ಇನ್ನೂ ನಿಂತಿಲ್ಲ ಶಿವಣ್ಣನ ಕಣ್ಣೀರು; ಅಪ್ಪು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವ ಮುತ್ತಣ್ಣ

Shivarajkumar: ವೇದಿಕೆ ಕಾರ್ಯಕ್ರಮಗಳಲ್ಲಿ ಪುನೀತ್​ ರಾಜ್​ಕುಮಾರ್​ ಬಗ್ಗೆ ಮಾತು ಬಂದರೆ ಸಾಕು ಶಿವರಾಜ್​ಕುಮಾರ್​ ಅವರ ಕಣ್ಣುಗಳು ತುಂಬಿ ಬರುತ್ತವೆ. ಮಕ್ಕಳಂತೆ ಅವರು ಬಿಕ್ಕಿ ಬಿಕ್ಕಿ ಅಳುತ್ತಾರೆ.

ಪುನೀತ್​ ರಾಜ್​ಕುಮಾರ್ (Puneeth Rajkumar)​ ಅವರ ನಿಧನದ ನೋವು ಎಂದಿಗೂ ಕಡಿಮೆ ಆಗುವಂಥದ್ದಲ್ಲ. ಅಭಿಮಾನಿಗಳಿಗೆ ಇಷ್ಟು ಸಂಕಟ ಆಗುತ್ತಿರುವಾಗ ಡಾ. ರಾಜ್​ಕುಮಾರ್​ ಕುಟುಂಬಕ್ಕೆ ಇನ್ನೆಷ್ಟು ಆಘಾತ ಆಗಿರಬಹುದು? ಶಿವರಾಜ್​ಕುಮಾರ್​ (Shivarajkumar) ಅವರಂತೂ ಸಹೋದರನ್ನು ಕಳೆದುಕೊಂಡು ಪ್ರತಿ ದಿನ ಕಣ್ಣೀರು ಹಾಕುತ್ತಿದ್ದಾರೆ. ಅವರ ಅಳು ಇನ್ನೂ ನಿಂತಿಲ್ಲ. ವೇದಿಕೆ ಕಾರ್ಯಕ್ರಮಗಳಲ್ಲಿ ಪುನೀತ್​ ಬಗ್ಗೆ ಮಾತು ಬಂದರೆ ಸಾಕು ಶಿವಣ್ಣನ ಕಣ್ಣುಗಳು ತುಂಬಿ ಬರುತ್ತವೆ. ಶೇಷಾದ್ರಿಪುರದ ಕರ್ನಾಟಕ ಪ್ರದೇಶ ಆರ್ಯ ಈಡಿಗರ (Idiga Community) ಸಂಘದಲ್ಲಿ ಇಂದು (ಡಿ.5) ಪುನೀತ್​ ಸ್ಮರಣಾಂಜಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಪ್ಪು ನೆನಪುಗಳನ್ನು ಮೆಲುಕು ಹಾಕಿದ ಶಿವರಾಜ್​ಕುಮಾರ್​ ಅವರು ಬಿಕ್ಕಿ ಬಿಕ್ಕಿ ಅತ್ತರು. ಪುನೀತ್​ ಸಹೋದರಿ ಲಕ್ಷ್ಮೀ, ನಟಿ ಜಯಮಾಲಾ, ಈಡಿಗ ಸಮುದಾಯದ ಮುಖಂಡರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇದನ್ನೂ ಓದಿ:

‘ತಮ್ಮನನ್ನು ಕಳೆದುಕೊಂಡು ತಿಂಗಳಾಗಿದೆ; ಮತ್ತೆ ದೇವರು ಯಾಕೆ ನೋವು ಕೊಡ್ತಾನೋ ಗೊತ್ತಿಲ್ಲ’: ಶಿವರಾಂ ಬಗ್ಗೆ ಶಿವಣ್ಣನ ಮಾತು

ಪುನೀತ್​ ಕನಸಿನ ‘ಗಂಧದ ಗುಡಿ’ ಟೀಸರ್​ ರಿಲೀಸ್​ ಮಾಡುವ ವಿಶೇಷ ವ್ಯಕ್ತಿ ಯಾರು? ಆಹ್ವಾನ ನೀಡಿದ ಶಿವಣ್ಣ

Click on your DTH Provider to Add TV9 Kannada