Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರಳವಾಗಿ ಡ್ರೆಸ್ ಮಾಡಿಕೊಂಡರೂ ಟಿ ಎಮ್ ಸಿ ಸಂಸದೆ ನುಸ್ರತ್ ಜಹಾನ್ ಸೌಂದರ್ಯ ನೋಡುಗರನ್ನು ತಡೆದು ನಿಲ್ಲಿಸುತ್ತದೆ!

ಸರಳವಾಗಿ ಡ್ರೆಸ್ ಮಾಡಿಕೊಂಡರೂ ಟಿ ಎಮ್ ಸಿ ಸಂಸದೆ ನುಸ್ರತ್ ಜಹಾನ್ ಸೌಂದರ್ಯ ನೋಡುಗರನ್ನು ತಡೆದು ನಿಲ್ಲಿಸುತ್ತದೆ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 06, 2021 | 4:40 PM

ಹೆಚ್ಚಿನ ಆಭರಣಗಳನ್ನು ಬಳಸುವ ಗೋಜಿಗೆ ಹೋಗದೆ, ಆಕರ್ಷಕವಾಗಿ ಕಾಣುತ್ತಿರುವ ನೀಲಿವರ್ಣದ ಕಿವಿಯುಂಗುರ ಧರಿಸಿ ತಮ್ಮ ಸರಳವಾದ ಮೇಕಪನ್ನು ನೀಲಿ ಕಲರ್ನ ಬಿಂದಿಯೊಂದಿಗೆ ಪೂರ್ತಿಗೊಳಿಸುತ್ತಾರೆ.

ತಿಳಿ ಆಗಸ ಬಣ್ಣದ ನೂಲಿನ ಸೀರೆಯುಟ್ಟು, ಮನೆ ಮಾಳಿಗೆ ಮೇಲೆ ನಿಂತು ಚಹಾ ಸವಿಯುತ್ತಿರುವ ಈ ಸುಂದರಿಯನ್ನು ನೀವು ಗುರುತಿಸುತ್ತೀರಿ ತಾನೆ? ಬಂಗಾಳದ ಸಾಂಪ್ರದಾಯಿಕ ಸುಂದರಿ ನುಸ್ರತ್ ಜಹಾನ್ ಟಿ ಎಮ್ ಸಿ ಪಕ್ಷದ ಸಂಸದೆಯೂ ಹೌದು ಮತ್ತು ರಾಜಕೀಯ ಕ್ಷೇತ್ರಕ್ಕೆ ಕಾಲಿಡುವ ಮೊದಲು ಬಂಗಾಳ ಚಿತ್ರರಂಗದಲ್ಲಿ ಜನಪ್ರಿಯ ತಾರೆಯಾಗಿದ್ದು ಸಹ ಸತ್ಯ. ಹ್ಯಾಂಡ್ಲೂಮ್ ಸೀರೆಯುಟ್ಟು ತಾವು ತೆಗೆಸಿಕೊಂಡಿರುವ ಚಿತ್ರಗಳನ್ನು ನುಸ್ರತ್ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ಅವರು ಉಟ್ಟಿರುವ ಸೀರೆಯ ಮೂಲ ಬಂಗಾಳದ್ದು ಅಂತ ಹೇಳಲಾಗುತ್ತಿದೆ. ಸುಂದರಿ ನುಸ್ರತ್ ಈ ಸೀರೆಯಲ್ಲಿ ಮತ್ತಷ್ಟು ಸೊಗಸಾಗಿ ಕಾಣುತ್ತಿದ್ದಾರೆ. ಸೀರಿಗೆ ಅವರು ಪಿಂಕ್ ಬಣ್ಣದ ರವಿಕೆ ಜೊತೆಯಾಗಿಸಿದ್ದಾರೆ.

