AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೃತಪಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ಕಟ್ಟಿಹಾಕಿ ಎಳೆದೊಯ್ದ ಐಆರ್‌ಬಿ‌ ಟೋಲ್ ಸಿಬ್ಬಂದಿ; ಅಮಾನವೀಯ ವಿಡಿಯೋ ವೈರಲ್

ಮೃತ ಆಕಳಿನ ಕಾಲಿಗೆ ಹಗ್ಗ ಕಟ್ಟಿ ಐಆರ್‌ಬಿಯ 1033 ವಾಹನದ ಮೂಲಕ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಸಿಬ್ಬಂದಿ ಎಳೆಯೊಯ್ದಿದ್ದಾರೆ. ಸದ್ಯ ಈ ಅಮಾನವೀಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೃತಪಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ಕಟ್ಟಿಹಾಕಿ ಎಳೆದೊಯ್ದ ಐಆರ್‌ಬಿ‌ ಟೋಲ್ ಸಿಬ್ಬಂದಿ; ಅಮಾನವೀಯ ವಿಡಿಯೋ ವೈರಲ್
ರಸ್ತೆ ಮೇಲೆಯೇ ಆಕಳು ಎಳೆದೊಯ್ದ ದೃಶ್ಯ
TV9 Web
| Edited By: |

Updated on:Dec 06, 2021 | 11:27 AM

Share

ಕಾರವಾರ: ಮೃತಪಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ಕಟ್ಟಿಹಾಕಿ ರಸ್ತೆಯ ಮೇಲೆಯೇ ಐಆರ್‌ಬಿ‌ ಟೋಲ್ ಸಿಬ್ಬಂದಿ ಎಳೆದೊಯ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪ ನಡೆದಿದೆ. ಮೃತ ಆಕಳಿನ ಕಾಲಿಗೆ ಹಗ್ಗ ಕಟ್ಟಿ ಐಆರ್‌ಬಿಯ 1033 ವಾಹನದ ಮೂಲಕ ರಾಷ್ಟ್ರೀಯ ಹೆದ್ದಾರಿ ಮೇಲೆಯೇ ಸಿಬ್ಬಂದಿ ಎಳೆಯೊಯ್ದಿದ್ದಾರೆ. ಸದ್ಯ ಈ ಅಮಾನವೀಯ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಸಿಬ್ಬಂದಿ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಟ್ಕಳ ತಾಲೂಕಿನ ಗಡಿಭಾಗದಲ್ಲಿರುವ ಶಿರೂರು ಟೋಲ್ ಗೇಟ್‌ಗೆ ಸೇರಿದ 1033 ವಾಹನದ ಸಿಬ್ಬಂದಿ ಈ ದುಷ್ಕೃತ್ಯ ಎಸಗಿದ್ದಾರೆ. ಸದ್ಯ ಐಆರ್​ಬಿ ಕಂಪೆನಿ ಸಿಬ್ಬಂದಿಯ ಅಮಾನವೀಯ ಕೃತ್ಯ ಹಾಗೂ ನಿರ್ಲಕ್ಷ್ಯದ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಉತ್ತರ ಕನ್ನಡ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಳೆಗದ್ದೆ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66ರ ಹೊಳೆಗದ್ದೆ ಟೋಲ್‌ಗೇಟ್ ಬಳಿ 13 ಕೋಣ, 9 ಎಮ್ಮೆಗಳನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಜಾನುವಾರು ಸಾಗಿಸುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಕುಮಟಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಪೊಲೀಸರ ತಪಾಸಣೆ ವೇಳೆ ಜಾನುವಾರುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವುದು ಬೆಳಕಿಗೆ ಬಂದಿದೆ. ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆಯಡಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಕೊಪ್ಪದಲ್ಲಿ ಮಿತಿಮೀರಿದ ದನಗಳ್ಳರ ಹಾವಳಿ; ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಆಟಾಟೋಪ

ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರು ರಕ್ಷಣೆ; ನಾಲ್ವರು ಪೊಲೀಸ್ ವಶಕ್ಕೆ

Published On - 11:10 am, Mon, 6 December 21

Follow Us
TV9 Web
TV9 Web

TV9 Kannada

Read More
ರಿಷಬ್ ಶೆಟ್ಟಿ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ; ಪೂಜೆಯ ವಿಡಿಯೋ ನೋಡಿ
ರಿಷಬ್ ಶೆಟ್ಟಿ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ; ಪೂಜೆಯ ವಿಡಿಯೋ ನೋಡಿ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953
ಮೈಸೂರು ರಾಜರ ಕಾರುಗಳಿಗೆ ವಿಶೇಷ ಪೂಜೆ: ಎಲ್ಲಾ ಕಾರುಗಳ ಸಂಖ್ಯೆ 1953