ಅಯ್ಯಪ್ಪ ಸ್ವಾಮಿ ಪೂಜೆ ವೇಳೆ ಶಿವರಾಂ ಮಾಡಿದ ಆ ಒಂದು ಕೆಲಸವೇ ಅವರ ಪ್ರಾಣಕ್ಕೆ ಮುಳುವಾಯ್ತಾ?

Shivaram Death: ಶಿವರಾಂ ಅವರು ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದರು. ವರ್ಷಕ್ಕೆ ಮೂರು-ನಾಲ್ಕು ಬಾರಿ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು.

ಅಯ್ಯಪ್ಪ ಸ್ವಾಮಿ ಪೂಜೆ ವೇಳೆ ಶಿವರಾಂ ಮಾಡಿದ ಆ ಒಂದು ಕೆಲಸವೇ ಅವರ ಪ್ರಾಣಕ್ಕೆ ಮುಳುವಾಯ್ತಾ?
ಶಿವರಾಂ (ಫೋಟೋ ಕೃಪೆ: ಪ್ರಶಾಂತ್​ ಪಚ್ಚಿ)


ಹಿರಿಯ ನಟ ಶಿವರಾಂ (Actor Shivaram) ನಿಧನರಾಗಿದ್ದಾರೆ. ಶನಿವಾರ (ಡಿ.4) ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ನೋವಿನಲ್ಲಿದೆ. ಬೆಂಗಳೂರಿನ ಸೀತಾ ಸರ್ಕಲ್​ನಲ್ಲಿ ಇರುವ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಅವರು ಇಹಲೋಕ ತ್ಯಜಿಸಿದ್ದಾರೆ. ಬೇಸರದ ಸಂಗತಿ ಏನೆಂದರೆ, ಅಯ್ಯಪ್ಪ ಸ್ವಾಮಿ (Ayyappa Swamy) ಪೂಜೆ ಮಾಡುವಾಗಲೇ ಶಿವರಾಂ (Shivaram) ಅವರು ಕುಸಿದು ಬಿದ್ದಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕುಸಿದು ಬಿದ್ದಾಗ ಅವರ ತಲೆಗೆ ತೀವ್ರ ಪೆಟ್ಟಾದ ಪರಿಣಾಮ ಬ್ರೇನ್​ ಡ್ಯಾಮೇಜ್​ ಆಗಿತ್ತು. ಪೂಜೆ ಮಾಡುವಾಗಲೇ ಈ ರೀತಿ ದುರಂತ ಸಂಭವಿಸಿದ್ದು ವಿಪರ್ಯಾಸ. ಪೂಜೆ ವೇಳೆ ಅವರು ರೂಢಿಸಿಕೊಂಡಿದ್ದ ಒಂದು ಅಭ್ಯಾಸವೇ ಪ್ರಾಣಕ್ಕೆ ಮುಳುವಾಯ್ತು!

ಹೌದು, ಶಿವರಾಂ ಅವರು ಅಯ್ಯಪ್ಪ ಸ್ವಾಮಿಯ ಪರಮ ಭಕ್ತರಾಗಿದ್ದರು. ವರ್ಷಕ್ಕೆ ಮೂರು-ನಾಲ್ಕು ಬಾರಿ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು. ಮನೆಯ ಟೆರೇಸ್​ನಲ್ಲಿ ಪೂಜೆ ಮಾಡಲು ಪ್ರತ್ಯೇಕವಾಗಿ ಜಾಗ ಮಾಡಿಕೊಂಡಿದ್ದರು. ಪ್ರತಿ ಬಾರಿ ಪೂಜೆ ಮಾಡುವಾಗಲೂ ಅವರು ಏಕಾಂತ ಬಯಸುತ್ತಿದ್ದರು. ಹಾಗಾಗಿ ಪೂಜಾ ಕೊಠಡಿಯ ಬಾಗಿಲು ಹಾಕಿಕೊಂಡು ಅಯ್ಯಪ್ಪನ ಸ್ಮರಣೆಯಲ್ಲಿ ಮಗ್ನರಾಗುತ್ತಿದ್ದರು. ಕೆಲವೇ ದಿನಗಳ ಹಿಂದೆ ಕುಸಿದು ಬಿದ್ದಾಗಲೂ ಅವರು ಬಾಗಿಲು ಲಾಕ್​ ಮಾಡಿಕೊಂಡಿದ್ದರು!

