ಅಪರೂಪದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿರುವ ಭಾರತೀಯ ಮೂಲದ ಎಜಾಜ್ ಪಟೇಲ್ ಹೆಸರು ಕ್ರಿಕೆಟ್ ಇತಿಹಾಸದಲ್ಲಿ ಅಜರಾಮರ!
ಹೆಸರೇ ಹೇಳುವಂತೆ ಎಜಾಜ್ ಪಟೇಲ್ ಭಾರತೀಯ ಮೂಲದವರು ಮತ್ತು ಅವರ ಕುಟುಂಬ ಮುಂಬೈನಲ್ಲಿ ವಾಸವಾಗಿತ್ತು. ಚಿಕ್ಕ ವಯಸ್ಸಿನಲ್ಲೇ ನ್ಯೂಜಿಲೆಂಡ್ ತೆರಳಿದ ಎಜಾಜ್ ಬೆಳೆಯುತ್ತಾ ಒಬ್ಬ ಅತ್ಯುತ್ತಮ ಎಡಗೈ ಸ್ಪಿನ್ನರ್ ಆಗಿ ರೂಪುಗೊಂಡರು.
ಟೆಸ್ಟ್ ಕ್ರಿಕೆಟ್ ಇನ್ನಿಂಗ್ಸೊಂದರಲ್ಲಿ ಒಬ್ಬ ಬೌಲರ್ 5 ವಿಕೆಟ್ ಪಡೆದರೆ ಅದನ್ನು ಸಾಧನೆ ಎಂದು ಪರಿಗಣಿಸಲಾಗುತ್ತದೆ. ಒಬ್ಬ ಬ್ಯಾಟರ್ ಶತಕ ಬಾರಿಸುವುದಕ್ಕೆ ಬೌಲರೊಬ್ಬನ 5-ವಿಕೆಟ್ ಸಾಧನೆಯನ್ನು ಹೋಲಿಸಲಾಗುತ್ತದೆ. ಟೆಸ್ಟ್ ಪಂದ್ಯವೊಂದರಲ್ಲಿ 10 ವಿಕೆಟ್ಗಳನ್ನು ಪಡೆದರೆ ಅದು ಇನ್ನೂ ದೊಡ್ಡ ಸಾಧನೆ. ಬಹಳ ಕಡಿಮೆ ಸಂದರ್ಭಗಳಲ್ಲಿ ಬೌಲರ್ಗಳು 10 ವಿಕೆಟ್ ಪಡೆಯುವ ಸಾಧನೆ ಮಾಡುತ್ತಾರೆ. ಆದರೆ, ಒಂದೇ ಇನ್ನಿಂಗ್ಸ್ನಲ್ಲಿ ಒಬ್ಬ ಬೌಲರ್ ಎಲ್ಲ ವಿಕೆಟ್ಗಳನ್ನು ತಾನೊಬ್ಬನೇ ಬಾಚಿಕೊಂಡರೆ ಅದು ಅಪರೂಪದ ದಾಖಲೆ ಮಾತ್ರವಲ್ಲ ಪವಾಡವೂ ಅನಿಸಿಕೊಳ್ಳುತ್ತದೆ. ನೀವೇ ಒಮ್ಮೆ ಯೋಚಿಸಿ ನೋಡಿ. 144 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಮೂವರು ಬೌಲರ್ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ನ ಆಫ್ ಸ್ಪಿನ್ನರ್ ಜಿಮ್ ಲೇಕರ್ (1956, ಆಸ್ಟ್ರೇಲಿಯ ವಿರುದ್ಧ, ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್) ಭಾರತದ ಅನಿಲ್ ಕುಂಬ್ಳೆ (1999, ಪಾಕಿಸ್ತಾನದ ವಿರುದ್ಧ, ಫಿರೋಜ್ ಶಾ ಕೋಟ್ಲಾ, ದೆಹಲಿ) ಮತ್ತು ನ್ಯೂಜಿಲೆಂಡ್ನ ಎಜಾಜ್ ಪಟೇಲ್ (ಶನಿವಾರ, ಡಿಸೆಂಬರ್ 4, 2021, ಭಾರತದ ವಿರುದ್ಧ, ವಾಂಖೆಡೆ ಮೈದಾನ, ಮುಂಬೈ). ಮೂವರೂ ಸ್ಪಿನ್ನರ್ಗಳೆನ್ನೆವುದು ವಿಶೇಷ!
