ಬಿಸ್ಕತ್​ ಪ್ಯಾಕ್​ನಿಂದ ಹಿಡಿದು ದಿನಸಿ ಅಂಗಡಿವರೆಗೆ ಧನಂಜಯ್​ ನಟನೆಯ ‘ಬಡವ ರಾಸ್ಕಲ್​’ ಹವಾ

‘ಬಡವ ರಾಸ್ಕಲ್’ ಚಿತ್ರಕ್ಕೆ ಹೊಸ ರೀತಿಯಲ್ಲಿ ಪ್ರಚಾರ ನೀಡಲಾಗುತ್ತಿದೆ. ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಬಿಸ್ಕತ್​ ಪ್ಯಾಕ್​ನಿಂದ ಹಿಡಿದು ದಿನಸಿ ಅಂಗಡಿವರೆಗೆ ಧನಂಜಯ್​ ನಟನೆಯ ‘ಬಡವ ರಾಸ್ಕಲ್​’ ಹವಾ
ಬಡವ ರಾಸ್ಕಲ್​ಗೆ ಭಿನ್ನ ಪ್ರಚಾರ

ನಟ ಧನಂಜಯ​ ಅವರು ನಟನೆ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ರಗಡ್​ ಪಾತ್ರವಾಗಲಿ, ಸಾಫ್ಟ್​ ಪಾತ್ರವಾಗಲಿ ಯಾವ ಕ್ಯಾರೆಕ್ಟರ್​ ಕೊಟ್ಟರೂ ಅದನ್ನು ಜೀವಿಸಿ ತೋರಿಸುತ್ತಾರೆ ಧನಂಜಯ. ಈಗ ಅವರು ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ‘ಬಡವ ರಾಸ್ಕಲ್​’ ಸಿನಿಮಾ ನಿರ್ಮಾಣ ಮಾಡುವುದರ ಜತೆಗೆ, ನಟಿಸಿದ್ದಾರೆ. ಈ ಚಿತ್ರ ಕ್ರಿಸ್​ಮಸ್​ ಪ್ರಯುಕ್ತ ಡಿಸೆಂಬರ್​ 24ರಂದು ತೆರೆಗೆ ಬರುತ್ತಿದೆ. ಈ ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರತಂಡ ಆರಂಭಿಸಿದೆ. ಅಚ್ಚರಿ ಎಂದರೆ, ಜನಸಾಮಾನ್ಯರು ಸ್ವ ಇಚ್ಛೆಯಿಂದ ಚಿತ್ರದ ಪ್ರಚಾರಕ್ಕೆ ಮುಂದಾಗುತ್ತಿದ್ದಾರೆ. ಎಲ್ಲ ಕಡೆಗಳಲ್ಲೂ ಸಿನಿಮಾದ ಪೋಸ್ಟರ್​ ರಾರಾಜಿಸುತ್ತಿದೆ.

‘ಬಡವ ರಾಸ್ಕಲ್’ ಚಿತ್ರಕ್ಕೆ ಹೊಸ ರೀತಿಯಲ್ಲಿ ಪ್ರಚಾರ ನೀಡಲಾಗುತ್ತಿದೆ. ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಚಿತ್ರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಶಾಲಾ ಮಕ್ಕಳಿಂದ ಹಿಡಿದು ದಿನಸಿ ಅಂಗಡಿ, ತರಕಾರಿ ಅಂಗಡಿ, ಮಾಂಸದ ಅಂಗಡಿ, ಗ್ಯಾರೇಜ್, ಆಟೋ ಚಾಲಕರವರೆಗೆ ಎಲ್ಲರೂ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಅಂಗಡಿ ಎದುರು ‘ಬಡವ ರಾಸ್ಕಲ್​ ಡಿಸೆಂಬರ್​ 24ಕ್ಕೆ’ ಎಂದು ಬೋರ್ಡ್​ ಹಾಕಿದ್ದಾರೆ. ಪಾರ್ಲೆ ಜಿ ಬಿಸ್ಕತ್​ ಪ್ಯಾಕ್​ ಕೂಡ ಎಡಿಟ್​ ಮಾಡಿ ಹಾಕಲಾಗಿದೆ. ಇತ್ತೀಚೆಗೆ ಹಾಡಿಗಾಗಿ ಮಾಡಿದ್ದ ಪ್ರಮೋಷನಲ್​ ವಿಡಿಯೋ ಸಾಕಷ್ಟು ವೈರಲ್​ ಆಗಿತ್ತು.

‘ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್‌ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್‌, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರಕ್ಕೆ ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನವಿದೆ. ಈ ಚಿತ್ರವನ್ನು ಕೆಆರ್​ಜಿ ಸ್ಟೂಡಿಯೋಸ್ ಸಂಸ್ಥೆ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: Dhananjaya: ಡಿಸೆಂಬರ್​ನಲ್ಲಿ ಧನಂಜಯ್ ಅಭಿಮಾನಿಗಳಿಗೆ ಸಿನಿ ಸುಗ್ಗಿ; ‘ಪುಷ್ಪ’ ಚಿತ್ರದ ಬೆನ್ನಲ್ಲೇ ಈ ಸಿನಿಮಾ ರಿಲೀಸ್

Click on your DTH Provider to Add TV9 Kannada