‘ಶಿವರಾಂ ನಡೆದಾಡುವ ಅಯ್ಯಪ್ಪ ಸ್ವಾಮಿ ಆಗಿದ್ರು; ಅವರಿಗೆ ಹಲವು ಅಭಿಷೇಕ ಮಾಡ್ತೀವಿ’: ಡಾ. ಎನ್​. ಜಯರಾಂ

Shivaram Death: ‘ಇನ್ಮೇಲೆ ಶಿವರಾಂ ಅವರನ್ನು ಜ್ಯೋತಿ ರೂಪದಲ್ಲಿ ನಾವು ನೋಡುತ್ತೇನೆ. ಅಂತ್ಯಸಂಸ್ಕಾರದ ಬಳಿಕ ಅಯ್ಯಪ್ಪ ಸ್ವಾಮಿ ಭಕ್ತರ ವತಿಯಿಂದ ಹಲವು ಅಭಿಷೇಕ ನೆರವೇರಿಸುತ್ತೇನೆ’ ಎಂದು ಅಯ್ಯಪ್ಪ ಭಕ್ತ ಜಯರಾಂ ಹೇಳಿದ್ದಾರೆ.

ಹಿರಿಯ ನಟ ಶಿವರಾಂ (Shivaram) ಅವರ ಅಗಲಿಕೆಗೆ ಅನೇಕ ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಕೇವಲ ನಟನೆ ಮಾತ್ರವಲ್ಲದೇ ಹಲವು ಕ್ಷೇತ್ರಗಳ ಬಗ್ಗೆ ಶಿವರಾಂ ಆಸಕ್ತಿ ಹೊಂದಿದ್ದರು. ಅದೇ ರೀತಿ ಅವರು ಅಯ್ಯಪ್ಪ ಸ್ವಾಮಿಯ (Ayyappa Awamy) ಪರಮ ಭಕ್ತರಾಗಿದ್ದರು. ಅನೇಕರಿಗೆ ಅಧ್ಯಾತ್ಮದ ಕುರಿತು ಮಾರ್ಗದರ್ಶನ ಮಾಡಿದ್ದರು. ವರ್ಷಕ್ಕೆ ಮೂರು-ನಾಲ್ಕು ಬಾರಿ ಶಬರಿಮಲೆಗೆ ಹೋಗುತ್ತಿದ್ದರು. ಅಂಥ ವ್ಯಕ್ತಿಯನ್ನು ಕಳೆದುಕೊಂಡಿರುವುದು ಇಡೀ ಅಯ್ಯಪ್ಪ ಸ್ವಾಮಿ ಭಕ್ತ ಸಮೂಹಕ್ಕೆ ನೋವುಂಟು ಮಾಡಿದೆ. ಈ ಬಗ್ಗೆ ಗುರುಸ್ವಾಮಿ ಡಾ. ಎನ್​. ಜಯರಾಂ ಅವರು ಮಾತನಾಡಿದ್ದಾರೆ. ‘ನಮ್ಮ ಪಾಲಿಗೆ ಶಿವರಾಂ ಅವರು ನಡೆದಾಡುವ ಅಯ್ಯಪ್ಪ ಸ್ವಾಮಿ ಆಗಿದ್ದರು. ನಮ್ಮಿಬ್ಬರದ್ದು 45 ವರ್ಷಗಳ ಒಡನಾಟ. ಲಕ್ಷಾಂತರ ಜನರಿಗೆ ಶಿವರಾಂ ಮಾರ್ಗದರ್ಶನ ನೀಡಿದ್ದರು. ಇನ್ಮೇಲೆ ನಾವು ಅವರನ್ನು ಜ್ಯೋತಿ ರೂಪದಲ್ಲಿ ನೋಡುತ್ತೇನೆ. ಅವರ ಅಂತ್ಯಸಂಸ್ಕಾರದ ಬಳಿಕ ಅಯ್ಯಪ್ಪ ಸ್ವಾಮಿ ಭಕ್ತರ ವತಿಯಿಂದ ಅವರಿಗೆ ಪಂಚಾಮೃತ ಅಭಿಷೇಕ, ಪುಷ್ಪಾಭಿಷೇಕ, ವಿಭೂತಿ ಅಭಿಷೇಕ, ಜೇನು ತುಪ್ಪದ ಅಭಿಷೇಕ ಮತ್ತು ಕರ್ಪೂರದ ಆರತಿ ನೆರವೇರಿಸುತ್ತೇನೆ’ ಎಂದು ಜಯರಾಂ ಹೇಳಿದ್ದಾರೆ. ಇಂದು (ಡಿ.5) ಮಧ್ಯಾಹ್ನ 12 ಗಂಟೆ ಸುಮಾರಿಗೆ ಬನಶಂಕರಿ ಚಿತಾಗಾರದಲ್ಲಿ ಶಿವರಾಂ ಅವರ ಅಂತ್ಯಕ್ರಿಯೆ (Shivaram Funeral) ನೆರವೇರಲಿದೆ.

ಇದನ್ನೂ ಓದಿ:

‘ದೇವ್ರನ್ನ ನಂಬಬೇಕೋ ಬೇಡವೋ ಎಂಬಂತಾಗಿದೆ’; ಅಯ್ಯಪ್ಪ ಭಕ್ತ ಶಿವರಾಂ ನಿಧನಕ್ಕೆ ಬೆಂಗಳೂರು ನಾಗೇಶ್​ ಕಂಬನಿ

ಅಯ್ಯಪ್ಪ ಸ್ವಾಮಿ ಪೂಜೆ ವೇಳೆ ಶಿವರಾಂ ಮಾಡಿದ ಆ ಒಂದು ಕೆಲಸವೇ ಅವರ ಪ್ರಾಣಕ್ಕೆ ಮುಳುವಾಯ್ತಾ?

Click on your DTH Provider to Add TV9 Kannada