ಪುನೀತ್​ ರಾಜ್​ಕುಮಾರ್​ ಇಲ್ಲದ ಒಂದು ತಿಂಗಳು: ಈ 30 ದಿನದಲ್ಲಿ ಆಗಿವೆ ಹಲವು ಬದಲಾವಣೆಗಳು

Puneeth Rajkumar: ಪುನೀತ್​ ರಾಜ್​ಕುಮಾರ್​ ಅವರು ತಮ್ಮ ಬದುಕಿನ ಮೂಲಕ ಈ ಸಮಾಜಕ್ಕೆ ಅನೇಕ ಸಂದೇಶಗಳನ್ನು ಕೊಟ್ಟು ಹೋಗಿದ್ದಾರೆ. ಇಂದು (ನ.29) ಅವರು ಇಲ್ಲದೆ ಒಂದು ತಿಂಗಳು ಕಳೆದಿದೆ.

ಪುನೀತ್​ ರಾಜ್​ಕುಮಾರ್​ ಇಲ್ಲದ ಒಂದು ತಿಂಗಳು: ಈ 30 ದಿನದಲ್ಲಿ ಆಗಿವೆ ಹಲವು ಬದಲಾವಣೆಗಳು
ಪುನೀತ್ ರಾಜ್​ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on: Nov 29, 2021 | 4:23 PM

ಸ್ಯಾಂಡಲ್​ವುಡ್​ನಲ್ಲಿ ಎಲ್ಲರ ಮೆಚ್ಚಿನ ನಟನಾಗಿ ಮಿಂಚುತ್ತಿದ್ದ ಪುನೀತ್​ ರಾಜ್​ಕುಮಾರ್​ (Puneeth Rajkumar) ಇಹಲೋಕ ತ್ಯಜಿಸಿ 30 ದಿನ ಕಳೆದಿದೆ. ಅವರಿಲ್ಲ ಎಂಬ ಕಹಿ ಸತ್ಯವನ್ನು ಒಪ್ಪಿಕೊಳ್ಳುವುದು ನಿಜಕ್ಕೂ ಕಷ್ಟ. ಅ.29ರಂದು ಇಡೀ ಕರುನಾಡಿಗೆ ಸಿಡಿಲಿನಂತಹ ಸುದ್ದಿ ಕೇಳಿಬಂದಿತ್ತು. ಹೃದಯಾಘಾತದಿಂದ (Heart Attack) ಪುನೀತ್​ ರಾಜ್​ಕುಮಾರ್​ ಇನ್ನಿಲ್ಲ ಎಂಬ ಮಾಹಿತಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಆ ಕರಾಳ ದಿನ ಎದುರಾಗಿ ಇಂದಿಗೆ (ನ.29) ಒಂದು ತಿಂಗಳು ಕಳೆದಿದೆ. ಎಲ್ಲರಿಗೂ ಅಪ್ಪು ಪ್ರೀತಿಪಾತ್ರರಾಗಿದ್ದರು. ಚಿತ್ರರಂಗದಲ್ಲಿ ಅವರು ಅಜಾತಶತ್ರು ಆಗಿದ್ದರು. ಯಾರ ಜೊತೆಗೂ ಕಿರಿಕ್​ ಮಾಡಿಕೊಂಡಿರಲಿಲ್ಲ. ಅವರ ಅಗಲಿಕೆ ನಂತರ ಕೆಲವು ಮಹತ್ವದ ಘಟನೆಗಳು ನಡೆದಿವೆ. ಅಪ್ಪು ನಿಧನದಿಂದ (Puneeth Rajkumar Death) ಲಕ್ಷಾಂತರ ಮಂದಿಯ ಬದುಕಿನ ಮೇಲೆ ಪರಿಣಾಮ ಬೀರಿದೆ. ಕೆಲವರು ಜಿಮ್​ ತೊರೆದಿದ್ದಾರೆ. ಅನೇಕರು ಹೃದಯದ ತಪಾಸಣೆಗೆ ಮುಗಿ ಬಿದ್ದಿದ್ದಾರೆ. ನೇತ್ರದಾನಕ್ಕೆ ಲಕ್ಷಾಂತರ ಜನರು ಪ್ರತಿಜ್ಞೆ ಮಾಡಿದ್ದಾರೆ.

