‘ಕೆಜಿಎಫ್’ ವರ್ಸಸ್ ‘ಪುಷ್ಪ’; ಮೊದಲ ದಿನ ಹಿಂದಿ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರಗಳು ಗಳಿಸಿದ್ದೆಷ್ಟು?
Pushpa Box Office Collection: ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರ ವಿಮರ್ಶೆಯ ದೃಷ್ಟಿಯಿಂದ ಸೊರಗಿದೆ. ಆದರೂ ಮೊದಲ ದಿನ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ.
ಎಲ್ಲ ಸ್ಟಾರ್ ನಟರು ಈಗ ಪ್ಯಾನ್ ಇಂಡಿಯಾ ಸಿನಿಮಾಗಳತ್ತ ಗಮನ ಹರಿಸಿದ್ದಾರೆ. ‘ರಾಕಿಂಗ್ ಸ್ಟಾರ್’ ಯಶ್ (Yash) ಅಭಿನಯದ ‘ಕೆಜಿಎಫ್: ಚಾಪ್ಟರ್ 1’ (KGF chapter 1) ಚಿತ್ರ 2018ರಲ್ಲಿ ದೇಶಾದ್ಯಂತ ಬಿಡುಗಡೆಯಾಗಿ ಧೂಳೆಬ್ಬಿಸಿತ್ತು. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಮತ್ತು ತಮಿಳಿನಲ್ಲಿ ಆ ಚಿತ್ರ ತೆರೆಕಂಡಿತ್ತು. ಈಗ ಅದೇ ರೀತಿ ಅಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ’ ಸಿನಿಮಾ (Pushpa Movie) ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಈ ಸಿನಿಮಾಗಳು ಮೊದಲ ದಿನವೇ ಉತ್ತಮ ಗಳಿಕೆ ಮಾಡಿವೆ. ಹಿಂದಿ ವರ್ಷನ್ನಲ್ಲಿ ‘ಪುಷ್ಪ’ ಮತ್ತು ‘ಕೆಜಿಎಫ್’ ಸಿನಿಮಾಗಳ ಆದಾಯವನ್ನು ಹೋಲಿಕೆ ಮಾಡಲಾಗುತ್ತಿದೆ. ಹಿಂದಿ ಪ್ರೇಕ್ಷಕರು ಫಸ್ಟ್ ಡೇ ಯಾವ ಚಿತ್ರಕ್ಕೆ ಹೆಚ್ಚು ಮನ ಸೋತಿದ್ದಾರೆ? ಇಲ್ಲಿದೆ ಸಂಪೂರ್ಣ ವಿವರ..
2018ರ ಡಿ.21ರಂದು ‘ಕೆಜಿಎಫ್: ಚಾಪ್ಟರ್ 1’ ಚಿತ್ರ ಬಿಡುಗಡೆ ಆಗಿತ್ತು. ಯಶ್ ನಟನೆಯ ಈ ಸಿನಿಮಾದ ಎದುರಿನಲ್ಲಿ ಶಾರುಖ್ ಅಭಿನಯದ ‘ಜೀರೋ’ ಚಿತ್ರ ತೆರೆಕಂಡಿತ್ತು. ಆದರೂ ‘ಕೆಜಿಎಫ್’ ಜಗ್ಗಲಿಲ್ಲ. ಮೊದಲ ದಿನವೇ ಹಿಂದಿ ಅವತರಣಿಕೆಯಿಂದ ಈ ಚಿತ್ರಕ್ಕೆ 2.10 ಕೋಟಿ ರೂ. ಆದಾಯ ಹರಿದುಬಂದಿತ್ತು. 8 ವಾರಗಳ ಕಾಲ ಪ್ರದರ್ಶನ ಕಂಡ ಈ ಸಿನಿಮಾ ಹಿಂದಿ ವರ್ಷನ್ನಿಂದ ಒಟ್ಟಾರೆ ಗಳಿಸಿದ್ದ 44 ಕೋಟಿ ರೂಪಾಯಿ!
‘ಕೆಜಿಎಫ್ 1’ ಚಿತ್ರಕ್ಕೆ ಹೋಲಿಸಿದರೆ ‘ಪುಷ್ಪ’ ಗಳಿಕೆ ಕೊಂಚ ಜಾಸ್ತಿ ಇದೆ. ಮೊದಲ ದಿನ ಈ ಸಿನಿಮಾದ ಹಿಂದಿ ಅವತರಣಿಕೆಗೆ ಅಂದಾಜು 3 ಕೋಟಿ ರೂಪಾಯಿ ಕಮಾಯಿ ಆಗಿದೆ ಎಂದು ವರದಿ ಆಗಿದೆ. ಈ ಸಿನಿಮಾವನ್ನು ಸರಿಯಾಗಿ ಪ್ರಚಾರ ಮಾಡಿಲ್ಲ ಎಂಬ ಆರೋಪ ಇದೆ. ಮಹಾರಾಷ್ಟ್ರದಲ್ಲಿ ಇನ್ನೂ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಆಸನ ಭರ್ತಿ ಮಾತ್ರ ಅವಕಾಶ ಇದೆ. ಅದರ ನಡುವೆಯೂ ‘ಪುಷ್ಪ’ ಚಿತ್ರ 3 ಕೋಟಿ ರೂಪಾಯಿ ಗಳಿಸಿದೆ. ಮುಂದಿನ ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗಬಹುದು ಎಂಬ ನಿರೀಕ್ಷೆ ಸೃಷ್ಟಿ ಆಗಿದೆ.
ವಿಮರ್ಶೆಯ ದೃಷ್ಟಿಯಿಂದ ‘ಪುಷ್ಪ’ ಚಿತ್ರ ಸೊರಗಿದೆ. ಅದ್ದೂರಿ ಮೇಕಿಂಗ್ ಮತ್ತು ಆ್ಯಕ್ಷನ್ ದೃಶ್ಯಗಳನ್ನು ಹೊರತುಪಡಿಸಿ ಈ ಸಿನಿಮಾದಲ್ಲಿ ಬೇರೇನೂ ಹೈಲೈಟ್ ಆಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಸಮಂತಾ ನರ್ತಿಸಿರುವ ‘ಹು ಅಂತೀಯಾ ಮಾವ.. ಊಹೂ ಅಂತಿಯಾ ಮಾವ..’ ಹಾಡು ಕೂಡ ಈ ಸಿನಿಮಾದ ಗೆಲುವಿಗೆ ಕಾರಣ ಆಗಿದೆ. ಅಲ್ಲು ಅರ್ಜುನ್ಗೆ ಜೋಡಿಯಾಗಿ ನಟಿಸಿರುವ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಈ ಚಿತ್ರದಿಂದ ಒಳ್ಳೆಯ ಮೈಲೇಜ್ ಸಿಕ್ಕಿದೆ.
ಇದನ್ನೂ ಓದಿ:
‘ಪುಷ್ಪ ಸಿನಿಮಾ 10 ಕೆಜಿಎಫ್ಗೆ ಸಮ ಎಂದವರು ಈಗೆಲ್ಲಿ ಹೋದ್ರಿ?’; ಟ್ರೋಲ್ ಆದ ಅಲ್ಲು ಅರ್ಜುನ್ ಸಿನಿಮಾ
ಮೊದಲ ದಿನವೇ ಲೀಕ್ ಆಯ್ತು ರಶ್ಮಿಕಾ, ಅಲ್ಲು ಅರ್ಜುನ್ ‘ಪುಷ್ಪ’ ಸಿನಿಮಾ; ಕಲೆಕ್ಷನ್ ಮೇಲೆ ಬೀಳಲಿದೆ ಪೆಟ್ಟು