IND tour of SA: ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಮಾಡುವುದು ಖಚಿತ, ಆದರೆ..? ಜಯ್ ಶಾ ಹೇಳಿದ್ದಿದು

IND tour of SA: ಭಾರತ ಕ್ರಿಕೆಟ್ ತಂಡ ಈ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ. ಆದರೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ. ಬಳಿಕ ಟಿ20 ಸರಣಿ ನಡೆಯಲಿದೆ.

IND tour of SA: ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಮಾಡುವುದು ಖಚಿತ, ಆದರೆ..? ಜಯ್ ಶಾ ಹೇಳಿದ್ದಿದು
ಟೀಂ ಇಂಡಿಯಾ
Follow us
TV9 Web
| Updated By: ಪೃಥ್ವಿಶಂಕರ

Updated on: Dec 04, 2021 | 12:54 PM

ಭಾರತ ಕ್ರಿಕೆಟ್ ತಂಡ ಈ ತಿಂಗಳು ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ. ಆದರೆ ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಮಾತ್ರ ಆಡಲಿದೆ. ಬಳಿಕ ಟಿ20 ಸರಣಿ ನಡೆಯಲಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಮಾಹಿತಿ ನೀಡಿದ್ದಾರೆ. ಭಾರತ ತಂಡವು ದಕ್ಷಿಣ ಆಫ್ರಿಕಾದಲ್ಲಿ ಕೇವಲ ಮೂರು ODI ಮತ್ತು ಮೂರು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಲಿದ್ದು, ನಾಲ್ಕು ಪಂದ್ಯಗಳ T20 ಸರಣಿಯನ್ನು ನಂತರ ಆಯೋಜಿಸಲಾಗುವುದು. ಕೋವಿಡ್‌ನ ಹೊಸ ರೂಪಾಂತರದ ಓಮಿಕ್ರಾನ್‌ನಿಂದಾಗಿ, ಈ ಪ್ರವಾಸದ ಮೇಲೆ ಆತಂಕದ ಮೋಡಗಳು ಸುಳಿದಾಡುತ್ತಿವೆ ಮತ್ತು ಈ ಪ್ರವಾಸವನ್ನು ಮುಂದೂಡಬಹುದು ಅಥವಾ ರದ್ದುಗೊಳಿಸಬಹುದು ಎಂಬ ಆತಂಕವಿತ್ತು ಆದರೆ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಈ ಪ್ರವಾಸವನ್ನು ಮುಂದುವರಿಸಲು ಬಿಸಿಸಿಐ ನಿರ್ಧರಿಸಿದೆ.

ಭಾರತದ ಈ ಪ್ರವಾಸವು ಡಿಸೆಂಬರ್ 17 ರಿಂದ ಪ್ರಾರಂಭವಾಗಲಿದೆ. ಬಿಸಿಸಿಐ ಕಾರ್ಯದರ್ಶಿ ಸಹಾ ಸುದ್ದಿ ಸಂಸ್ಥೆ ANI ಗೆ ಈ ಮಾಹಿತಿ ತಿಳಿಸಿದರು. ಭಾರತ ತಂಡವು ಮೂರು ಟೆಸ್ಟ್ ಮತ್ತು ಮೂರು ODIಗಳಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಮಾಡಲಿದೆ ಎಂದು BCCI CSA ಗೆ ತಿಳಿಸಿದೆ. ಆದರೆ ನಾಲ್ಕು ಪಂದ್ಯಗಳ T20 ಸರಣಿಯು ನಂತರದ ದಿನಗಳಲ್ಲಿ ನಡೆಯಲಿದೆ ಎಂದಿದ್ದಾರೆ.

