ಹಿರಿಯ ನಟ ಶಿವರಾಂ ಅವರ ಅಂತ್ಯಕ್ರಿಯೆ ವಿಡಿಯೋ ಇಲ್ಲಿದೆ

ಹಿರಿಯ ನಟ ಶಿವರಾಂ ಅವರ ಅಂತ್ಯಕ್ರಿಯೆ ವಿಡಿಯೋ ಇಲ್ಲಿದೆ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Dec 05, 2021 | 2:13 PM

ಅಕ್ಟೋಬರ್​ ತಿಂಗಳಲ್ಲಿ ಪುನೀತ್​ ರಾಜ್​ಕುಮಾರ್​ ಅಕಾಲಿಕ ಮರಣ ಹೊಂದಿದ್ದರು. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಶಾಕ್​ಗೆ ಒಳಗಾಗಿತ್ತು. ಇದಾದ ಬೆನ್ನಲ್ಲೇ ಶಿವರಾಂ ಕೂಡ ನಿಧನ ಹೊಂದಿರುವ ವಿಚಾರ ಸ್ಯಾಂಡಲ್​ವುಡ್​ಗೆ ಆಘಾತ ತಂದಿದೆ.

ಸ್ಯಾಂಡಲ್​ವುಡ್​ನ ಹಿರಿಯ ನಟ ಹಾಗೂ ನಿರ್ಮಾಪಕ ಶಿವರಾಂ ಅವರ ಅಂತ್ಯಕ್ರಿಯೆ ಇಂದು (ಡಿಸೆಂಬರ್​ 5) ಮಧ್ಯಾಹ್ನ ನೆರವೇರಿದೆ. ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಶಿವರಾಂ ಮಕ್ಕಳಾದ ರವಿಶಂಕರ್, ಲಕ್ಷ್ಮೀಶ್‌ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸ್ಯಾಂಡಲ್​ವುಡ್​ಗೆ ಮಾರ್ಗದರ್ಶಕರಾಗಿದ್ದ ಶಿವರಾಂ ಅವರು, ಪಂಚಭೂತಗಳಲ್ಲಿ ಲೀನರಾದರು. ಅವರನ್ನು ಕಳೆದುಕೊಂಡ ಚಿತ್ರರಂಗ ಬಡವಾಗಿದೆ. ಅಂತ್ಯ ಸಂಸ್ಕಾರಕ್ಕೂ ಮೊದಲು ಪಾರ್ಥಿವ ಶರೀರಕ್ಕೆ ಅಷ್ಟಾಭಿಷೇಕದ ಪೂಜೆ ಮಾಡಲಾಯಿತು. ತುಪ್ಪ, ಹೂವು, ಗಂಧ, ವಿಭೂತಿ, ಖರ್ಜೂರ, ಕೆಂಪು, ಕಲ್ಲು ಸಕ್ಕರೆ, ಹಾಲು, ಮೊಸರು , ಅವಲಕ್ಕಿಯಿಂದ ಪೂಜೆ ನಡೆಸಲಾಯಿತು.  ಅಕ್ಟೋಬರ್​ ತಿಂಗಳಲ್ಲಿ ಪುನೀತ್​ ರಾಜ್​ಕುಮಾರ್​ ಅಕಾಲಿಕ ಮರಣ ಹೊಂದಿದ್ದರು. ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಶಾಕ್​ಗೆ ಒಳಗಾಗಿತ್ತು. ಇದಾದ ಬೆನ್ನಲ್ಲೇ ಶಿವರಾಂ ಕೂಡ ನಿಧನ ಹೊಂದಿರುವ ವಿಚಾರ ಸ್ಯಾಂಡಲ್​ವುಡ್​ಗೆ ಆಘಾತ ತಂದಿದೆ. ಸಾಕಷ್ಟು ಸೆಲೆಬ್ರಿಟಿಗಳು ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ಪಂಚಭೂತಗಳಲ್ಲಿ ಹಿರಿಯ ನಟ ಶಿವರಾಂ ಲೀನ; ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