ಇತ್ತೀಚಿಗೆ ಅಂದರೆ ಆಗಸ್ಟ್​​​​ನಲ್ಲಷ್ಟೇ ಗಂಡಮಗುವೊಂದಕ್ಕೆ ಜನ್ಮ ನೀಡಿರುವ ನುಸ್ರತ್ ಈ ಫೋಟೋಶೂಟ್ ಗೆ ಹೇಗೆ ರೆಡಿಯಾಗಿದ್ದಾರೆ ಅಂತ ಗಮನಿದ್ದೀರಾ? ದಟ್ಟವಾದ ಕಪ್ಪು ಐಲೈನರ್ ಜೊತೆಗೆ ಕಣ್ಣಿನ ಮೇಲೆ ಒಂದು ಚೂರು ಮಸ್ಕರದ ಲೇಪ ನೀಡಿದ್ದಾರೆ. ಕೆನ್ನೆಗಳ ಮೇಲೆ ಬ್ಲಷ್ ಮಾಡಿಸಿಕೊಂಡಿದ್ದಾರೆ ಮತ್ತು ತುಟಿಗಳಿಗೆ ಪಿಂಕ್ ಬಣ್ಣದ ಲಿಪ್ ಸ್ಟಿಕ್ ತೀಡಿದ್ದಾರೆ.

ಹೆಚ್ಚಿನ ಆಭರಣಗಳನ್ನು ಬಳಸುವ ಗೋಜಿಗೆ ಹೋಗದೆ, ಆಕರ್ಷಕವಾಗಿ ಕಾಣುತ್ತಿರುವ ನೀಲಿವರ್ಣದ ಕಿವಿಯುಂಗುರ ಧರಿಸಿ ತಮ್ಮ ಸರಳವಾದ ಮೇಕಪನ್ನು ನೀಲಿ ಕಲರ್ನ ಬಿಂದಿಯೊಂದಿಗೆ ಪೂರ್ತಿಗೊಳಿಸುತ್ತಾರೆ.

ನುಸ್ರತ್ ತಮ್ಮ ಪೋಸ್ಟ್​ಗೆ ಆರ್ಥಗರ್ಭಿತವಾಗಿರುವ ಶೀರ್ಷಿಕೆ ನೀಡಿದ್ದಾರೆ. ಇದು ಭಗವಾನ್ ಬುದ್ಧ ಹೇಳಿರುವ ಮಾತು. ‘ನೀವು ಏನು ಅಂದುಕೊಳ್ಳುತ್ತೀರೋ ಅದು ಆಗುತ್ತೀರಿ, ನಿಮಗೆ ಬೇಕೆನಿಸಿದ್ದು ನಿಮ್ಮೆಡೆ ಆಕರ್ಷಣೆಗೊಳಗಾಗುತ್ತದೆ ಮತ್ತು ನೀವು ಕಲ್ಪಿಸಿಕೊಳ್ಳುವುದನ್ನು ಸೃಷ್ಟಿಸುತ್ತೀರಿ.’

ನುಸ್ರತ್ ತಮ್ಮ ಮಗುವಿಗೆ ಯಿಶಾನ್ ಅಂತ ಹೆಸರಿಟ್ಟಿದ್ದಾರೆ. ಮಗುವಿನ ತಂದೆ ಯಾರು ಅನ್ನೋದು ಬಹಳ ಚರ್ಚೆಯಾಗಿತ್ತು. ಆದರೆ ಮಗುವಿನ ಜನ್ಮ ಪ್ರಮಾಣ ಪತ್ರದಲ್ಲಿ ಮಗುವಿನ ತಂದೆಯ ಹೆಸರು ಯಶ್ ದಾಸ್ಗುಪ್ತಾ ಆಂತಿದೆ.

ಇದನ್ನೂ ಓದಿ:   ರಾಯಚೂರಿನಲ್ಲಿ ರಾಶಿಗಟ್ಟಲೆ ಔಷಧಿ ಹೂಳಲು ಯತ್ನ; ವಿಡಿಯೋ ಮಾಡುತ್ತಿದ್ದಂತೆ ಕಾಲ್ಕಿತ್ತ ಓಪೆಕ್ ಆಸ್ಪತ್ರೆ ಸಿಬ್ಬಂದಿ