‘ಹೀಗೆಲ್ಲ ಮಾಡಿದ್ರೆ ಪುನೀತ್​ಗೆ ದ್ರೋಹ ಮಾಡಿದಂತೆ ಆಗುತ್ತೆ’; ಅಪ್ಪು​ ಸಮಾಧಿ ಬಳಿ ರಾಘಣ್ಣ ಮಾತು

‘ಪುನೀತ್​ ರಾಜ್​ಕುಮಾರ್​ ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಹೇಳಿಕೊಂಡು ಮುಂದುವರಿಸಬಾರದು. ಅದನ್ನು ಗೊತ್ತಾಗದಂತೆಯೇ ಮಾಡಬೇಕು’ ಎಂದು ರಾಘವೇಂದ್ರ ರಾಜ್​ಕುಮಾರ್​ ಅವರು ಹೇಳಿದ್ದಾರೆ.

ಪುನೀತ್​ ರಾಜ್​ಕುಮಾರ್​ ಇಲ್ಲದೇ ಒಂದು ತಿಂಗಳು ಕಳೆದಿದೆ. ಇಂದು (ನ.29) ಅಶ್ವಿನಿ ಪುನೀತ್​ ರಾಜ್​ಕುಮಾರ್​, ಗೀತಾ ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ ಮುಂತಾದವರು ಅಪ್ಪು ಸಮಾಧಿಗೆ ನಮನ ಸಲ್ಲಿಸಿದ್ದಾರೆ. ಪೂಜೆ ನೆರವೇರಿಸಿದ ಬಳಿಕ ಮಾಧ್ಯಮಗಳ ಜತೆ ರಾಘಣ್ಣ ಮಾತನಾಡಿದರು. ಪುನೀತ್​ ಮಾಡುತ್ತಿದ್ದ ಸಮಾಜಮುಖಿ ಕಾರ್ಯಗಳನ್ನು ಹೇಳಿಕೊಂಡು ಮುಂದುವರಿಸಬಾರದು. ಅದನ್ನು ಗೊತ್ತಾಗದಂತೆಯೇ ಮಾಡಬೇಕು ಎಂದು ಅವರು ಹೇಳಿದ್ದಾರೆ. ‘ಅವನು ಮಾಡುತ್ತಿದ್ದ ಕೆಲಸವನ್ನು ನಾವು ಮುಂದುವರಿಸಿಕೊಂಡು ಹೋಗಬೇಕು. ಅದಕ್ಕೆ ಅವನೇ ದಾರಿ ತೋರಿಸಬೇಕು. ನಾವು ಏನೇ ಸಹಾಯ ಮಾಡಿದರೂ ಯಾರಿಗೂ ಗೊತ್ತಾಗದಂತೆ ಮಾಡಬೇಕು ಎಂಬುದು ಅವನ ಉದ್ದೇಶ ಆಗಿತ್ತು. ಹೇಳಿಕೊಂಡು ಮಾಡಿದರೆ ಅವನಿಗೆ ದ್ರೋಹ ಮಾಡಿದಂತೆ ಆಗುತ್ತದೆ. ಕೆಲವೊಂದು ವಿಚಾರದಲ್ಲಿ ನಾವು ಸುಮ್ಮನೆ ಇದ್ದುಬಿಡಬೇಕು’ ಎಂದು ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಇಂದು ಬೆಳಗ್ಗೆ 10 ಗಂಟೆಗೆ ಪುನೀತ್​ ಕುಟುಂಬದವರು ಸಮಾಧಿಗೆ ಪೂಜೆ ಮಾಡಿದ್ದಾರೆ. ಅದಕ್ಕಾಗಿ ಬೆಳಗ್ಗೆಯಿಂದಲೇ ಸಕಲ ಸಿದ್ಧತೆ ಮಾಡಕೊಳ್ಳಲಾಗಿತ್ತು. ಅಶ್ವಿನಿ ಪುನೀತ್​ ರಾಜ್​ಕುಮಾರ್​, ಗೀತಾ ಶಿವರಾಜ್​ಕುಮಾರ್​ ಸೇರಿದಂತೆ ಡಾ. ರಾಜ್​ ಕುಟುಂಬದ ಎಲ್ಲರೂ ಬಂದು ಅಪ್ಪು ಸಮಾಧಿಗೆ ನಮನ ಸಲ್ಲಿಸಿದ್ದಾರೆ.

ಇದನ್ನೂ ಓದಿ:

ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್ ರಾಜ್​ಕುಮಾರ್​; ಇಲ್ಲಿದೆ ವಿಡಿಯೋ

ದೇವರ ಮಧ್ಯೆ ಪುನೀತ್​ ಫೋಟೋ ಇಟ್ಟು ಪೂಜೆ, ಸದ್ಯದಲ್ಲೇ ದೇವಸ್ಥಾನ ನವೀಕರಿಸಿ ನಿತ್ಯಪೂಜೆ; ಇದು ಅಪ್ಪು ಅಭಿಮಾನಿ ಅಭಿಲಾಷೆ

Published On - 9:59 am, Mon, 29 November 21

Click on your DTH Provider to Add TV9 Kannada