ಮೈಸೂರು ಸಮೀಪದ ಕಂತೆ ಮಾದಪ್ಪ ಬೆಟ್ಟದಲ್ಲಿ ಮತ್ತೆ ಕಾಣಿಸಿಕೊಂಡವು ಕಾಡಾನೆಗಳು, ಆತಂಕದಲ್ಲಿ ಜನ
ಈ ಪ್ರದೇಶಗಳಲ್ಲಿ ಆನೆಗಳು ಕಾಣಿಸಿಕೊಳ್ಳೋದು ಇದ ಮೊದಲ ಸಲವೇನಲ್ಲ. ಪ್ರತಿಬಾರಿ ಅನೆಗಳು ದಾಳಿಯಿಟ್ಟಾಗ ಜನ ಅರಣ್ಯ ಇಲಾಖೆಗೆ ದೂರು ಸಲ್ಲಿಸುತ್ತಾರೆ. ಸಿಬ್ಬಂದಿ ಸ್ಥಳಕ್ಕೆ ಅಗಮಿಸಿ ಆನೆಗಳನ್ನು ಕಾಡಿಗೆ ಅಟ್ಟುತ್ತಾರೆ.
ಈ ಸಂಗತಿಯನ್ನು ಪದೇಪದೆ ಹೇಳುತ್ತಿದ್ದೇವೆ. ವನ್ಯಮೃಗಳು ಕಾಡಿನಿಂದ ಪ್ರದೇಶಗಳಿಗೆ ಲಗ್ಗೆಯಿಡುತ್ತಿರುವುದು ನಮ್ಮ ವಿವೇಚನೆಯಿಲ್ಲದ ಯೋಜನೆಗಳಿಂದ. ನಗರಗಳ ಪ್ರದೇಶಗಳನ್ನು ವಿಸ್ತರಿಸುವ ಭರಾಟೆಯಲ್ಲಿ ನಾವು ಕಾಡುಪ್ರದೇಶವನ್ನು ಕಿರಿದುಗೊಳಿಸುತ್ತಿದ್ದೇವೆ. ಒಂದು ಕಾಲು ಶತಮಾನದಷ್ಟು ಹಿಂದೆ ಕಾಡುಗಳಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಅನೆ, ಚಿರತೆ, ಹುಲಿ ಮೊದಲಾದ ಕಾಡುಪ್ರಾಣಿಗಳಿಗೆ ಕಾಡು ಚಿಕ್ಕದೆನಿಸತೊಡಗಿದೆ. ಹಾಗಾಗೇ ಅವು ಜನವಸತಿ ಪ್ರದೇಶಗಳತ್ತ ಮುಖ ಮಾಡುತ್ತಿವೆ. ಈ ವಿಡಿಯೋ ಗಮನಿಸಿದರೆ ನಾವು ಯಾಕೆ ಈ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇವೆ ಅನ್ನವುದು ಗೊತ್ತಾಗುತ್ತದೆ.
ಸೋಮವಾರದಂದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಂತೆ ಮಾದಪ್ಪನ ಬೆಟ್ಟದಲ್ಲಿ ಕಾಡಾನೆಗಳು ಕಾಣಿಸಿಕೊಂಡಿವೆ. ಅವು ಗುಂಪಾಗಿ ಸಾಗಿ ಬಂದಿರಬಹುದಾದರೂ ಮೊಬೈಲ್ ಕೆಮೆರಾನಲ್ಲಿ ಅವು ಗುಂಪಾಗಿ ಇರೋದು ಸೆರೆ ಸಿಕ್ಕಿಲ್ಲ. ಕಾಡಾನೆಗಳ ಗುಂಪನ್ನು ಕಂಡು ಜನ ಸಹಜವಾಗೇ ಆತಂಕಕ್ಕೀಡಾಗಿದ್ದಾರೆ.
ಅರಣ್ಯ ಇಲಾಖೆ ಅವರು ದೂರು ದಾಖಲಿರುವುದು ಗೊತ್ತಾಗಿದೆ. ಇಲಾಖೆ ಸಿಬ್ಬಂದಿ ಅವುಗಳನ್ನು ಪುನಃ ಕಾಡಿಗೆ ಹೇಗೆ ಅಟ್ಟಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು.
ಹಾಗೆ ನೋಡಿದರೆ, ಈ ಪ್ರದೇಶಗಳಲ್ಲಿ ಆನೆಗಳು ಕಾಣಿಸಿಕೊಳ್ಳೋದು ಇದ ಮೊದಲ ಸಲವೇನಲ್ಲ. ಪ್ರತಿಬಾರಿ ಅನೆಗಳು ದಾಳಿಯಿಟ್ಟಾಗ ಜನ ಅರಣ್ಯ ಇಲಾಖೆಗೆ ದೂರು ಸಲ್ಲಿಸುತ್ತಾರೆ. ಸಿಬ್ಬಂದಿ ಸ್ಥಳಕ್ಕೆ ಅಗಮಿಸಿ ಆನೆಗಳನ್ನು ಕಾಡಿಗೆ ಅಟ್ಟುತ್ತಾರೆ.
ಆದರೆ ಜನರಿಗೆ ಆನೆಗಳ ಹಾವಳಿಯಿಂದ ಶಾಶ್ವತವಾದ ಪರಿಹಾರ ಬೇಕಿದೆ. ಅಲ್ಲಿಯವರೆಗೆ ಅವರು ಅತಂಕದಲ್ಲೇ ಜೀವಿಸಬೇಕು.
ಇದನ್ನೂ ಓದಿ: ಮೃತಪಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ಕಟ್ಟಿಹಾಕಿ ಎಳೆದೊಯ್ದ ಐಆರ್‌ಬಿ ಟೋಲ್ ಸಿಬ್ಬಂದಿ; ಅಮಾನವೀಯ ವಿಡಿಯೋ ವೈರಲ್