MS Dhoni: ಧೋನಿ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ಯಾಂಡಲ್​​ವುಡ್ ನಟಿಯ ವಿಡಿಯೋ ವೈರಲ್

TV9 Digital Desk

| Edited By: Vinay Bhat

Updated on:Dec 04, 2021 | 10:54 AM

Raai Laxmi Dhoni Breakup: 2009 ರಲ್ಲಿ ಸ್ಯಾಂಡಲ್​​ವುಡ್, ಕಾಲಿವುಡ್​ನಲ್ಲಿ ಮಿಂಚುತ್ತಿದ್ದ ನಟಿ ಲಕ್ಷ್ಮೀ ರೈ ಜೊತೆ ಧೋನಿ ಡೇಟಿಂಗ್ ಮಾಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ಈ ಕುರಿತು ಸ್ವತಃ ಲಕ್ಷ್ಮೀ ರೈ ಕೂಡ ಮಾತನಾಡಿದ್ದರು. ಸದ್ಯ ಆ ವಿಡಿಯೋ ಮತ್ತೊಮ್ಮೆ ವೈರಲ್ ಆಗುತ್ತಿದೆ.

MS Dhoni: ಧೋನಿ ಜೊತೆಗಿನ ಬ್ರೇಕ್ ಅಪ್ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸ್ಯಾಂಡಲ್​​ವುಡ್ ನಟಿಯ ವಿಡಿಯೋ ವೈರಲ್
Raai Laxmi and MS Dhoni

ಭಾರತ ಕ್ರಿಕೆಟ್ (Indian Cricket) ತಂಡದ ಮಾಜಿ ನಾಯಕ ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ (MS Dhoni) ಇತ್ತೀಚೆಗೆ ಟಿ20 ವಿಶ್ವಕಪ್​ನಲ್ಲಿ (T20 World Cup) ಟೀಮ್ ಇಂಡಿಯಾ (Team India) ಮೆಂಟರ್ ಆಗಿ ಕಾರ್ಯನಿರ್ವಹಿಸಿದ್ದರು. ಆದರೆ, ಇಲ್ಲಿ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್​ನಿಂದ ದೂರವಾದ ಬಳಿಕ ಐಪಿಎಲ್​ನಲ್ಲಿ ಧೋನಿ ಕಾಣಿಸುತ್ತಾರೆ. ಅದುಬಿಟ್ಟರೆ ತನ್ನ ಮಡದಿ ಸಾಕ್ಷಿ (Sakshi Dhoni) ಹಾಗೂ ಮಗಳು ಝೀವಾ (Ziva Dhoni) ಜೊತೆ ಹೆಚ್ಚಿನ ಸಮಯ ಕಳೆಯುತ್ತಿರುತ್ತಾರೆ. 2010 ರಲ್ಲಿ ಧೋನಿ ಸಾಕ್ಷಿ ಅವರನ್ನು ವಿವಾಹವಾದರು. ಆದರೆ, ಮದುವೆಗೂ ಮುನ್ನ ಧೋನಿ (Dhoni Girlfriend) ಕೆಲವು ನಟಿಯರ ಜೊತೆಯಲ್ಲಿ ಡೇಟಿಂಗ್ ಮಾಡಿದ್ದಾರೆ ಎನ್ನುವ ಸುದ್ದಿಯಾಗಿದ್ದವು. ಪ್ರಮುಖವಾಗಿ 2009 ರಲ್ಲಿ ಸ್ಯಾಂಡಲ್​​ವುಡ್, ಕಾಲಿವುಡ್​ನಲ್ಲಿ ಮಿಂಚುತ್ತಿದ್ದ ನಟಿ ಲಕ್ಷ್ಮೀ ರೈ (Lakshmi Rai) ಜೊತೆ ಧೋನಿ ಡೇಟಿಂಗ್ ಮಾಡಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿದ್ದವು. ಈ ಕುರಿತು ಸ್ವತಃ ಲಕ್ಷ್ಮೀ ರೈ (Raai Laxmi) ಕೂಡ ಮಾತನಾಡಿದ್ದರು. ಸದ್ಯ ಆ ವಿಡಿಯೋ ಮತ್ತೊಮ್ಮೆ ವೈರಲ್ ಆಗುತ್ತಿದೆ (Video Viral).

ಹೌದು, ತಮ್ಮ ಹಾಗೂ ಧೋನಿ ನಡುವಣ ಬ್ರೇಕ್‌ ಅ‌ಪ್‌ ಬಗ್ಗೆ 2014ರಲ್ಲಿ ಲಕ್ಷ್ಮೀ ರೈ ಮಾತನಾಡಿರುವ ವಿಡಿಯೋ ವೈರಲ್ ಆಗುತ್ತಿದೆ. “ಧೋನಿ ಜೊತೆಗೆ ನನ್ನ ಸಂಬಂಧ ಒಂದು ರೀತಿಯ ಕಲೆ ಇದ್ದಂತೆ ಹಾಗೂ ಅದು ಬಹು ಕಾಲದವರೆಗೂ ಮಾಸುವುದಿಲ್ಲ ಎಂದು ನಂಬಿದ್ದೇನೆ. ನಾವು ಬೇರೆಯಾಗಿ ಐದು ವರ್ಷಗಳಾದರೂ ಸಹ ಜನ ಈ ಬಗ್ಗೆ ಮಾತನಾಡುತ್ತಿರುತ್ತಾರೆ,” ಎಂದು ಇದರಲ್ಲಿ ಹೇಳಿಕೊಂಡಿದ್ದಾರೆ.

