‘ಪುನೀತ್​ ಅಣ್ಣ ಇಲ್ಲದೇ ನಾವು ತಬ್ಬಲಿ ಆಗಿದ್ದೇವೆ’: ಅಪ್ಪು ಹೇಳಿಕೊಟ್ಟ ಪಾಠಗಳ ಬಗ್ಗೆ ನಿಖಿಲ್​ ಮಾತು

Puneeth Rajkumar: ಯಾರಿಗೂ ಗೊತ್ತಾಗದ ರೀತಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಪುನೀತ್​ ರಾಜ್​ಕುಮಾರ್​​ ಅವರು ಎಲ್ಲರಿಗೂ ಮಾದರಿ ಆಗಿದ್ದಾರೆ. ಈ ಬಗ್ಗೆ ‘ರೈಡರ್​’ ಚಿತ್ರದ ಸುದ್ದಿಗೋಷ್ಠಿ ಬಳಿಕ ನಿಖಿಲ್​ ಕುಮಾರಸ್ವಾಮಿ ಮಾತನಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರು ಅಭಿಮಾನಿಗಳಿಗೆ ಮಾತ್ರವಲ್ಲದೇ ಚಿತ್ರರಂಗದಲ್ಲಿನ ಅನೇಕ ಹೀರೋಗಳಿಗೆ ಮಾದರಿ ಆಗಿದ್ದರು. ಅವರಿಂದ ಸ್ಫೂರ್ತಿ ಪಡೆದವರಲ್ಲಿ ನಿಖಿಲ್​ ಕುಮಾರಸ್ವಾಮಿ (Nikhil Kumaraswamy) ಕೂಡ ಒಬ್ಬರು. ಡಿ.7ರಂದು ನಿಖಿಲ್​ ನಟನೆಯ ‘ರೈಡರ್​’ (Rider Movie) ಚಿತ್ರದ ಸುದ್ದಿಗೋಷ್ಠಿ ನಡೆಯಿತು. ಆ ಬಳಿಕ ಟಿವಿ9 ಜತೆ ಮಾತನಾಡಿದ ನಿಖಿಲ್​ ಅವರು ಪುನೀತ್​ ರಾಜ್​​ಕುಮಾರ್​ ಬಗ್ಗೆ ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ಯಾರಿಗೂ ಗೊತ್ತಾಗದ ರೀತಿಯಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿರುವ ಅಪ್ಪು ಅವರು ಎಲ್ಲರಿಗೂ ಒಂದು ಪಾಠ ಹೇಳಿಕೊಟ್ಟಿದ್ದಾರೆ ಎಂದು ನಿಖಿಲ್​ ಅಭಿಪ್ರಾಯಪಟ್ಟರು. ‘ಇಡೀ ದೇಶದಲ್ಲಿ ಇಂದು ಪುನೀತ್​ ಅಣ್ಣನ ಬಗ್ಗೆ ಚರ್ಚೆ ನಡೆಯುತ್ತಿದೆ. ಹಳ್ಳಿಹಳ್ಳಿಯಲ್ಲೂ ಅವರ ಭಾವಚಿತ್ರಗಳನ್ನು ಹಾಕಿದ್ದಾರೆ. ಅಂಥ ವ್ಯಕ್ತಿಯನ್ನು ಕಳೆದುಕೊಂಡು ನಾವೆಲ್ಲ ತಬ್ಬಲಿಗಳಾಗಿದ್ದೇವೆ’ ಎಂದು ನಿಖಿಲ್​ ಹೇಳಿದ್ದಾರೆ.

ಇದನ್ನೂ ಓದಿ:

ಪುನೀತ್​ ಸಮಾಧಿ ಎದುರು ‘ರೈತ’ ಕಿರುಚಿತ್ರದ ಸಾಂಗ್​ ಬಿಡುಗಡೆ; ಅಪ್ಪುಗಾಗಿ ವಿಶೇಷ ಹಾಡು

ಪುಷ್ಪ, ಆರ್​ಆರ್​ಆರ್​ ಮೀರಿಸಿ ಟ್ರೆಂಡ್​ ಆದ ‘ಗಂಧದ ಗುಡಿ’; ಪುನೀತ್​ ಡಾಕ್ಯುಮೆಂಟರಿಗೆ ಬಹುಪರಾಕ್​

Click on your DTH Provider to Add TV9 Kannada