ಬಸವನ ಬಾಗೇವಾಡಿ ಕಳ್ಳರಿಗೆ ಸ್ಥಳದಲ್ಲಿ ಸೆಕ್ಯುರಿಟಿ ಕೆಮೆರಾ ಇರೋದು ಗೊತ್ತಿದೆ, ಮುಖ ಮುಚ್ಚಿಕೊಳ್ಳುವುದು ಗೊತ್ತಿಲ್ಲ!

ಇವರು ವೃತ್ತಿಪರ ಕಳ್ಳರ ಹಾಗೆ ಗೋಚರಿಸುತ್ತಿಲ್ಲ. ಯಾಕೆಂದರೆ, ಕೆಮೆರಾಗಳು ಅಲ್ಲಿ ಅಳವಡಿಸಿರುವುದು ಅವರಿಗೆ ಗೊತ್ತಿದೆಯಾದರೂ, ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳದೆ ಕೇವಲ ತಲೆ ಭಾಗ ಮಾತ್ರ ಕವರ್ ಮಾಡಿಕೊಂಡಿದ್ದಾರೆ.

ರಾತ್ರಿ ಸಮಯದಲ್ಲಿ ಕಳ್ಳರು ಮುಚ್ಚಿದ ಬಾರ್, ಬೇಕರಿ, ಅಂಗಡಿಗಳ ಶಟರ್ ಮುರಿದು ಒಳನುಗ್ಗಿ ಕೈಗೆ ಸಿಕ್ಕಿದ್ದನ್ನೆಲ್ಲ ದೋಚುವ ಘಟನೆಗಳು ಕೇವಲ ಬೆಂಗಳೂರಿನಂಥ ದೊಡ್ಡ ದೊಡ್ಡ ನಗರಗಳಲ್ಲಿ ಮಾತ್ರವಲ್ಲ, ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲದೆ ಚಿಕ್ಕಪುಟ್ಟ ಊರುಗಳಲ್ಲೂ ನಡೆಯುತ್ತವೆ. ಇತ್ತೀಚಿಗೆ ಯುವ ಕಳ್ಳನೊಬ್ಬ ಬೆಂಗಳೂರಿನಲ್ಲಿ ಒಂದ ಬೇಕರಿಯ ಶಟರನ್ನು ಚಾಕ್ಯಚಕ್ಯತೆಯಿಂದ ಮುರಿದು ಹಣ ದೋಚಿಕೊಂಡ ಹೋದ ದೃಶ್ಯವನ್ನು ತೋರಿಸಿದ್ದೆವು. ನಾವೀಗ ತೋರಿಸುತ್ತಿರುವ ಕಳ್ಳತನದ ಸಿಸಿಟಿವಿ ಫುಟೇಜ್ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಊರಿನಿಂದ ಲಭ್ಯವಾಗಿದೆ. ಇಲ್ಲಿ ಕಳ್ಳತನ ಮಾಡಿರುವುದು ಒಬ್ಬನಲ್ಲ, 4-5 ಕಳ್ಳರ ಗುಂಪು. ಅವರು ಟಾರ್ಗೆಟ್ ಮಾಡಿರುವುದು ಒಂದು ಬಾರ್ ಮತ್ತೊಂದು ವೈನ್ ಶಾಪ್.

ಇವರು ವೃತ್ತಿಪರ ಕಳ್ಳರ ಹಾಗೆ ಗೋಚರಿಸುತ್ತಿಲ್ಲ. ಯಾಕೆಂದರೆ, ಕೆಮೆರಾಗಳು ಅಲ್ಲಿ ಅಳವಡಿಸಿರುವುದು ಅವರಿಗೆ ಗೊತ್ತಿದೆಯಾದರೂ, ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಳ್ಳದೆ ಕೇವಲ ತಲೆ ಭಾಗ ಮಾತ್ರ ಕವರ್ ಮಾಡಿಕೊಂಡಿದ್ದಾರೆ. ಒಂದಿಬ್ಬರ ಮುಖ ಫುಟೇಜ್ನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಅವರನ್ನು ಹಿಡಿಯುವುದು ಪೊಲೀಸರಿಗೆ ಕಷ್ಟವಾಗಲಾರದು.

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬಾರ್ ಮತ್ತು ವೈನ್ ಶಾಪ್ ಎರಡೂ ಕಡೆ ಸೇರಿ ಕಳ್ಳರು 4,000 ರೂ. ನಗದು ಮತ್ತು ಒಂದಷ್ಟು ಬೀಯರ್ ಹಾಗೂ ಮದ್ಯದ ಬಾಟಲ್​ಗಳನ್ನು ಕದ್ದಿದ್ದಾರೆ.

ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮತ್ತು ಕಾನ್​ಸ್ಟೇಬಲ್​​​ಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿ ದೂರು ದಾಖಲಿಸಿಕೊಂಡು ಕಳ್ಳರನ್ನು ಸೆರೆ ಹಿಡಿಯಲು ಜಾಲ ಬೀಸಿದ್ದಾರೆ.

ಇದನ್ನೂ ಓದಿ:   ಕಂಗನಾ ರಣಾವತ್​ ಕಾರಿನ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು; ವಿಡಿಯೋ ಪೋಸ್ಟ್ ಮಾಡಿದ ನಟಿ

Click on your DTH Provider to Add TV9 Kannada