ಮೈಸೂರು ಅರಮನೆಯಿಂದ ಅಪ್ಪು ಸಮಾಧಿವರೆಗೆ ಸೈಕ್ಲಿಂಗ್; ಪುನೀತ್ ಅಭಿಮಾನಿಗಳಿಂದ ಹೀಗೊಂದು ಶ್ರದ್ಧಾಂಜಲಿ
ಪುನೀತ್ ರಾಜ್ಕುಮಾರ್ ಅವರ 9 ಅಭಿಮಾನಿಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಮಾರ್ಗಮಧ್ಯದಲ್ಲಿ ಸೈಕ್ಲಿಂಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ.
ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು ಒಂದು ತಿಂಗಳಿಗೂ ಹೆಚ್ಚು ಕಾಲ ಆಗಿದೆ. ಅಪ್ಪು ಹೆಸರನ್ನು ಅಮರವಾಗಿಸಲು ಅಭಿಮಾನಿಗಳು ಅನೇಕ ಕಾರ್ಯಕ್ರಮಗಳನ್ನು ಮಾಡುತ್ತ ಇದ್ದಾರೆ. ಪುನೀತ್ ರಾಜ್ಕುಮಾರ್ ಅವರಿಗೆ ಸೈಕಲ್ ಎಂದರೆ ತುಂಬ ಅಚ್ಚುಮೆಚ್ಚು ಆಗಿತ್ತು. ಹಾಗಾಗಿ ಅವರ ಹೆಸರಿನಲ್ಲಿ ಅನೇಕ ಕಡೆಗಳಲ್ಲಿ ಸೈಕ್ಲಿಂಗ್ ಜಾಥಾ ಏರ್ಪಡಿಸಲಾಗುತ್ತಿದೆ. ಇಲ್ಲೊಂದು ಅಭಿಮಾನಿಗಳ ತಂಡ ಮೈಸೂರಿನ ಅರಮನೆಯಿಂದ ಅಪ್ಪು ಸಮಾಧಿವರೆಗೆ ಸೈಕ್ಲಿಂಗ್ ಆರಂಭಿಸಿದೆ. ಮಾರ್ಗಮಧ್ಯದಲ್ಲಿ ಸೈಕ್ಲಿಂಗ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಗುತ್ತಿದೆ. 9 ಅಭಿಮಾನಿಗಳು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅಪ್ಪು ಸಮಾಧಿ ಬಳಿ ತೆರಳಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.
ಇದನ್ನೂ ಓದಿ:
ಅಪ್ಪು ಇಲ್ಲದೇ ತಿಂಗಳು ಕಳೆದರೂ ನಿಂತಿಲ್ಲ ಕಣ್ಣೀರು; ಪುನೀತ್ ಸಮಾಧಿ ಎದುರು ಬಿಕ್ಕಿ ಬಿಕ್ಕಿ ಅತ್ತ ಮಹಿಳೆ
ಸುದೀಪ್ಗಾಗಿ ದೇವಸ್ಥಾನ: ಕಿಚ್ಚನ 4 ಅಡಿ ಮೂರ್ತಿ ಎದುರು ಪುನೀತ್ ರಾಜ್ಕುಮಾರ್ ಭಾವಚಿತ್ರ
Latest Videos