ಅಪ್ಪು ಇಲ್ಲದೇ ತಿಂಗಳು ಕಳೆದರೂ ನಿಂತಿಲ್ಲ ಕಣ್ಣೀರು; ಪುನೀತ್​ ಸಮಾಧಿ ಎದುರು ಬಿಕ್ಕಿ ಬಿಕ್ಕಿ ಅತ್ತ ಮಹಿಳೆ

ಅಪ್ಪು ಇಲ್ಲದೇ ತಿಂಗಳು ಕಳೆದರೂ ನಿಂತಿಲ್ಲ ಕಣ್ಣೀರು; ಪುನೀತ್​ ಸಮಾಧಿ ಎದುರು ಬಿಕ್ಕಿ ಬಿಕ್ಕಿ ಅತ್ತ ಮಹಿಳೆ

TV9 Web
| Updated By: ಮದನ್​ ಕುಮಾರ್​

Updated on: Dec 02, 2021 | 9:38 AM

ಪ್ರತಿ ದಿನ ಸಾವಿರಾರು ಜನರು ಬಂದು ಪುನೀತ್ ರಾಜ್​ಕುಮಾರ್​​ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಮಹಿಳಾ ಅಭಿಮಾನಿಯೊಬ್ಬರು ಪುನೀತ್​ ಅವರನ್ನು ನೆನೆದು ಕಣ್ಣೀರಿಟ್ಟ ದೃಶ್ಯ ಎಲ್ಲರ ಮನ ಕಲಕುವಂತಿತ್ತು.

ಪುನೀತ್​ ರಾಜ್​ಕುಮಾರ್ (Puneeth Rajkumar) ಅವರನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಪ್ಪು ಇಲ್ಲ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳಲು ಎಲ್ಲರಿಗೂ ಕಷ್ಟ ಆಗುತ್ತಿದೆ. ಪುನೀತ್​ ನಿಧನರಾಗಿ ಒಂದು ತಿಂಗಳು ಕಳೆದಿದೆ. ಆದರೆ ಇಂದಿಗೂ ಅವರ ಸಮಾಧಿಗೆ (Puneeth Rajkumar Samadhi) ನಮಿಸಲು ಕಂಠೀರವ ಸ್ಡುಡಿಯೋ (Kanteerava Studio) ಆವರಣಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ಕಡಿಮೆ ಆಗಿಲ್ಲ. ಪ್ರತಿ ದಿನ ಸಾವಿರಾರು ಜನರು (Puneeth Rajkumar Fans) ಬಂದು ಪುನೀತ್​ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಕೆಲವರಂತೂ ಬಿಕ್ಕಿ ಬಿಕ್ಕಿ ಅಳುತ್ತಾ, ನೆಚ್ಚಿನ ನಟನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಮಹಿಳಾ ಅಭಿಮಾನಿಯೊಬ್ಬರು ಪುನೀತ್​ ಅವರನ್ನು ನೆನೆದು ಕಣ್ಣೀರಿಟ್ಟ ದೃಶ್ಯ ಎಲ್ಲರ ಮನ ಕಲಕುವಂತಿತ್ತು. ಕರುನಾಡಿನ ಜನರು ಪುನೀತ್​ ರಾಜ್​ಕುಮಾರ್​ ಅವರನ್ನು ತಮ್ಮ ಮನೆಮಗನಂತೆ ಪ್ರೀತಿಸುತ್ತಿದ್ದರು. ಅಂತಹ ಅಪ್ಪಟ ಹೃದಯವಂತನನ್ನು ಕಳೆದುಕೊಂಡ ನೋವು ಎಲ್ಲರ ಮನದಲ್ಲೂ ತೀವ್ರವಾಗಿ ಕಾಡುತ್ತಿದೆ.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್​ ಇಲ್ಲದ ಒಂದು ತಿಂಗಳು: ಈ 30 ದಿನದಲ್ಲಿ ಆಗಿವೆ ಹಲವು ಬದಲಾವಣೆಗಳು

ಹೀರೋ ಆಗಿ ಪುನೀತ್​ ಮೊದಲು ನಟಿಸಿದ ‘ಅಪ್ಪು’ ಚಿತ್ರಕ್ಕೆ ಸಂಗೀತ ನೀಡಲು ಗುರುಕಿರಣ್​ಗೆ ಚಾನ್ಸ್​ ಸಿಕ್ಕಿದ್ದು ಹೇಗೆ?