ಮೈಸೂರು: ವೀರನಹೊಸಹಳ್ಳಿ ಟಿಬೆಟ್ ಕ್ಯಾಂಪ್‌ನಲ್ಲಿ ಕಾಡಾನೆ ಪ್ರತ್ಯಕ್ಷ; ಓಡಿಸಲು ಮುಂದಾದ ಯುವಕನನ್ನು ಅಟ್ಟಾಡಿಸಿದ ಸಲಗ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಕಾಡಾನೆಯೊಂದು ಪ್ರತ್ಯಕ್ಷವಾಗಿದೆ. ಈ ವೇಳೆ ಅದನ್ನು ಓಡಿಸಲು ಪ್ರಯತ್ನಪಟ್ಟವರನ್ನು ಅದು ಅಟ್ಟಾಡಿಸಿದೆ. ಈ ದೃಶ್ಯ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ಮೈಸೂರು: ಜಿಲ್ಲೆಯ ಹುಣಸೂರು (Hunsur) ತಾಲೂಕಿನ ವೀರನಹೊಸಹಳ್ಳಿ ಟಿಬೆಟ್ ಕ್ಯಾಂಪ್‌ನಲ್ಲಿ (Tibet Camp) ಕಾಡಾನೆ ಪ್ರತ್ಯಕ್ಷವಾಗಿದೆ. ಕಾಡಿನಿಂದ ನಾಡಿಗೆ ಬಂದ ಕಾಡಾನೆಯನ್ನು ಓಡಿಸಲು ಬೆಂಕಿಯ ಪಂಜು ಹಿಡಿದು ಯುವಕನೊಬ್ಬ ತೆರಳಿದ್ದಾನೆ. ಈ ವೇಳೆ ಆನೆ ತಿರುಗಿ ಬಿದ್ದಿದ್ದು, ಅಟ್ಟಿಸಿಕೊಂಡು ಬಂದಿದೆ. ಬೆಂಕಿಯ ಪಂಜನ್ನು ಬಿಸಾಡಿ ಯುವಕ ಓಡಿ ಬಚಾವಾಗಿದ್ದಾನೆ. ಆನೆ ಕೋಪದಿಂದ ಜಮೀನಿಗೆ ಹಾಕಿದ್ದ ಬೇಲಿ ಕಂಬ ಕಿತ್ತು ಒಗೆದಿದೆ. ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿದ್ದವರನ್ನು ಅಟ್ಟಾಡಿಸಿದೆ. ಆನೆಯನ್ನು ಮರಳಿ ಕಾಡಿಗೆ ಕಳುಹಿಸಲು ಹರಸಾಹಸ ಪಡಲಾಗಿದೆ.

ಇದನ್ನೂ ಓದಿ:

ಗಂಡನ ಕಿರಿಕಿರಿಗೆ ಬೇಸತ್ತು ಐವರು ಹೆಣ್ಣುಮಕ್ಕಳೊಂದಿಗೆ ಬಾವಿಗೆ ಹಾರಿದ ಮಹಿಳೆ

ದಾವಣಗೆರೆ: ಪೊಲೀಸರ ವಶದಲ್ಲಿದ್ದ ವ್ಯಕ್ತಿ ಸಾವು; ಲಾಕಪ್ ಡೆತ್ ಎಂದು ಆರೋಪಿಸಿದ ಕುಟುಂಬಸ್ಥರು

Click on your DTH Provider to Add TV9 Kannada