ಪುನೀತ್ ಯುವರತ್ನ, ಶಿವರಾಂ ಭಕ್ತಿರತ್ನ; ತಿಂಗಳಲ್ಲಿ ಎರಡು ರತ್ನಗಳನ್ನು ಕಳೆದುಕೊಂಡಿದ್ದೇವೆ: ನಿರ್ದೇಶಕ ಭಗವಾನ್ ಕಂಬನಿ

Actor Shivaram: ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಮಾತನಾಡಿ ಶಿವರಾಂ ಅವರನ್ನು ಭಕ್ತಿರತ್ನ ಎಂದು ಕರೆದಿದ್ದಾರೆ. ತಿಂಗಳ ಅವಧಿಯಲ್ಲೇ ಚಿತ್ರರಂಗ ಎರಡು ರತ್ನಗಳನ್ನು ಕಳೆದುಕೊಂಡಿರುವುದಕ್ಕೆ ಅವರು ಕಂಬನಿ ಮಿಡಿದಿದ್ದಾರೆ.

ಪುನೀತ್ ಯುವರತ್ನ, ಶಿವರಾಂ ಭಕ್ತಿರತ್ನ; ತಿಂಗಳಲ್ಲಿ ಎರಡು ರತ್ನಗಳನ್ನು ಕಳೆದುಕೊಂಡಿದ್ದೇವೆ: ನಿರ್ದೇಶಕ ಭಗವಾನ್ ಕಂಬನಿ
| Edited By: shivaprasad.hs

Updated on: Dec 05, 2021 | 6:45 AM

ಚಿತ್ರರಂಗದ ಹಿರಿಯ ನಿರ್ದೇಶಕ ಭಗವಾನ್ ಶಿವರಾಂ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಅಂತಿಮ ದರ್ಶನ ಪಡೆದು ಮಾತನಾಡಿದ ಅವರು ‘‘ತಿಂಗಳ ಅವಧಿಯಲ್ಲಿ ಎರಡು ರತ್ನಗಳನ್ನು ಕಳೆದುಕೊಂಡಿದ್ದೇವೆ. ಒಂದು ಯುವರತ್ನ. ಮತ್ತೊಂದು ಭಕ್ತಿರತ್ನ’’ ಎಂದು ಅವರು ಕಂಬನಿ ನುಡಿದಿದ್ದಾರೆ. ‘‘ಶಿವರಾಂ ನೇರ ಮತ್ತು ನಿಷ್ಠುರವಾಗಿ ಮಾತನಾಡುತ್ತಿದ್ದ ವ್ಯಕ್ತಿ. ಇವರ ನಿರ್ಮಾಣದ ಒಂದು ಚಿತ್ರ ನಿರ್ದೇಶಿಸಿರುವುದು ನನ್ನ ಪುಣ್ಯ. ನನ್ನ 50 ವರ್ಷದ ಆತ್ಮೀಯ ಗೆಳೆಯನನ್ನ ಕಳೆದುಕೊಂಡಿದ್ದೇನೆ. ಚಿತ್ರರಂಗಕ್ಕೆ ಇದೊಂದು ನಷ್ಟ, ಈ ನಷ್ಟ ತುಂಬಲು ಆಗಲ್ಲ’’ ಎಂದು ಭಗವಾನ್ ಭಾವುಕರಾಗಿದ್ದಾರೆ.

ನಟ ಅನಂತ್​ನಾಗ್ ಶಿವರಾಂ ಅವರ ಅಂತಿಮ ದರ್ಶನ ಪಡೆದು, ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ‘ಶಿವರಾಂ ಮತ್ತು ನನ್ನ ಪರಿಚಯ 40 ವರ್ಷಗಳದ್ದು. ಅವರು ನಾವು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದೇವೆ. ಅವರು ಎಲ್ಲಾ ಪಾತ್ರಗಳನ್ನ ಲೀಲಾಜಾಲವಾಗಿ ಮಾಡಿದವರು. ಹೆಚ್ಚಾಗಿ ಹಾಸ್ಯದ ಪಾತ್ರಗಳಲ್ಲಿ ಕಾಣಿಸಿಕೊಂಡವರು. ಎಲ್ಲಾರನ್ನ ನಗಿಸುವ ಭಾವ ಅವರದ್ದು. ಹೆಚ್ಚು ನಾನು ಅವರು ಪೋನ್​ನಲ್ಲಿ ಮಾತಾನಾಡುತ್ತಿದ್ದೆವು. ಎಲ್ಲಕ್ಕಿಂತ ಹೆಚ್ಚಿನದಾಗಿ ಕಲಾವಿದರ ಸಂಘವನ್ನು ಸಂಘಟಿಸಿದ್ದೇ ಅವರು. ಕಲಾವಿಧರ ಸಂಘದ ಕಾರ್ಯದರ್ಶಿಗಳಾಗಿ ನಮನ್ನೆಲ್ಲಾ ಸಂಘಟಿಸಿದ್ದಾರೆ. ಇತ್ತೀಚಿಗೆ ಅವರು ಈ ಕೆಲಸಗಳನ್ನ ಬಿಟ್ಟಿದ್ದರು. ಅವರು ಸದಾ ನಮ್ಮ ಜೊತೆಗೆ ಇರ್ತಾರೆ. ಕನ್ನಡ ಚಿತ್ರರಂಗದ ಒಂದು ಕಂಬವೇ ಹೌದು. ಅವರ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ಅನಂತ್​ನಾಗ್ ನುಡಿದಿದ್ದಾರೆ.

ಚಿತ್ರರಂಗದ ಹಿರಿಯ ನಟ, ನಿರ್ದೇಶಕ ದ್ವಾರಕೀಶ್ ಶಿವರಾಂ ಅವರ ದರ್ಶನ ಪಡೆದು, ಅವರೊಂದಿಗಿನ ನೆನಪುಗಳನ್ನು ಹಂಚಿಕೊಳ್ಳುತ್ತಾ ಭಾವುಕರಾದರು. ‘‘ಶಿವರಾಂರವರು ನಟ, ನಿರ್ದೇಶಕ, ನಿರ್ಮಾಪಕರಾಗಿದ್ದರು. ಅವರು ಕೇವಲ ನಟ ಅಲ್ಲ ನಿರ್ದೇಶಕ, ನಾಟಕ ಪ್ರವೀಣರಾಗಿದ್ದರು. ಆತನ ಸಂದರ್ಶನ, ಮಾತುಗಳನ್ನ ದಿನಾಲೂ ಯೂಟ್ಯೂಬ್ ನಲ್ಲಿ ನೋಡುತ್ತಿರುತ್ತಿದ್ದೆ. ನಾನು ಎಷ್ಟೇ ಮಾತನಾಡಿದರೂ ಕಮ್ಮಿ, ಅಷ್ಟು ಕೆಲಸ ಮಾಡಿದ್ದಾನೆ‌. ಅಂಗವಿಕಲರಿಗೆ ಸಾಕಷ್ಟು ನೆರವು ಶಿವರಾಮಣ್ಣನಿಂದಾಗಿದೆ. ಬಹಳ ನೋವಾಗುತ್ತಿದೆ, ಈ ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ’’ ಎಂದು ಕಂಬನಿ ಮಿಡಿದಿದ್ದಾರೆ.

ದ್ವಾರಕೀಶ್ ಮಾತನಾಡಿರುವ ವಿಡಿಯೋ ಇಲ್ಲಿದೆ:

ಇದನ್ನೂ ಓದಿ:

ಚಿತ್ರರಂಗದ ಹಿರಿಯ ನಟ ಶಿವರಾಂ ನಿಧನಕ್ಕೆ ನಾಡಿನ ಕಂಬನಿ; ನುಡಿನಮನ ಸಲ್ಲಿಸಿದ ವಿವಿಧ ಕ್ಷೇತ್ರದ ಗಣ್ಯರು

ಶಿವರಾಂ ಅವರ ಆ ಆಸೆ ಕೊನೆಗೂ ಈಡೇರಲಿಲ್ಲ; ಬೇಸರ ಹೊರಹಾಕಿದ ಅನಿಲ್​ ಕುಂಬ್ಳೆ

Follow us
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಸರ್ವವಸ್ವವೇ ಆಗಿದ್ದ ತಾಯಿ ಅಗಲಿಕೆ: ವಿನೋದ್ ರಾಜ್ ದುಃಖತಪ್ತ ಮಾತುಗಳು
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ಪ್ರತಿಭಟನೆಗೆ ಅಡ್ಡಿಪಡಿಸುವ ಪೊಲೀಸರು ನಮಗೆ ಅನ್ನ ನೀಡುತ್ತಾರೆಯೇ? ಶಾಲಾ ಬಾಲಕ
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ತಾಳಿ ಕಟ್ಟಿಸಿಕೊಳ್ಳಲು ಒಲ್ಲೆನೆಂದ ಯುವತಿಗೆ ರೂ. 4.70 ಲಕ್ಷ ವಧುದಕ್ಷಿಣೆ?
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಬೆಂಗಳೂರಲ್ಲಿ ಅನಾಮತ್ತಾಗಿ ಉರುಳಿದ ಸೆಲ್ ಪೋನ್ ಟವರ್, ಪ್ರಾಣಹಾನಿ ಇಲ್ಲ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಸಿದ್ದರಾಮಯ್ಯ ಸಿಎಂ ಆದರೆ ಬರ ಯಡಿಯೂರಪ್ಪ ಆದರೆ ಅತಿವೃಷ್ಟಿ: ಜ್ಞಾನೇಂದ್ರ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಉಡುಪಿ ಕಾರ್ಟೂನ್ ಹಬ್ಬಕ್ಕೆ ವಿಭಿನ್ನವಾಗಿ ಶುಭ ಕೋರಿದ ಮರಳು ಶಿಲ್ಪ ಕಲಾವಿದ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬೆಂಗಳೂರಿನಲ್ಲಿ ಕಟ್ಟಡ ಸಹಿತ ಧರೆಗುರುಳಿದ ಮೊಬೈಲ್ ಟವರ್, ವಿಡಿಯೋ ಇಲ್ಲಿದೆ
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಬಿಗ್ ಬಾಸ್​ನಲ್ಲಿ ಹದಗೆಟ್ಟಿತು ವರ್ತೂರು ಸಂತೋಷ್​-ತನಿಷಾ ಫ್ರೆಂಡ್​ಶಿಪ್
ಯಡಿಯೂರಪ್ಪರನ್ನು ಟೀಕಿಸುವ ನೈತಿಕತೆ ಬಸನಗೌಡ ಪಾಟೀಲ್ ಗಿಲ್ಲ: ರೇಣುಕಾಚಾರ್ಯ
ಯಡಿಯೂರಪ್ಪರನ್ನು ಟೀಕಿಸುವ ನೈತಿಕತೆ ಬಸನಗೌಡ ಪಾಟೀಲ್ ಗಿಲ್ಲ: ರೇಣುಕಾಚಾರ್ಯ
ಸಚಿವ ಭೈರತಿ ಸುರೇಶ್ ಮತ್ತು ಬಸನಗೌಡ ಯತ್ನಾಳ್ ನಡುವಿನ ಚರ್ಚೆ ಗಮನ ಸೆಳೆಯಿತು
ಸಚಿವ ಭೈರತಿ ಸುರೇಶ್ ಮತ್ತು ಬಸನಗೌಡ ಯತ್ನಾಳ್ ನಡುವಿನ ಚರ್ಚೆ ಗಮನ ಸೆಳೆಯಿತು