ಪೂಜೆ ಮಾಡುವಾಗ ಬಾಗಿಲು ಹಾಕಿಕೊಂಡಿದ್ದರಿಂದ ಅವರು ಕುಸಿದು ಬಿದ್ದಿದ್ದು ಯಾರಿಗೂ ತಕ್ಷಣಕ್ಕೆ ತಿಳಿಯಲಿಲ್ಲ. ತುಂಬ ಸಮಯದವರೆಗೆ ಅವರು ವಾಪಸ್​ ಬಾರದ ಕಾರಣ ಟೆರೆಸ್​ಗೆ ಹೋಗಿ ನೋಡಿದಾಗ ಪೂಜಾ ಕೊಠಡಿಯಲ್ಲಿ ಅವರು ಕುಸಿದು ಬಿದ್ದಿದ್ದು ತಿಳಿಯಿತು. ಒಂದು ಗಂಟೆಗೂ ಹೆಚ್ಚು ಸಮಯ ರಕ್ತಸ್ರಾವ ಆಗಿರುವ ಸಾಧ್ಯತೆ ಇದೆ. ಆ ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿ ಆಗದೇ ಅವರು ನಿಧನರಾಗಿದರು. ಪೂಜೆ ಮಾಡುವ ವೇಳೆಯಲ್ಲೇ ಹೀಗೆ ಆಗಿದ್ದು ಎಲ್ಲರ ಮನಸ್ಸಿಗೂ ನೋವುಂಟು ಮಾಡಿದೆ.

ಶಿವರಾಜ್​ಕುಮಾರ್​ ಮತ್ತು ಶಿವರಾಂ ಅವರು ಅನೇಕ ಬಾರಿ ಒಟ್ಟಾಗಿ ಶಬರಿಮಲೆಗೆ ಹೋಗಿ ಬಂದಿದ್ದುಂಟು. ಅದನ್ನು ಶಿವಣ್ಣ ಇತ್ತೀಚೆಗೆ ಮೆಲುಕು ಹಾಕಿದ್ದರು. ‘ಒಂದು ವರ್ಷದಲ್ಲಿ ಮೂರು-ನಾಲ್ಕು ಬಾರಿ ಶಿವರಾಂ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಾರೆ. ನಮ್ಮ ಜೊತೆಯೂ ಹೋಗಿ ಬರುತ್ತಿದ್ದರು. ಸ್ನೇಹಿತರು ಯಾರಾದರೂ ಅಯ್ಯಪ್ಪ ಸ್ವಾಮಿ ಪೂಜೆ ಮಾಡಿದಾಗಲೂ ಹೋಗುತ್ತಾರೆ. ಅಯ್ಯಪ್ಪ ಸ್ವಾಮಿ ಎಂದರೆ ಶಿವರಾಂ ಅವರಿಗೆ ಏನೋ ವಿಶೇಷ ಪ್ರೀತಿ. ಮೂರು ವರ್ಷದ ಹಿಂದೆ ಶಬರಿಮಲೆಗೆ ಹೋಗಿದ್ವಿ. ಕೋವಿಡ್​ ಬಂದ ನಂತರ ಹೋಗಲು ಸಾಧ್ಯವಾಗಿರಲಿಲ್ಲ. ಆಗ ಅವರಿಗೆ 81 ವರ್ಷ. ಆ ವಯಸ್ಸಿನಲ್ಲೂ ಅವರು ಬೆಟ್ಟ ಹತ್ತುತ್ತಿದ್ದರು’ ಎಂದಿದ್ದರು ಶಿವಣ್ಣ.

ಇದನ್ನೂ ಓದಿ:

Shivaram Death: ನಟ ಶಿವರಾಂ ನಿಧನ; ಹಿರಿಯ ಕಲಾವಿದನ ಅಗಲಿಕೆಗೆ ಕಂಬನಿ ಮಿಡಿಯುತ್ತಿರುವ ಗಣ್ಯರು

Rashi Brothers: ಶಿವರಾಂ ಸ್ಥಾಪಿಸಿದ್ದ ರಾಶಿ ಬ್ರದರ್ಸ್​ ನಿರ್ಮಾಣ ಸಂಸ್ಥೆ ಹೆಸರಿನ ಅರ್ಥವೇನು ಗೊತ್ತಾ? ಇಲ್ಲಿದೆ ಕುತೂಹಲಕಾರಿ ಮಾಹಿತಿ

Click on your DTH Provider to Add TV9 Kannada