಿ ಯೋಜನೆಗಳಿಂದ ಮಠಕ್ಕೆ ಪೆಟ್ಟು, ಖರ್ಚಿಗೆ ಹೊರೆ: ದಿಂಗಾಲೇಶ್ವರ ಶ್ರೀ

ಏಕಕಾಲದಲ್ಲಿ ಕುಸಿದು ಬಿದ್ದ 6 ಮನೆಗಳು, ಹಲವರು ಸಿಲುಕಿರುವ ಶಂಕೆ

ನದಿಯಲ್ಲಿ ಕೊಚ್ಚಿ ಹೋದ ಸೇತುವೆ:ಬೆಳಗಾವಿ-ಗೋವಾ ರಸ್ತೆ ಸಂಚಾರ ಬಂದ್

ಹಾಸನ ಜಿಲ್ಲಾಸ್ಪತ್ರೆ ಸೆಕ್ಯುರಿಟಿಗಾರ್ಡ್ ಕ್ರೌರ್ಯ:ಯುವಕನ ಮನಸೋ ಇಚ್ಚೇ ಥಳಿತ

ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ

ಫೀನಿಕ್ಸ್ ಸಿನಿಮಾ ಶೂಟಿಂಗ್ ವೇಳೆ ಅವಘಡ; ಪ್ರಾಣಾಪಾಯದಿಂದ ಪಾರಾದ ನಟ ಭಾಸ್ಕರ್

ವಯನಾಡು: ಪ್ರಿಯಾಂಕಾ ಗಾಂಧಿಯಿಂದ ಉದ್ಘಾಟಗೊಳ್ಳುವ ಹೊತ್ತಲ್ಲೇ ಬಿದ್ದ ನಾಮಫಲಕ

ಮಳೆಯಲ್ಲೂ ಹುಲಿರಾಯ ಕೆರೆಯಲ್ಲಿ ಸ್ವಿಮ್ಮಿಂಗ್: ಅಪರೂಪದ ವಿಡಿಯೋ ನೋಡಿ

ಕಾಶಿ ವಿಶ್ವನಾಥ ದೇವಾಲಯದ ನಿರ್ಬಂಧಿತ ಪ್ರದೇಶದಲ್ಲಿ ತೇಜ್​ಪ್ರತಾಪ್ ಯಾದವ್

ದೇವಿಮನೆ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ:ಕುಮಟಾ-ಶಿರಸಿ ಸಂಪರ್ಕ ಕಡಿತ!