ರಾಯಚೂರಿನಲ್ಲಿ ರಾಶಿಗಟ್ಟಲೆ ಔಷಧಿ ಹೂಳಲು ಯತ್ನ; ವಿಡಿಯೋ ಮಾಡುತ್ತಿದ್ದಂತೆ ಕಾಲ್ಕಿತ್ತ ಓಪೆಕ್ ಆಸ್ಪತ್ರೆ ಸಿಬ್ಬಂದಿ

ಔಷಧಿ ಹೂಳುವ ವೇಳೆ ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದಾರೆ. ಆಗ ಆಸ್ಪತ್ರೆ ಸಿಬ್ಬಂದಿಯವರು ಔಷಧಿ ಹೂಳದೇ ಕಾಲ್ಕಿತ್ತಿದ್ದಾರೆ. ಇನ್ನು ಓಪೆಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿ ನೀಡದ ಆರೋಪ ಕೇಳಿಬಂದಿದೆ.

ರಾಯಚೂರಿನಲ್ಲಿ ರಾಶಿಗಟ್ಟಲೆ ಔಷಧಿ ಹೂಳಲು ಯತ್ನ; ವಿಡಿಯೋ ಮಾಡುತ್ತಿದ್ದಂತೆ ಕಾಲ್ಕಿತ್ತ ಓಪೆಕ್ ಆಸ್ಪತ್ರೆ ಸಿಬ್ಬಂದಿ
ಔಷಧಿ ಹೂಳಲು ಯತ್ನಿಸಿದ್ದಾರೆ
Follow us
TV9 Web
| Updated By: sandhya thejappa

Updated on:Dec 05, 2021 | 12:24 PM

ರಾಯಚೂರು: ನಗರದ ಓಪೆಕ್ ಆಸ್ಪತ್ರೆಯಲ್ಲಿ (Opec Hospital) ರಾಶಿಗಟ್ಟಲೆ ಔಷಧಿ ಹೂಳಲು ಯತ್ನ ನಡೆದಿದೆ. ಜನರಿಗೆ ತಲುಪಬೇಕಿದ್ದ ಔಷಧಿ ಅವಧಿ ಮೀರಿದ ಹಿನ್ನೆಲೆ ಅದನ್ನು ಹೂಳಲು ಆಸ್ಪತ್ರೆ ಸಿಬ್ಬಂದಿ ಯತ್ನಿಸಿದೆ. ಔಷಧಿ ಹೂಳುವ ವೇಳೆ ಸ್ಥಳೀಯರೊಬ್ಬರು ವಿಡಿಯೋ ಮಾಡಿದ್ದಾರೆ. ಆಗ ಆಸ್ಪತ್ರೆ ಸಿಬ್ಬಂದಿಯವರು ಔಷಧಿ ಹೂಳದೇ ಕಾಲ್ಕಿತ್ತಿದ್ದಾರೆ. ಇನ್ನು ಓಪೆಕ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಔಷಧಿ ನೀಡದ ಆರೋಪ ಕೇಳಿಬಂದಿದೆ. ಔಷಧಿ ಸ್ಟಾಕ್ ಇದ್ದರೂ ಖಾಸಗಿ ಮೆಡಿಕಲ್ ಸ್ಟೋರ್​ಗೆ ರೆಫರ್ ಮಾಡುತ್ತಾರೆ. ಈ ಮೂಲಕ ಕೆಲವರು ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದೇ ಕಾರಣಕ್ಕೆ ಔಷಧಿ ಸ್ಟಾಕ್ ಉಳಿದು ಅವಧಿ ಮುಗಿದಿದೆ ಅಂತ ಆರೋಪ ಕೇಳಿಬಂದಿದ್ದು, ಓಪೆಕ್ ಅವಾಂತರದ ಬಗ್ಗೆ ವಿಶೇಷಾಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನನಗೆ ಮಾಹಿತಿಯಿಲ್ಲ, ಪರಿಶೀಲಿಸುವೆ ಅಂತ ವಿಶೇಷಾಧಿಕಾರಿ ಡಾ.ನಾಗರಾಜ್ ಗದ್ವಾಲ್ ತಿಳಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಸೂಕ್ತ ತನಿಖೆಯಾಗದಿದ್ದರೆ ಕೋರ್ಟ್​ಗೆ ದೂರು ಎಚ್ಚರಿಕೆ ನೀಡಿದ್ದಾರೆ.

