ಶಿವರಾಂ ಅವರ ಆ ಆಸೆ ಕೊನೆಗೂ ಈಡೇರಲಿಲ್ಲ; ಬೇಸರ ಹೊರಹಾಕಿದ ಅನಿಲ್​ ಕುಂಬ್ಳೆ

ಟೀಂ ಇಂಡಿಯಾ ಮಾಜಿ ಕ್ರಿಕೆಟ್​ ಆಟಗಾರ ಅನಿಲ್​ ಕುಂಬ್ಳೆ ಕೂಡ ಶಿವರಾಂ ಸಾವಿಗೆ ಬೇಸರ ಹೊರಹಾಕಿದ್ದಾರೆ. ಅವರ ಜತೆ ಕಳೆದ ಸಮಯವನ್ನು ಅವರು ನೆನಪಿಸಿಕೊಂಡಿದ್ದಾರೆ.

ಹಿರಿಯ ನಟ ಶಿವರಾಂ ಅವರು 83ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದಾರೆ. ಸ್ಯಾಂಡಲ್​ವುಡ್​ಗೆ ಸಾಕಷ್ಟು ಕೊಡುಗೆ ನೀಡಿದ್ದ ಅವರನ್ನು ಕಳೆದುಕೊಂಡಿರುವುದು ಎಲ್ಲರಿಗೂ ಸಾಕಷ್ಟು ನೋವು ತಂದಿದೆ. ಶಿವರಾಂ ಅವರ ಬಗ್ಗೆ ಸಾಕಷ್ಟು ಹಿರಿಯ ನಟರು, ರಾಜಕಾರಣಿಗಳು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ. ಅವರ ಕುಟುಂಬಕ್ಕೆ ಸಂತಾಪ ಹೇಳುವ ಕೆಲಸವನ್ನೂ ಮಾಡಲಾಗುತ್ತಿದೆ. ಈ ಮಧ್ಯೆ ಟೀಂ ಇಂಡಿಯಾ ಮಾಜಿ ಕ್ರಿಕೆಟ್​ ಆಟಗಾರ ಅನಿಲ್​ ಕುಂಬ್ಳೆ ಕೂಡ ಶಿವರಾಂ ಸಾವಿಗೆ ಬೇಸರ ಹೊರಹಾಕಿದ್ದಾರೆ. ಅವರ ಜತೆ ಕಳೆದ ಸಮಯವನ್ನು ಅವರು ನೆನಪಿಸಿಕೊಂಡಿದ್ದಾರೆ. ಅನಿಲ್​ ಕುಂಬ್ಳೆಗೆ ಫೋಟೋಗ್ರಫಿ ಮೇಲೆ ಸಾಕಷ್ಟು ಆಸಕ್ತಿ ಇದೆ. ಕುಂಬ್ಳೆ ಜತೆ ಕಾಡಿಗೆ ಹೋಗಿ ಫೋಟೋಗ್ರಫಿ ಮಾಡಬೇಕು ಎನ್ನುವ ಆಸೆಯನ್ನು ಶಿವರಾಂ ಇಟ್ಟುಕೊಂಡಿದ್ದರು. ಅದು ಈಡೇರುವ ಮೊದಲೇ ಅವರು ಇಹಲೋಕ ತ್ಯಜಿಸಿದ್ದಾರೆ. ಈ ಬಗ್ಗೆ ಕುಂಬ್ಳೆ ಮಾಹಿತಿ ಹಂಚಿಕೊಂಡಿದ್ದಾರೆ.

‘ನಮ್ಮ ತಂದೆ ಶಿವರಾಮ್ ​ಇನ್ನು ನಮ್ಮ ಜತೆ ಇಲ್ಲ. ಶಿವರಾಮ್​ ಅವರು ಭಗವಂತನ ಪಾದ ಸೇರಿದ್ದಾರೆ. ಆಸ್ಪತ್ರೆ ವತಿಯಿಂದ ಎಲ್ಲಾ ರೀತಿ ಚಿಕಿತ್ಸೆ ನೀಡಿದ್ದಾರೆ. ಆದರೆ ಶಿವರಾಮ್​ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನು ನಾವು ಒಪ್ಪಿಕೊಳ್ಳಲೇ ಬೇಕು’ ಎಂದು ಶಿವರಾಂ ಮಗ ಲಕ್ಷ್ಮೀಶ್​ ತಂದೆಯ ಸಾವನ್ನು ಖಚಿತಪಡಿಸಿದ್ದರು.

ಇದನ್ನೂ ಓದಿ: Rashi Brothers: ಶಿವರಾಂ ಸ್ಥಾಪಿಸಿದ್ದ ರಾಶಿ ಬ್ರದರ್ಸ್​ ನಿರ್ಮಾಣ ಸಂಸ್ಥೆ ಹೆಸರಿನ ಅರ್ಥವೇನು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ

Click on your DTH Provider to Add TV9 Kannada