‘ಗಂಧದ ಗುಡಿ’ ಅಂದ್ರೆ ಏನು? ಇದ್ರಲ್ಲಿ ಏನೆಲ್ಲ ಇದೆ? ಅಪ್ಪು​ ಕನಸಿನ ಬಗ್ಗೆ ಪೂರ್ತಿ ಮಾಹಿತಿ ನೀಡಿದ ನಿರ್ದೇಶಕ ಅಮೋಘವರ್ಷ

Gandhada Gudi: ಪುನೀತ್​ ರಾಜ್​ಕುಮಾರ್​ ನಿರ್ಮಾಣ ಮಾಡಿರುವ ‘ಗಂಧದ ಗುಡಿ’ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಆ ಕುರಿತು ನಿರ್ದೇಶಕ ಅಮೋಘವರ್ಷ ಅವರು ಟಿವಿ9 ಜೊತೆಗೆ ಮಾತನಾಡಿದ್ದಾರೆ.

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ಕನಸಿನ ಪ್ರಾಜೆಕ್ಟ್​ ಆದಂತಹ ‘ಗಂಧದ ಗುಡಿ’ ಸಾಕ್ಷ್ಯಚಿತ್ರದ ಟೈಟಲ್​ ಟೀಸರ್ (Gandhada Gudi Title Teaser)​ ಬಿಡುಗಡೆ ಆಗಿದೆ. 2022ರಲ್ಲಿ ಈ ಡಾಕ್ಯುಮೆಂಟರಿ ಚಿತ್ರಮಂದಿರದಲ್ಲೇ ಬಿಡುಗಡೆ ಆಗಲಿದೆ. ಇಡೀ ಕರ್ನಾಟಕವನ್ನು ಸುತ್ತಾಡಿ ಪುನೀತ್​ ಮತ್ತು ನಿರ್ದೇಶಕ ಅಮೋಘವರ್ಷ (Amoghavarsha) ಅವರು ಇದನ್ನು ತಯಾರಿಸಿದ್ದಾರೆ. ಈ ಪ್ರಾಜೆಕ್ಟ್​ ಶುರು ಆಗಿದ್ದು ಹೇಗೆ? ಇದರಲ್ಲಿ ಏನೆಲ್ಲ ಇದೆ? ಇದನ್ನು ಮಾಡಿರುವ ಉದ್ದೇಶ ಏನು? ಈ ಎಲ್ಲ ವಿಚಾರಗಳ ಬಗ್ಗೆ ಅಮೋಘವರ್ಷ ಅವರು ಮಾತನಾಡಿದ್ದಾರೆ. ಕಿಂಚಿತ್ತೂ ಮೇಕಪ್​ ಹಚ್ಚದೇ ಪುನೀತ್​ ಅವರು ಇದರಲ್ಲಿ ಕಾಣಿಸಿಕೊಂಡಿದ್ದಾರೆ ಎಂಬುದು ವಿಶೇಷ. ‘ಪ್ರತಿ ಶಾಲೆಯ ಮಕ್ಕಳು ನೋಡಬೇಕಾದ ಸಿನಿಮಾ ಇದು. ಇಡೀ ಕುಟುಂಬದವರು ಚಿತ್ರಮಂದಿರಕ್ಕೆ ಬಂದು ಇದನ್ನು ನೋಡಬಹುದು. ಇದರಲ್ಲಿ ಹಾಡುಗಳು ಕೂಡ ಇದೆ’ ಎಂದು ಅಮೋಘವರ್ಷ ಹೇಳಿದ್ದಾರೆ.

ಇದನ್ನೂ ಓದಿ:

ಪುಷ್ಪ, ಆರ್​ಆರ್​ಆರ್​ ಮೀರಿಸಿ ಟ್ರೆಂಡ್​ ಆದ ‘ಗಂಧದ ಗುಡಿ’; ಪುನೀತ್​ ಡಾಕ್ಯುಮೆಂಟರಿಗೆ ಬಹುಪರಾಕ್​

‘ಗಂಧದ ಗುಡಿ’ ನೋಡಿ ಸೆಲೆಬ್ರಿಟಿಗಳು ಫಿದಾ; ಪುನೀತ್​ ಕಾರ್ಯಕ್ಕೆ ಉಘೇ ಉಘೇ ಎಂದಿದ್ದು ಯಾರೆಲ್ಲ?

Click on your DTH Provider to Add TV9 Kannada