ಪುನೀತ್​ ಸಮಾಧಿ ಎದುರು ‘ರೈತ’ ಕಿರುಚಿತ್ರದ ಸಾಂಗ್​ ಬಿಡುಗಡೆ; ಅಪ್ಪುಗಾಗಿ ವಿಶೇಷ ಹಾಡು

Puneeth Rajkumar Samadhi: ಪುನೀತ್​ ರಾಜ್​ಕುಮಾರ್​ ಸಮಾಧಿ ಎದುರು ನಿರ್ದೇಶಕ ಚೇತನ್​ ಕುಮಾರ್​ ಅವರು ಈ ಹಾಡು ಬಿಡುಗಡೆ ಮಾಡಿದರು. ಇದು ರೈತರ ಬಗ್ಗೆ ಅರಿವು ಮೂಡಿಸುವಂತಹ ಕಥಾಹಂದರ ಹೊಂದಿರುವ ಕಿರುಚಿತ್ರ.

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಅವರನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಅಪ್ಪು ನಿಧನರಾಗಿ ಒಂದು ತಿಂಗಳಿಗೂ ಹೆಚ್ಚು ಕಾಲ ಆಗಿದೆ. ಇಂದಿಗೂ ಕೂಡ ಸಮಾಧಿ ಬಳಿ ಸಾವಿರಾರು ಅಭಿಮಾನಿಗಳು (Puneeth Rajkumar Fans) ಬಂದು ನಮನ ಸಲ್ಲಿಸುತ್ತಿದ್ದಾರೆ. ಅದೇ ರೀತಿ, ಪುನೀತ್​ ರಾಜ್​ಕುಮಾರ್​ ಅವರ ಹೆಸರನ್ನು ಅಮರವಾಗಿಸಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಈಗ ‘ರೈತ’ ಶೀರ್ಷಿಕೆಯಲ್ಲಿ ಕಿರುಚಿತ್ರವೊಂದು ನಿರ್ಮಾಣವಾಗಿದ್ದು, ಇದರಲ್ಲಿ ಪುನೀತ್​ ಕುರಿತು ಒಂದು ವಿಶೇಷ ಹಾಡು ಇದೆ. ಅದನ್ನು ಇಂದು (ಡಿ.7) ಪುನೀತ್​ ಸಮಾಧಿ (Puneeth Rajkumar Samadhi) ಎದುರು ರಿಲೀಸ್​ ಮಾಡಲಾಯಿತು. ನಿರ್ದೇಶಕ ಚೇತನ್​ ಕುಮಾರ್​ ಅವರು ಈ ಹಾಡನ್ನು ಬಿಡುಗಡೆ ಮಾಡಿದರು. ಇದು ರೈತರ ಬಗ್ಗೆ ಅರಿವು ಮೂಡಿಸುವಂತಹ ಕಥಾಹಂದರ ಹೊಂದಿರುವ ಕಿರುಚಿತ್ರ. ಇದಕ್ಕೆ ಕಿರಣ್​ ಬಂಡವಾಳ ಹೂಡಿದ್ದು, ಕ್ರಿಶ್​ ರಂಗಸ್ವಾಮಿ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ:

ಸುದೀಪ್​ಗಾಗಿ ದೇವಸ್ಥಾನ: ಕಿಚ್ಚನ 4 ಅಡಿ ಮೂರ್ತಿ ಎದುರು ಪುನೀತ್​ ರಾಜ್​ಕುಮಾರ್​​ ಭಾವಚಿತ್ರ

‘ಗಂಧದ ಗುಡಿ’ ನೋಡಿ ಸೆಲೆಬ್ರಿಟಿಗಳು ಫಿದಾ; ಪುನೀತ್​ ಕಾರ್ಯಕ್ಕೆ ಉಘೇ ಉಘೇ ಎಂದಿದ್ದು ಯಾರೆಲ್ಲ?

Click on your DTH Provider to Add TV9 Kannada