ಧೋನಿ ಹೊರತುಪಡಿಸಿ ಮಿಕ್ಕ ಯಾರೊಂದಿಗಿನ ಜೊತೆಗೆ ತಮ್ಮ ರೊಮ್ಯಾಂಟಿಕ್ ಸಂಬಂಧ ಅಷ್ಟಾಗಿ ಸುದ್ದಿ ಮಾಡಲಿಲ್ಲ ಎಂದು ಹೇಳಿಕೊಂಡಿರುವ ಲಕ್ಷ್ಮೀ ಬ್ರೇಕ್‌ ಅಪ್ ಆದ ಬಳಿಕವೂ ತಮ್ಮಿಬ್ಬರ ನಡುವೆ ಪರಸ್ಪರ ಗೌರವವಿದೆ ಎಂಬ ಮಾತುಗಳನ್ನು ಆಡಿದ್ದಾರೆ. “ಧೋನಿ ಒಬ್ಬ ಒಳ್ಳೆಯ ವ್ಯಕ್ತಿ. ಯಾವುದೇ ಹುಡುಗಿ ಮದುವೆ ಮಾಡಿಕೊಳ್ಳಲು ಇಷ್ಟ ಪಡುವಂಥ ವ್ಯಕ್ತಿಯಾದ ಧೋನಿ ಒಬ್ಬ ಕರುಣಾಮಯಿ ಹಾಗೂ ಸಮತೋಲಿತ ವ್ಯಕ್ತಿ,” ಎಂದು ಹೇಳಿದ್ದಾರೆ.

ಮದುವೆಗೂ ಮುನ್ನ ಧೋನಿ ಆಗಾಗ ಕೆಲವೊಂದು ರಿಲೇಷನ್‌ಶಿಪ್‌ಗಳ ಗಾಸಿಪ್‌ಗೆ ಸಿಕ್ಕಿ ಹಾಕಿಕೊಳ್ಳುತ್ತಿದ್ದರು. ಈ ಸ್ಟಾರ್‌ ಕ್ರಿಕೆಟರ್‌ ಒಂದೊಮ್ಮೆ ಮಾಡೆಲ್ ಹಾಗೂ ನಟಿ ಲಕ್ಷ್ಮೀ ರೈ ಜೊತೆಗೆ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿಗಳು ಹಬ್ಬಿದ್ದವು. 2008-2009ರಲ್ಲಿ ಐಪಿಎಲ್‌ ಪಾರ್ಟಿಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು ಎಂಬ ವರದಿಗಳು ಬರತೊಡಗಿದ್ದವು. ಲಕ್ಷ್ಮೀ ಹುಟ್ಟುಹಬ್ಬದ ಪಾರ್ಟಿಗೆ ತಮ್ಮ ಸ್ನೇಹಿತ ಸುರೇಶ್ ರೈನಾ ಜೊತೆಗೆ ಧೋನಿ ಹಾಜರಾಗುತ್ತಿದ್ದರಂತೆ.

ಕನ್ನಡದಲ್ಲಿ ನಟಿಸಿದ್ದರು ಲಕ್ಷ್ಮೀ ರೈ:

ಹೌದು, ಲಕ್ಷ್ಮಿ ರೈ ಅವರು ಕನ್ನಡತಿ. ಆದರೂ ಕೂಡ ಇವರು ತಮಿಳಿನಲ್ಲೇ ಹೆಚ್ಚು ಫೇಮಸ್​​. ಇವರು ಬೆಂಗಳೂರಿನವರಾಗಿದ್ದು ಸ್ಯಾಂಡಲ್​ವುಡ್​ನಿಂದಲೇ ಸಿನಿಮಾ ಕರಿಯೆರ್​ ಆರಂಭಿಸಿದರು. ಲಕ್ಷ್ಮಿ ರೈ ಕನ್ನಡದಲ್ಲೇ ಚಿತ್ರರಂಗದ ಪ್ರವೇಶ ಮಾಡಿದ್ದು.​ ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್​ ಅವರು ಅಭಿನಯ ಮಾಡಿರುವ ವಾಲ್ಮೀಕಿ ಚಿತ್ರದಿಂದಲೇ ಮೊದಲ ಕ್ಯಾಮೆರಾ ಎದುರಿಸಿದ್ದರು. ಆದರೆ ಅದು ಬಿಡುಗಡೆ​ ಆಗಲು ತಡವಾದ ಕಾರಣ ತಮಿಳು ಸಿನಿಮಾಗಳು ಮೊದಲು ರಿಲೀಸ್​ ಆದವು ಎಂದು ಹೇಳಲಾಗಿದೆ.

IND vs NZ 2nd Test, Day 2 LIVE

(Laxmi Rai Recalled Her Breakup With MS Dhoni: ‘My Relationship is Like a Stain or a scar says sandalwood actress)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada