- Kannada News Photo gallery Cricket photos Virat Kohli how he has performed in South Africa Here is the Kohli Tests and ODI stats in SA
Virat Kohli: 5 ಶತಕ, 6 ಅರ್ಧಶತಕ: ದಕ್ಷಿಣ ಆಫ್ರಿಕಾದಲ್ಲಿ ವಿರಾಟ್ ಕೊಹ್ಲಿ ಪ್ರದರ್ಶನ ಹೇಗಿದೆ?: ಇಲ್ಲಿದೆ ಅಂಕಿಅಂಶ
Virat Kohli in South Africa: ದಕ್ಷಿಣ ಆಫ್ರಿಕಾದಲ್ಲಿ ಈ ಹಿಂದೆ ವಿರಾಟ್ ಕೊಹ್ಲಿ ಪ್ರದರ್ಶನ ಹೇಗಿತ್ತು ಎಂಬ ಅಂಕಿಅಂಶವನ್ನು ನೋಡಿದರೆ, ಇಲ್ಲಿ ಕಿಂಗ್ ಕೊಹ್ಲಿಯದ್ದೇ ಪಾರುಪತ್ಯ. ಆಫ್ರಿಕಾನ್ನರ ನಾಡಿನಲ್ಲಿ ಇವರು ಒಟ್ಟು 6 ಶತಕ ಮತ್ತು 5 ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ.
Updated on: Dec 21, 2021 | 10:25 AM

ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 26 ರಂದು ಸೆಂಚುರಿಯನ್ನಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ಪಡೆ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಕಳೆದ ಮೂರು ದಿನಗಳಿಂದ ಟೀಮ್ ಇಂಡಿಯಾಟ ಆಟಗಾರರು ಮೈದಾನದಲ್ಲಿ ಬೆವರು ಹರಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅನೇಕ ವಿಚಾರಗಳಿಂದ ಎಲ್ಲರ ಕಣ್ಣು ವಿರಾಟ್ ಕೊಹ್ಲಿ ಮೇಲಿದೆ. ಒಂದು ಕಡೆ ಎರಡು ವರ್ಷಗಳಿಂದ ಶತಕದ ಬರ ಎದುರಿಸುತ್ತಿದ್ದರೆ ಮತ್ತೊಂದೆಡೆ ಆಫ್ರಿಕಾಕ್ಕೆ ತೆರಳುವ ಮುನ್ನ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕೊಹ್ಲಿ ಆಡಿದ ಮಾತು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಹೀಗೆ ಅನೇಕ ಕಾರಣಗಳಿಂದ ಕೊಹ್ಲಿ ಪ್ರದರ್ಶನ ಮಹತ್ವ ಪಡೆದುಕೊಂಡಿದೆ.

ಹರಿಣಗಳ ನಾಡಲ್ಲಿ ಈ ಹಿಂದೆ ವಿರಾಟ್ ಪ್ರದರ್ಶನ ಹೇಗಿತ್ತು ಎಂಬ ಅಂಕಿಅಂಶವನ್ನು ನೋಡಿದರೆ, ಇಲ್ಲಿ ಕಿಂಗ್ ಕೊಹ್ಲಿಯದ್ದೇ ಪಾರುಪತ್ಯ. ಆಫ್ರಿಕಾನ್ನರ ನಾಡಿನಲ್ಲಿ ಇವರು ಒಟ್ಟು 6 ಶತಕ ಮತ್ತು 5 ಅರ್ಧಶತಕ ಸಿಡಿಸಿ ಅಬ್ಬರಿಸಿದ್ದಾರೆ.

ದ. ಆಫ್ರಿಕಾದಲ್ಲಿ ಒಟ್ಟು 5 ಟೆಸ್ಟ್ ಪಂದ್ಯಗಳನ್ನು ಆಡಿರುವ ಕೊಹ್ಲಿ 10 ಇನ್ನಿಂಗ್ಸ್ಗಳಲ್ಲಿ ತಲಾ 2 ಶತಕ ಮತ್ತು ಅರ್ಧಶತಕ ಬಾರಿಸಿದ್ದಾರೆ. ಗರಿಷ್ಠ ಸ್ಕೋರ್ 153 ರನ್ ಆಗಿದೆ. ಒಟ್ಟು 558 ರನ್ ಕಲೆಹಾಕಿದ್ದಾರೆ.

ಇನ್ನು ಏಕದಿನ ಪಂದ್ಯಗಳ ಅಂಕಿಅಂಶ ನೋಡುವುದಾದರೆ, 17 ಓಡಿಐ ಆಡಿದ್ದಾರೆ. ಇದರಲ್ಲಿ 3 ಶತಕ ಮತ್ತು 4 ಅರ್ಧಶತಕ ಸೇರಿವೆ. ಅಜೇಯ 160 ರನ್ ಗರಿಷ್ಠ ಸ್ಕೋರ್ ಆಗಿದೆ. ಒಟ್ಟು 877 ರನ್ ಚಚ್ಚಿದ್ದಾರೆ. ಹೀಗೆ ಆಫ್ರಿಕಾದಲ್ಲಿ ಕೊಹ್ಲಿ ದಾಖಲೆ ಚೆನ್ನಾಗಿಯೇ ಇದೆ.

ಇನ್ನು ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ತಲುಪುವ ಹೊಸ್ತಿಲಲ್ಲಿದ್ದಾರೆ. ಅದಕೂಡ ಕೋಚ್ ರಾಹುಲ್ ದ್ರಾವಿಡ್ ಅವರ ಸಾಧನೆ ಹಿಂದಿಕ್ಕಿ ಎಂಬುದು ವಿಶೇಷ. ಆಫ್ರಿಕಾ ವಿರುದ್ಧದ 12 ಟೆಸ್ಟ್ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಈವರೆಗೆ 59.72 ಸರಾಸರಿಯಲ್ಲಿ 1075 ರನ್ ಕಲೆಹಾಕಿದ್ದಾರೆ.

ಕೊಹ್ಲಿಗಿಂತ ಅಧಿಕವಾಗಿ ಮೂರು ಭಾರತೀಯ ಬ್ಯಾಟರ್ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡೂಲ್ಕರ್ 1741 ರನ್, ವಿರೇಂದ್ರ ಸೆಹ್ವಾಗ್ 1306 ರನ್ ಮತ್ತು ರಾಹುಲ್ ದ್ರಾವಿಡ್ 1252 ರನ್ ಕಲೆಹಾಕಿದ್ದಾರೆ. ದ. ಆಫ್ರಿಕಾ ವಿರುದ್ಧ ಭಾರತ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಇಲ್ಲಿ ಕೊಹ್ಲಿ 232 ರನ್ ಬಾರಿಸಿದರೆ ಕೋಚ್ ರಾಹುಲ್ ದ್ರಾವಿಡ್ ಹಾಗೂ ವಿರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಅಳಿಸಿ ಹಾಕಿ ಎರಡನೇ ಸ್ಥಾನಕ್ಕೇರಲಿದ್ದಾರೆ.
