ಮಧ್ಯಮ ರೇಂಜಿನ ನೀರು ನಿರೋಧಕ ಸ್ಯಾಮ್ಸಂಗ್ ಗೆಲ್ಯಾಕ್ಸಿ ಎ13 5ಜಿ ಇಷ್ಟರಲ್ಲೇ ಮಾರ್ಕೆಟ್ ಪ್ರವೇಶಿಸಲಿದೆ

ಸ್ಯಾಮ್ಸಂಗ್ ಕಂಪನಿಯು ಇತ್ತೀಚೆಗೆ ಹೊಸ ಸ್ಮಾರ್ಟ್‌ಫೋನ್ ಸ್ಯಾಮ್ಸಂಗ್ ಗೆಲ್ಯಾಕ್ಸಿ ಎ13 5ಜಿ ಅನ್ನು ಯುಎಸ್‌ನಲ್ಲಿ ಕಂಪನಿಯು ಮಧ್ಯಮ ರೇಂಜಿನ  5G ಡಿವೈಸ್ ಆಗಿ ಬಿಡುಗಡೆ ಮಾಡಿದೆ.

ಸೋಲ್​​​ನಿಂದ ನಮಗೆ ಲಭ್ಯವಾವಿಗಿರುವ ಮಾಹಿತಿಯ ಪ್ರಕಾರ ಟೆಕ್ ದೈತ್ಯ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್ 2022 ರಲ್ಲಿ ನೀರು-ನಿರೋಧಕ (ವಾಟರ್ ರೆಸಿಸ್ಟನ್ಸ್) ಗ್ಯಾಲಕ್ಸಿ ಎ ಸರಣಿಯ ಮಧ್ಯಮ ಶ್ರೇಣಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ. ಕಂಪನಿಯು ಈಗಾಗಲೇ ಗೆಲ್ಯಾಕ್ಸಿ ಎ52, ಎ52 5 ಜಿ ಸೇರಿದಂತೆ ನೀರು ಪ್ರತಿರೋಧಕ ಫೀಚರ್ ಹೊಂದಿರುವ ಅರ್ಧ ಡಜನ್ ಗೆಲ್ಯಾಕ್ಸಿ ಎ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಮತ್ತು ಈ ವರ್ಷ ಎ72 ಸ್ಲಾರ್ಟ್ ಫೋನನ್ನು ಬಿಡುಗಡೆ ಮಾಡಿದೆ ಅಂತ ಜಿಎಸ್ಎಮ್ ಅರೀನಾ ವರದಿ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳಲ್ಲಿ ಐಪಿಎಕ್ಸ್ಎಕ್ಸ್ ಧೂಳು ಮತ್ತು ನೀರಿನ ಪ್ರತಿರೋಧವನ್ನು ಸಾಧಿಸಲು ಸ್ಯಾಮ್‌ಸಂಗ್ ಮೆಂಬರೇನ್ ವಸ್ತುಗಳು ಮತ್ತು ಜಲನಿರೋಧಕ ಸಿಲಿಕೋನ್ ಅನ್ನು ಬಳಸುತ್ತದೆ.

ಸ್ಯಾಮ್ಸಂಗ್ ಕಂಪನಿಯು ಇತ್ತೀಚೆಗೆ ಹೊಸ ಸ್ಮಾರ್ಟ್‌ಫೋನ್ ಸ್ಯಾಮ್ಸಂಗ್ ಗೆಲ್ಯಾಕ್ಸಿ ಎ13 5ಜಿ ಅನ್ನು ಯುಎಸ್‌ನಲ್ಲಿ ಕಂಪನಿಯು ಮಧ್ಯಮ ರೇಂಜಿನ  5G ಡಿವೈಸ್ ಆಗಿ ಬಿಡುಗಡೆ ಮಾಡಿದೆ.

ಈ ಫೋನಿನ ವೈಶಿಷ್ಟ್ಯತೆಗಳ ವಿಷಯಕ್ಕೆ ಬಂದಾಗ ಅದು 6.5-ಇಂಚಿನ ಎಚ್ + ಎಲ್ಸಿಡಿ ಡಿಸ್ಪ್ಲೇ ಜೊತೆಗೆ 720 x 1600 ಪಿಕ್ಸೆಲ್ ರೆಸ್ಯೂಲೂಶನ್ ಮತ್ತು 90ಎಚ್ಜೆಡ್ ರಿಫ್ರೆಶ್ ರೇಟ್ ಹೊಂದಿದೆ. ಹ್ಯಾಂಡ್‌ಸೆಟ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 700 ಎಸ್ಒಸಿಯಿಂದ ಚಾಲಿತವಾಗಿದ್ದು, ಇದು 4ಜಿಬಿ ರ್ಯಾಮ್ ಮತ್ತು 64ಜಿಬಿ ಆನ್‌ಬೋರ್ಡ್ ಸಂಗ್ರಹಣೆಯೊಂದಿಗೆ ಜೋಡಿಸಲ್ಪಟ್ಟಿದ್ದು ಇದನ್ನು ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಮೂಲಕ ವಿಸ್ತರಿಸಬಹುದು.

ಸ್ಯಾಮ್ಸಂಗ್ ಗೆಲ್ಯಾಕ್ಸಿ ಎ13 5ಜಿ 15 ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000ಎಮ್ಎಎಚ್ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಸ್ಮಾರ್ಟ್‌ಫೋನ್ 50ಎಮ್​ಪಿ ಸಂವೇದಕ, 2ಎಮ್ ಪಿ ಮ್ಯಾಕ್ರೋ ಮತ್ತು 2 ಎಮ್ ಪಿ ಡೆಪ್ತ್ ಸೆನ್ಸಾರ್ ಸೇರಿದಂತೆ ಟ್ರಿಪಲ್ ರಿಯರ್ ಕೆಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ 5 MP ಸೆಲ್ಫಿ ಕೆಮೆರಾ ಸೆನ್ಸಾರ್ ಅಳವಡಿಸಲಾಗಿದೆ

ಇದನ್ನೂ ಓದಿ:    ಕಂಗನಾ ರಣಾವತ್​ ಕಾರಿನ ಮೇಲೆ ದಾಳಿ ಮಾಡಿದ ಪ್ರತಿಭಟನಾಕಾರರು; ವಿಡಿಯೋ ಪೋಸ್ಟ್ ಮಾಡಿದ ನಟಿ

Click on your DTH Provider to Add TV9 Kannada