‘ಗಂಧದ ಗುಡಿ’ ನೋಡಿ ಸೆಲೆಬ್ರಿಟಿಗಳು ಫಿದಾ; ಪುನೀತ್​ ಕಾರ್ಯಕ್ಕೆ ಉಘೇ ಉಘೇ ಎಂದಿದ್ದು ಯಾರೆಲ್ಲ?

‘ಗಂಧದ ಗುಡಿ’ ನೋಡಿ ಸೆಲೆಬ್ರಿಟಿಗಳು ಫಿದಾ; ಪುನೀತ್​ ಕಾರ್ಯಕ್ಕೆ ಉಘೇ ಉಘೇ ಎಂದಿದ್ದು ಯಾರೆಲ್ಲ?
ಗಂಧದ ಗುಡಿ ಟೀಸರ್​ಗೆ ಮೆಚ್ಚುಗೆ ಸೂಚಿಸುತ್ತಿರುವ ಸೆಲೆಬ್ರಿಟಿಗಳು

Gandhada Gudi Title Teaser: ಯಶ್​, ಬಸವರಾಜ ಬೊಮ್ಮಾಯಿ, ಪ್ರಶಾಂತ್​ ನೀಲ್​, ನಿಖಿಲ್​ ಕುಮಾರ್​ ಮುಂತಾದವರು ‘ಗಂಧದ ಗುಡಿ’ ಟೀಸರ್​ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಟೀಸರ್​ ಸಖತ್​ ವೈರಲ್​ ಆಗಿದೆ.

TV9kannada Web Team

| Edited By: Madan Kumar

Dec 06, 2021 | 1:24 PM


ಪುನೀತ್​ ರಾಜ್​ಕುಮಾರ್​ (Puneeth Rajkumar) ನಿರ್ಮಾಣ ಮಾಡಿರುವ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರದ ಟೈಟಲ್​ ಟೀಸರ್​ ಬಿಡುಗಡೆ ಆಗಿದೆ. ಪಿಆರ್​ಕೆ ಆಡಿಯೋ ಮೂಲಕ ರಿಲೀಸ್​ ಆಗಿರುವ ಈ ಟೀಸರ್​ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸೆಲೆಬ್ರಿಟಿಗಳು ಕೂಡ ಇದನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಎಲ್ಲರಿಂದಲೂ ಪ್ರಶಂಸೆಯ ಸುರಿಮಳೆ ಆಗುತ್ತಿದೆ. ಕರುನಾಡಿನ ಪ್ರಕೃತಿ ಸೌಂದರ್ಯವನ್ನು ಮನಮೋಹಕವಾಗಿ ಸೆರೆ ಹಿಡಿದಿರುವ ಈ ಡಾಕ್ಯುಮೆಂಟರಿ 2022ರಲ್ಲಿ ಥಿಯೇಟರ್​ನಲ್ಲಿ ಬಿಡುಗಡೆ ಆಗಲಿದೆ. ನಟ ಯಶ್​, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಗಣ್ಯರು ‘ಗಂಧದ ಗುಡಿ’ ಟೈಟಲ್​​ ಟೀಸರ್​ (Gandhada Gudi Title Teaser) ನೋಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರೂ ಕೂಡ ಇದನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಈ ಟೀಸರ್​ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