ಜಿಮ್​ ತೊರೆದ ಯುವಕರು:

ಪುನೀತ್​ ರಾಜ್​ಕುಮಾರ್​ ಅವರು ಫಿಟ್ನೆಸ್​ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡಿದ್ದರು. ಅಂಥ ವ್ಯಕ್ತಿಗೆ ಹೃದಯಾಘಾತ ಆಯಿತು ಎಂಬುದು ಅಚ್ಚರಿಯ ವಿಚಾರ. ಜಿಮ್​ನಲ್ಲಿ ವರ್ಕೌಟ್​ ಮಾಡುವುದಕ್ಕೂ ಹೃದಯಾಘಾತಕ್ಕೂ ಸಂಬಂಧ ಇದೆ ಎಂದು ಕೆಲವರು ವಾದಿಸುತ್ತಿದ್ದಾರೆ. ಹಾಗಾಗಿ ಪುನೀತ್​ ನಿಧನದ ಬಳಿಕ ಸಾವಿರಾರು ಯುವಕರು ಜಿಮ್​ಗೆ ವಿದಾಯ ಹೇಳಿದರು. ಎಲ್ಲ ಜಿಲ್ಲೆಗಳಲ್ಲೂ ಇದೇ ವಾತಾವರಣ ನಿರ್ಮಾಣ ಆಗಿದೆ. ಇದರಿಂದ ಜಿಮ್​ ಮಾಲಿಕರಿಗೆ ಚಿಂತೆ ಶುರುವಾಗಿದೆ.

ಹೆಚ್ಚಿದೆ ಹೃದಯದ ಕಾಳಜಿ:

ಸೂಕ್ತ ಕ್ರಮಗಳನ್ನು ವಹಿಸಿದರೆ ಹೃದಯಾಘಾತ ಆಗುವುದನ್ನು ಮೊದಲೇ ತಡೆಯಬಹುದು. ಹೃದ್ರೋಗದ ಲಕ್ಷಣಗಳನ್ನು ಮೊದಲೇ ಪತ್ತೆ ಹಚ್ಚಬೇಕು ಎಂಬ ಜಾಗೃತಿ ಎಲ್ಲರಲ್ಲೂ ಮೂಡಿದೆ. ಹಾಗಾಗಿ ಅಪಾರ ಸಂಖ್ಯೆಯ ಜನರು ಆಸ್ಪತ್ರೆಗಳಿಗೆ ಬಂದು ಹೃದಯದ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಯಾವುದೇ ರೋಗ ಲಕ್ಷಣಗಳು ಇಲ್ಲದೇ ಇರುವವರು ಕೂಡ ಡೈಯಾಗ್ನಾಸ್ಟಿಕ್​ ಕೇಂದ್ರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಇದರಿಂದ ನೂಕು ನುಗ್ಗಲು ಉಂಟಾಗಿದ್ದು ಕೂಡ ಉಂಟು! ಅಷ್ಟರಮಟ್ಟಿಗೆ ಪುನೀತ್​ ಸಾವು ಜನರ ಮನದ ಮೇಲೆ ಪರಿಣಾಮ ಬೀರಿದೆ.

ನೇತ್ರದಾನಕ್ಕೆ ಮುಂದಾದ ಲಕ್ಷಾಂತರ ಮಂದಿ:

ಡಾ. ರಾಜ್​ಕುಮಾರ್​ ರೀತಿಯೇ ಪುನೀತ್​​ ರಾಜ್​ಕುಮಾರ್​ ಕೂಡ ಕಣ್ಣುಗಳನ್ನು ದಾನ ಮಾಡಿದರು. ಅಪ್ಪು ಕಣ್ಣಿನಿಂದ ಒಟ್ಟು 10 ಜನರಿಗೆ ದೃಷ್ಟಿ ನೀಡಲಾಗಿದೆ! ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಈ ಕಾರ್ಯ ಮಾಡಲಾಗಿದೆ. ನೇತ್ರದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿದೆ. ನೇತ್ರದಾನ ನೋಂದಣಿ ಶಿಬಿರಗಳ ಸಂಖ್ಯೆ ಹೆಚ್ಚಿದೆ. ಅನೇಕ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳು, ಅಭಿಮಾನಿ ಸಂಘಗಳು ನೇತ್ರಾದಾನ ನೋಂದಣಿ ಶಿಬಿರಗಳನ್ನು ಆಯೋಜಿಸುತ್ತಿವೆ. ಲಕ್ಷಾಂತರ ಜನರು ನೇತ್ರದಾನದ ಪ್ರತಿಜ್ಞೆ ಮಾಡಿದ್ದಾರೆ.

ಇದನ್ನೂ ಓದಿ:

ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ ರಾಜ್​ಕುಮಾರ್​; ಇಲ್ಲಿದೆ ವಿಡಿಯೋ

‘ಹೀಗೆಲ್ಲ ಮಾಡಿದ್ರೆ ಪುನೀತ್​ಗೆ ದ್ರೋಹ ಮಾಡಿದಂತೆ ಆಗುತ್ತೆ’; ಅಪ್ಪು​ ಸಮಾಧಿ ಬಳಿ ರಾಘಣ್ಣ ಮಾತು

ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