2 ಬೈಕ್ ಕಳವು ಬೆಂಗಳೂರಿನಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ 2 ಬೈಕ್ ಕಳುವಾಗಿದೆ. ಸಿಡೇದಹಳ್ಳಿಯಲ್ಲಿ ಪ್ರತಿಭನ್ ಎಂಬುವರಿಗೆ ಸೇರಿದ ಬುಲೆಟ್, ಭುವನೇಶ್ವರಿನಗರದ ಚಂದ್ರಶೇಖರ್ ಎಂಬುವರ ಬೈಕ್ ಕಳುವಾಗಿದೆ. ದಿನನಿತ್ಯ ಬೈಕ್ ಕಳ್ಳತನವಾಗುತ್ತಿದೆ ಅಂತ ಪೊಲೀಸರ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.

3 ಮೇಕೆ ಕಳವು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಾಚೋನಾಯಕನಹಳ್ಳಿಯಲ್ಲಿ ಬೆಲೆಬಾಳುವ 3 ಮೇಕೆ ಕಳುವಾಗಿದೆ. ಕೆಂಪಮ್ಮ ಎಂಬುವವರಿಗೆ ಸೇರಿದ ಲಕ್ಷಾಂತರ ಬೆಲೆಬಾಳುವ ಮೇಕೆಗಳು ಕಳ್ಳತನವಾಗಿದ್ದು, ರೈತ ಮಹಿಳೆ ಕಂಗಾಲಾಗಿದ್ದಾರೆ.

ಇದನ್ನೂ ಓದಿ

Omicron in Delhi: ಭಾರತದಲ್ಲಿ 5ನೇ ಒಮಿಕ್ರಾನ್​ ಪ್ರಕರಣ ಪತ್ತೆ; ಟಾಂಜಾನಿಯದಿಂದ ದೆಹಲಿಗೆ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ದೃಢ

‘ಶಿವರಾಂ ನಡೆದಾಡುವ ಅಯ್ಯಪ್ಪ ಸ್ವಾಮಿ ಆಗಿದ್ರು; ಅವರಿಗೆ ಹಲವು ಅಭಿಷೇಕ ಮಾಡ್ತೀವಿ’: ಡಾ. ಎನ್​. ಜಯರಾಂ

Published On - 12:14 pm, Sun, 5 December 21

ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಸತ್ತವರ ಹೆಸರಲ್ಲಿ ಅರ್ಚನೆ! ಸಂಕಲ್ಪ ಮಾಡಿಸಬಹುದಾ? ವಿಡಿಯೋ ನೋಡಿ
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಈ ರಾಶಿಯವರು ಮದುವೆ ಮತ್ತು ಮನೆ ವಿಷಯಗಳಲ್ಲಿ ಇಂದು ಶುಭ ಸುದ್ದಿ ಕೇಳುವರು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ಚಾರ್ಮಾಡಿ ಘಾಟಿಯಲ್ಲಿ ಭಾರಿ ಕಾಡ್ಗಿಚ್ಚು: ನೂರಾರು ಎಕರೆ ಅರಣ್ಯಕ್ಕೆ ಬೆಂಕಿ
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ನನ್ನ ವಿರುದ್ಧ ವರಿಷ್ಠರಿಗೆ ಯಾರೇ ದೂರು ನೀಡಿದರೂ ಹೆದರಲ್ಲ: ಯತ್ನಾಳ್
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?