‘ದೇವ್ರನ್ನ ನಂಬಬೇಕೋ ಬೇಡವೋ ಎಂಬಂತಾಗಿದೆ’; ಅಯ್ಯಪ್ಪ ಭಕ್ತ ಶಿವರಾಂ ನಿಧನಕ್ಕೆ ಬೆಂಗಳೂರು ನಾಗೇಶ್​ ಕಂಬನಿ

Shivaram Death: ಹಿರಿಯ ನಟ ಶಿವರಾಂ ಅವರಿಗೆ ಅಯ್ಯಪ್ಪ ಸ್ವಾಮಿ ಮೇಲೆ ಅಪಾರವಾದ ಭಕ್ತಿ ಇತ್ತು. ಆದರೆ ಅಯ್ಯಪ್ಪನ ಪೂಜೆ ಮಾಡುವಾಗಲೇ ಅವರು ಕುಸಿದು ಬಿದ್ದಿದ್ದು ನೋವಿನ ಸಂಗತಿ.

ನಟ ಶಿವರಾಂ ನಿಧನಕ್ಕೆ (Shivaram Death) ಚಿತ್ರರಂಗದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ತಮ್ಮ ಗೆಳೆಯನ ಅಗಲಿಕೆ ಬಗ್ಗೆ ಹಿರಿಯ ನಟ ಬೆಂಗಳೂರು ನಾಗೇಶ್ (Bangalore Nagesh)​ ಅವರು ಮಾತನಾಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಶಿವರಾಂ ಅವರು ಅಯ್ಯಪ್ಪ ಸ್ವಾಮಿಯ (Ayyappa Swamy) ಪರಮ ಭಕ್ತರಾಗಿದ್ದರು. ವರ್ಷಕ್ಕೆ ಮೂರು-ನಾಲ್ಕು ಬಾರಿ ಅವರು ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು. ಮನೆಯ ಟೆರೇಸ್​ನಲ್ಲಿ ಪೂಜೆ ಮಾಡಲು ಪ್ರತ್ಯೇಕವಾಗಿ ಜಾಗ ಮಾಡಿಕೊಂಡಿದ್ದರು. ಪೂಜೆ ಮಾಡುವಾಗಲೇ ಅವರು ಕುಸಿದು ಬಿದ್ದಿದ್ದರಿಂದ ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಬೆಂಗಳೂರು ನಾಗೇಶ್​ ಅವರು ತಮ್ಮ ನೋವಿನ ನುಡಿಗಳನ್ನು ಹಂಚಿಕೊಂಡಿದ್ದಾರೆ. ‘ದೇವರನ್ನು ನಂಬಬೇಕೋ ಬಿಡಬೇಕೋ ಎಂಬಂತಾಗಿದೆ. ಇಂಥ ದೈವ ಭಕ್ತನಿಗೆ ಈ ರೀತಿ ಆಗಿದ್ದರಿಂದ ಮನಸ್ಸಿಗೆ ತೀವ್ರ ದುಃಖ ಆಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 

ಅಯ್ಯಪ್ಪ ಸ್ವಾಮಿ ಪೂಜೆ ವೇಳೆ ಶಿವರಾಂ ಮಾಡಿದ ಆ ಒಂದು ಕೆಲಸವೇ ಅವರ ಪ್ರಾಣಕ್ಕೆ ಮುಳುವಾಯ್ತಾ?

Shivaram Death: ನಟ ಶಿವರಾಂ ನಿಧನ; ಹಿರಿಯ ಕಲಾವಿದನ ಅಗಲಿಕೆಗೆ ಕಂಬನಿ ಮಿಡಿಯುತ್ತಿರುವ ಗಣ್ಯರು

Click on your DTH Provider to Add TV9 Kannada