‘ಗಂಧದ ಗುಡಿ’ ಡಾಕ್ಯುಮೆಂಟರಿ ಬಗ್ಗೆ ಪುನೀತ್​ ರಾಜ್​ಕುಮಾರ್​ ಅವರು ಅನೇಕ ಸೆಲೆಬ್ರಿಟಿಗಳ ಜತೆ ಚರ್ಚೆ ಮಾಡಿದ್ದರು. ನಟ ಯಶ್​ ಅದನ್ನೀಗ ನೆನಪು ಮಾಡಿಕೊಂಡಿದ್ದಾರೆ. ‘ನೀವು ಪ್ರತಿ ಬಾರಿ ಇದರ ಬಗ್ಗೆ ಮಾತನಾಡಿದಾಗಲೂ ನಿಮ್ಮ ಕಣ್ಣಲ್ಲಿ ಮೂಡುತ್ತಿದ್ದ ಹೊಳಪು ಈಗ ನೆನಪಾಗುತ್ತಿದೆ. ನಿಮಗೆ ಈ ಪ್ರಾಜೆಕ್ಟ್​ ಎಷ್ಟು ಆಪ್ತವಾಗಿತ್ತು ಎಂಬುದಕ್ಕೆ ನಿಮ್ಮ ಉತ್ಸಾಹವೇ ಸಾಕ್ಷಿ ಆಗಿತ್ತು. ನಮ್ಮ ಗಂಧದ ಗುಡಿಯನ್ನು ನಿಮ್ಮ ನೋಟದ ಮೂಲಕ ನಮಗೆ ತೋರಿಸುತ್ತಿರುವುದಕ್ಕೆ ಧನ್ಯವಾದಗಳು ಅಪ್ಪು ಸರ್​. ಇದು ನಿಜಕ್ಕೂ ಸ್ವರ್ಗ’ ಎಂದು ಯಶ್​ ಟ್ವೀಟ್​ ಮಾಡಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಈ ಟೀಸರ್​ ಸಖತ್​ ಇಷ್ಟವಾಗಿದೆ. ಅವರು ಕೂಡ ‘ಗಂಧದ ಗುಡಿ’ ಬಗ್ಗೆ ಟ್ವೀಟ್​ ಮಾಡಿದ್ದಾರೆ. ನಮ್ಮೆಲ್ಲರ ಪ್ರೀತಿಯ ಅಪ್ಪು ದಿ. ಪುನೀತ್ ರಾಜಕುಮಾರ್ ಅವರ ಪಿ.ಆರ್.ಕೆ ಪ್ರೊಡಕ್ಷನ್ ನಿರ್ಮಿಸಿರುವ ‘ಗಂಧದ ಗುಡಿ’ ಒಂದು ಅದ್ಭುತ ಕಲಾಕೃತಿ. ನಾಡಿನ ಪ್ರಾಕೃತಿಕ ಶ್ರೀಮಂತಿಕೆ, ಜೀವಸಂಕುಲ, ಬುಡಕಟ್ಟು ಜನರ ಸಂಸ್ಕೃತಿಗಳನ್ನು ಪರಿಚಯಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಕಥೆಯೊಂದನ್ನು ಹೇಳುತ್ತಿದೆ. ಈ ಅದ್ಭುತ ದೃಶ್ಯಕಾವ್ಯದ ಸಂದೇಶ ಎಲ್ಲರಿಗೂ ತಲುಪಬೇಕು. ಪ್ರತಿ ಭಾರತೀಯ, ಅದರಲ್ಲೂ ವಿಶೇಷವಾಗಿ ಪ್ರತಿಯೊಬ್ಬ ಕನ್ನಡಿಗ ಕರುನಾಡಿನ ಈ ಕಥಾನಕವನ್ನು ನೋಡುವಂತಾಗಲಿ. ನಮ್ಮ ಅರಣ್ಯ, ನಮ್ಮ ಪರಿಸರ, ವೈವಿಧ್ಯಮಯ ಪ್ರಾಕೃತಿಕ ಸಂಪತ್ತನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರ ಪ್ರೇರಣೆ ನೀಡಲಿ ಅಂತ ಹಾರೈಸುತ್ತೇನೆ’ ಎಂದು ಬೊಮ್ಮಾಯಿ ಪೋಸ್ಟ್​ ಮಾಡಿದ್ದಾರೆ.

‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್​ ನೀಲ್​ ಸಹ ಇದನ್ನು ಹೊಗಳಿದ್ದಾರೆ. ‘ಅಪ್ಪು ಸರ್​ ಕನಸು ಮತ್ತು ದೂರದೃಷ್ಟಿ ಜಾಗತಿಕ ಮಟ್ಟದಲ್ಲಿದೆ. ಅವರ ರೀತಿಯೇ ಇದು ಕೂಡ ಅತ್ಯಮೂಲ್ಯವಾಗಿದೆ. ಇಡೀ ಗಂಧದ ಗುಡಿ ತಂಡಕ್ಕೆ ಶುಭ ಹಾರೈಕೆಗಳು’ ಎಂದು ಪ್ರಶಾಂತ್​ ನೀಲ್​ ಟ್ವೀಟ್​ ಮಾಡಿದ್ದಾರೆ.

‘ಇದು ಅದ್ಭುತವಾಗಿದೆ’ ಎಂದು ನಿಖಿಲ್​ ಕುಮಾರ್​ ಹೇಳಿದ್ದಾರೆ. ಎಲ್ಲರೂ ಸೋಶಿಯಲ್​ ಮೀಡಿಯಾದಲ್ಲಿ ಈ ಟೀಸರ್​ ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Gandhada Gudi Title Teaser: ‘ಗಂಧದ ಗುಡಿ’ ಟೈಟಲ್ ಟೀಸರ್​ ಬಿಡುಗಡೆ; ಬೆರಗು ಮೂಡಿಸಿದ ಪುನೀತ್​ ಡ್ರೀಮ್​ ಪ್ರಾಜೆಕ್ಟ್​

ಪಾರ್ವತಮ್ಮ ರಾಜ್​ಕುಮಾರ್​ ಹುಟ್ಟುಹಬ್ಬ: ವಿಶೇಷ ದಿನವೇ ಅಪ್ಪು ಕನಸಿನ ಪ್ರಾಜೆಕ್ಟ್​ ಶೀರ್ಷಿಕೆ ಟೀಸರ್​ ಬಿಡುಗಡೆ

Follow us on

Related Stories

Most Read Stories

Click on your DTH Provider to Add TV9 Kannada