ಸ್ವಲ್ಪ ತಡವಾಗಬಹುದು ಈ ತಂಡ ಪ್ರವಾಸಕ್ಕೆ ತೆರಳುವುದು ಖಚಿತ ಎಂದು ಈ ಹಿಂದೆ ಸುದ್ದಿ ಸಂಸ್ಥೆ ಪಿಟಿಐ ತನ್ನ ವರದಿಯಲ್ಲಿ ಮೂಲಗಳನ್ನು ಉಲ್ಲೇಖಿಸಿತ್ತು. ಸಿಎಸ್‌ಎ ಸೃಷ್ಟಿಸಿರುವ ಬಯೋ ಬಬಲ್‌ನಲ್ಲಿ ಬಿಸಿಸಿಐಗೆ ನಂಬಿಕೆ ಇದೆ ಎಂದೂ ಹೇಳಲಾಗಿದೆ. “ನಾವು ದಕ್ಷಿಣ ಆಫ್ರಿಕಾಕ್ಕೆ ಹೋಗುತ್ತಿದ್ದೇವೆ ಮತ್ತು ಅದು ಖಚಿತವಾಗಿದೆ” ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಅನಾಮಧೇಯತೆಯ ಷರತ್ತಿನ ಮೇಲೆ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದರು. ಆದರೆ, ಭಾರತ ತಂಡ ಹೊರಡಲು ಸ್ವಲ್ಪ ಸಮಯ ಹಿಡಿಯಬಹುದು. ಈ ಮೊದಲು ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ನಂತರ ಈ ತಂಡವು ತಕ್ಷಣವೇ ಹೊರಡಬೇಕಿತ್ತು.

ಪ್ರೇಕ್ಷಕರಿಲ್ಲದೆ ಪಂದ್ಯಗಳು ನಡೆಯಲಿವೆ ಈ ಪ್ರವಾಸದ ಪಂದ್ಯಗಳು ಪ್ರೇಕ್ಷಕರಿಲ್ಲದೆ ನಡೆಯಲಿವೆ ಎಂದು ಪಿಟಿಐ ತನ್ನ ವರದಿಯಲ್ಲಿ ತಿಳಿಸಿದೆ. ಟಿವಿ ರೈಟ್ಸ್ ಮೂಲಕ ಈ ಪ್ರವಾಸದಿಂದ ಕೋಟ್ಯಂತರ ರೂಪಾಯಿ ಗಳಿಸಲಿರುವ ಸಿಎಸ್‌ಎಗೆ ಈ ಭಾರತ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ. ಪ್ರಸ್ತುತ ನಡೆಯುತ್ತಿರುವ ಭಾರತ ಎ ಪ್ರವಾಸವು ಬಿಸಿಸಿಐಗೆ ದೊಡ್ಡ ಲಾಭವಾಗಿದೆ. ಭಾರತ-ಎ ಪ್ರಸ್ತುತ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ.

ನಮಗೆ ಸಿಕ್ಕಿರುವ ಮಾಹಿತಿಯೆಂದರೆ ಸಿಎಸ್‌ಎ ರಚಿಸಿದ ಬಯೋ ಬಬಲ್ ಸುರಕ್ಷಿತವಾಗಿದೆ. ಅಲ್ಲದೆ, ಈ ವೈರಸ್ ಎಷ್ಟು ಅಪಾಯಕಾರಿ ಎಂದು ಹೇಳುವಂತಹ ಯಾವುದೇ ಡೇಟಾ ಇಲ್ಲ. ಅಲ್ಲದೆ, ಪ್ರವಾಸಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ತಂಡವು ಶೀಘ್ರದಲ್ಲೇ ಬಯೋ ಬಬಲ್ ಅನ್ನು ಪ್ರವೇಶಿಸುತ್ತದೆ ಮತ್ತು ಚಾರ್ಟರ್ ಫ್ಲೈಟ್ ಮೂಲಕ ಹೊರಡಲಿದೆ. ವಿಳಂಬವಾದರೂ ಸಹ, ಅದು ಬಬಲ್ ಟು ಬಬಲ್ ವರ್ಗಾವಣೆಯಾಗುತ್ತದೆ, ಆದ್ದರಿಂದ ಯಾವುದೇ ಕಟ್ಟುನಿಟ್ಟಾದ ಕ್ವಾರಂಟೈನ್ ಅಗತ್ಯವಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ಧಾರೆ.