ಲೇಕರ್ ಅವರ ಸಾಧನೆ ಮತ್ತೂ ಪವಾಡ ಸದೃಶವಾಗಿದೆ. ಅದೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಅವರು 9 ವಿಕೆಟ್ (9/37) ಪಡೆದಿದ್ದರು. ಅಂದರೆ, ಲೇಕರ್ ಆ ಟೆಸ್ಟ್ನಲ್ಲಿ 90 ರನ್ಗಳಿಗೆ 19 ವಿಕೆಟ್ ಪಡೆದರು!!
ಹೆಸರೇ ಹೇಳುವಂತೆ ಎಜಾಜ್ ಪಟೇಲ್ ಭಾರತೀಯ ಮೂಲದವರು ಮತ್ತು ಅವರ ಕುಟುಂಬ ಮುಂಬೈನಲ್ಲಿ ವಾಸವಾಗಿತ್ತು. ಚಿಕ್ಕ ವಯಸ್ಸಿನಲ್ಲೇ ನ್ಯೂಜಿಲೆಂಡ್ ತೆರಳಿದ ಎಜಾಜ್ ಬೆಳೆಯುತ್ತಾ ಒಬ್ಬ ಅತ್ಯುತ್ತಮ ಎಡಗೈ ಸ್ಪಿನ್ನರ್ ಆಗಿ ರೂಪುಗೊಂಡರು.
ಭಾರತೀಯ ಮೂಲದ ಬಹಳಷ್ಟು ಆಟಗಾರರು ಈಗ ಕಿವೀಸ್ ತಂಡಕ್ಕೆ ಆಡುತ್ತಿದ್ದಾರೆ ಮತ್ತು ಹಿಂದೆ ಅಡಿದ್ದಾರೆ. ಈಗ ಭಾರತ ಪ್ರವಾಸದಲ್ಲಿರುವ ತಂಡದ ಭಾಗವಾಗಿರುವ ಇಶ್ ಸೋಧಿ, ರಚಿನ್ ರವೀಂದ್ರ ಮತ್ತು ಅವರಿಗಿಂತ ಮೊದಲು ಆಡಿದ ದೀಪಕ್ ಪಟೇಲ್, ಜೀತನ್ ಪಟೇಲ್, ಜೀತ್ ರಾವಲ್, ರಾನ್ನೀ ಹೀರಾ ಮತ್ತು ತರುಣ್ ನೆಥುಲಾ ಭಾರತದಿಂದ ವಲಸೆ ಹೋದವರು.
ಭಾರತದ ವಿರುದ್ಧ ಮತ್ತು ಭಾರತದಲ್ಲಿ ಎಜಾಜ್ ಈ ಸಾಧನೆ ಮಾಡಿರುವುದು ಮತ್ತಷ್ಟು ವಿಶೇಷವೆನಿಸುತ್ತದೆ. 33-ವರ್ಷ ವಯಸ್ಸಿನ ಎಜಾಜ್ಗೆ ಇದು ಕೇವಲ 11 ನೇ ಟೆಸ್ಟ್. ಸ್ಪಲ್ಪ ಧಡೂತಿ ಅನಿಸಿದರೂ ಅವರ ಬೌಲಿಂಗ್ ಶೈಲಿ ಚೆನ್ನಾಗಿದೆ. ಮುಂದೆಯೂ ಕೆಲ ದಾಖಲೆಗಳನ್ನು ಮಾಡುವ ಕ್ಷಮತೆ ಅವರಲ್ಲಿದೆ.
ಇದನ್ನೂ ಓದಿ: Viral Video: ಅಪರಿಚಿತ ವ್ಯಕ್ತಿ ನೀಡಿದ ಚಾಕಲೇಟ್ಗೆ ಮಕ್ಕಳ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? ವಿಡಿಯೋ ನೋಡಿ