ಪೆಡಲ್ ಮಾಡದೆ ಸೈಕಲ್ ಓಡುವುದನ್ನು ನೋಡಿದಿರಾ? ಇಲೆಕ್ಟ್ರಿಕ್ ವಾಹನಗಳ ಯುಗದಲ್ಲಿ ಇಲೆಕ್ಟ್ರಿಕ್ ಸೈಕಲ್ ಸಹ ಬಂದಿದೆ!!
ಅಂದಹಾಗೆ, ಇದು ಆಪ್ಪಟ ಮೇಕ್ ಇನ್ ಇಂಡಿಯಾ ಉತ್ತಾದನೆ. ಇದರ ವಿನ್ಯಾಸವೂ ಭಾರತದಲ್ಲಿ ರೂಪುಗೊಂಡಿದೆ.
ಈ ಸೈಕಲನ್ನು ನೋಡಿದ್ದೀರಾ? ಏನ್ ಸ್ವಾಮಿ ಸೈಕಲ್ ನೋಡಿದ್ದೀರಾ ಅಂತ ಕೇಳ್ತೀರಲ್ಲ…ಯಾರಾದರೂ ಸೈಕಲ್ ನೋಡದಿರುತ್ತಾರಾ? ಅಂತ ನಮ್ಮನ್ನು ಬೈದುಕೊಳ್ಳಬೇಡಿ. ವಿಷಯ ಹಾಗಲ್ಲ ಮಾರಾಯ್ರೇ, ನಾವು ಹೇಳಿದ್ದು ಅದಲ್ಲ. ನೋಡಲು ಇದು ಸೈಕಲ್ ಹಾಗೆ ಕಂಡರೂ ಇದು ನೆಕ್ಸ್ ಜು ಮೊಬಿಲಿಟಿ ಕಂಪನಿ ಲಾಂಚ್ ಮಾಡಿರುವ ಮೂರು ಗೇರಿನ ರಾಂಪಸ್+ ಇಲೆಕ್ಟ್ರಿಕ್ ಸೈಕಲ್. ಇದು 36 ವಿ. 250 ವ್ಯಾಟ್ ಹೆಚ್ ಯು ಬಿ ಬಿ ಎಲ್ ಡಿ ಸಿ ಮೋಟಾರ್ ಸಹಾಯದಿಂದ ಚಲಿಸುತ್ತದೆ. ಇದರ ಇನ್-ಫ್ರೇಮ್ 36 ವಿ, 5.2ಎಎಚ್ ಲಿಥಿಯಂ ಬ್ಯಾಟರಿ 750 ಸೈಕಲ್ ಬ್ಯಾಟರಿ ಲೈಫ್ ನೀಡುತ್ತದೆ ಮತ್ತು ಸುಮಾರು ಮೂರು ಗಂಟೆಗಳ ಸಮಯದಲ್ಲಿ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ವೇಗಕ್ಕೆ ಸಂಬಂಧಿಸಿದಂತೆ ಹೇಳವುದಾದರೆ ಸೈಕಲ್ ಎರಡು ಮೋಡ್ಗಳಲ್ಲಿ ಓಡುತ್ತದೆ-ಪ್ರತಿ ಗಂಟೆಗೆ 25 ಕಿಮೀ ವೇಗದ ಥ್ರಾಟ್ಲ್ ಮೋಡ್ 35 ಕಿಮೀ ಪೆಡಿಲೆಕ್ ಮೋಡ್. ಅಂದ ಹಾಗೆ ನಿಮಗೆ ಇದರ ಬೆಲೆಯನ್ನೂ ತಿಳಿಸಿಬಿಡ್ತೀವಿ ಮಾರಾಯ್ರೇ. ರೂ 32,403.
ರಾಂಪಸ್ ಎಲೆಕ್ಟ್ರಿಕ್ ಸೈಕಲ್ ಗೆ ಫ್ರಂಟ್ ಸಸ್ಪೆನ್ಷನ್ ನೊಂದಿಗೆ 26 ಇಂಚಿನ ಟೈರ್ಗಳಿದ್ದು ಡುಯಲ್ ಡಿಸ್ಕ್ ಬ್ರೇಕ್ಗಳಿವೆ. ಸೈಕಲ್ ಗೆ ಅಳವಡಿಸಿರುವ ಮೋಟಾರು ಮತ್ತು ಬ್ಯಾಟರಿ ಎರಡೂ ಒಂದೂವರೆ ವರ್ಷ ಆವಧಿಯ ವಾರಂಟಿಯೊಂದಿಗೆ ಬರುತ್ತವೆ.
ಅಂದಹಾಗೆ, ಇದು ಆಪ್ಪಟ ಮೇಕ್ ಇನ್ ಇಂಡಿಯಾ ಉತ್ತಾದನೆ. ಇದರ ವಿನ್ಯಾಸವೂ ಭಾರತದಲ್ಲಿ ರೂಪುಗೊಂಡಿದೆ. ನೆಕ್ಸ್ ಜು ಮೊಬಿಲಿಟಿ ಕಂಪನಿಯಯ ಡೀಲರ್ ಗಳಲ್ಲಿ, ಕಂಪನಿಯ ವೆಬ್ಸೈಟ್ನಲ್ಲಿ ರಾಂಪಸ್ ನಿಮಗೆ ಸಿಗುತ್ತದೆ. ನಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಅಮೆಜಾನ್ ಮತ್ತು ಪೇಟಿಎಮ್ ಮಾಲ್ ಗಳಲ್ಲಿ ಇದು ದೊರೆಯಲಿದೆ.
ಇದನ್ನೂ ಓದಿ: MS Dhoni: ಧೋನಿ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ಯಾಂಡಲ್ವುಡ್ ನಟಿಯ ವಿಡಿಯೋ ವೈರಲ್