ಜ್ವಾಲಾ ಗುಟ್ಟಾ ಜೊತೆ ಸ್ನೇಹ ಬಯಸಿದ್ದು ಸಾವಿರಾರು ಜನ, ಆದರೆ ಈ ಸುಂದರಿ ಯಾರಿಗೂ ಸೊಪ್ಪು ಹಾಕಲಿಲ್ಲ!

ಆರಡಿ ಎರಡಿಂಚು ಎತ್ತರದ ಜ್ವಾಲಾ ಅಪ್ಪಟ ಸುಂದರಿ ಮತ್ತು ಮೋಹಕ ಮೈಮಾಟದ ಬೆಡಗಿ. ಕೀರ್ತಿಯ ಶಿಖರದಲ್ಲಿದ್ದಾಗ ಅನೇಕರು ಅವರೊಂದಿಗೆ ಸ್ನೇಹ ಬೆಳಸಲು ಹಾತೊರೆಯುತ್ತಿದ್ದರು.

ಸುಂದರ ಮಹಿಳಾ ಕ್ರೀಡಾಪಟುಗಳು ಮತ್ತು ತೆಲಂಗಾಣದ ರಾಜಧಾನಿ ಹೈದರಾಬಾದ್ ಅದೇನೋ ನಂಟು ಇರುವಂತಿದೆ ಮಾರಾಯ್ರೇ. ಸಾನಿಯಾ ಮಿರ್ಜಾ, ಸೈನಾ ನೆಹ್ವಾಲ್, ಪಿ ವಿ ಸಿಂಧೂ ಮತ್ತು ಇತ್ತೀಚೆಗೆ ಹೆಚ್ಚಾಗಿ ಸುದ್ದಿಯಲ್ಲಿರದ ಜ್ವಾಲಾ ಗುಟ್ಟಾ-ಎಲ್ಲರೂ ಸುರಸುಂದರಿಯರು ಹಾಗೂ ಹೈದರಾಬಾದಿನವರು. ಆದರೆ, ಗ್ಲಾಮರ್ ಲೋಕ ಮತ್ತು ಕ್ರೀಡೆ ಎರಡರಲ್ಲೂ ಉಳಿದ ಮೂವರಿಗಿಂತ ಮೊದಲೇ ಹೆಸರು ಮಾಡಿದ್ದು ಮತ್ತು ಪಡ್ಡೆಗಳ ಜೊತೆಗೆ ಸೆಲಿಬ್ರಿಟಿಗಳ ನಿದ್ರೆಯನ್ನು ಕೆಡಿಸಿದ್ದು ಜ್ವಾಲಾ. ಕೇವಲ 4 ನೇ ವಯಸ್ಸಿಗೆ ಕೈಯಲ್ಲಿ ಬ್ಯಾಡ್ಮಿಂಟನ್ ಱಕೆಟ್ ಹಿಡಿದ ಜ್ವಾಲಾ ಈ ಶತಮಾನದ ಮೊದಲ ದಶಕದಲ್ಲಿ ಕಾಮನ್ವೆಲ್ತ್ ಗೇಮ್ಸ್, ಸೌತ್ ಏಷ್ಯನ್ ಗೇಮ್ಸ್ ಸೇರಿದಂತೆ ಹಲವಾರು ಚಾಂಪಿಯನ್ಶಿಪ್ ಗಳನ್ನು ಗೆದ್ದಿದ್ದರು. ಡಬಲ್ಸ್ ಮತ್ತು ಮಿಕ್ಸೆಡ್ ಡಬಲ್ಸ್ ನಲ್ಲೂ ಹಲವಾರು ಪ್ರಶಸ್ತಿಗಳು ಇವರ ಮುಡಿಗೇರಿವೆ.

ಆರಡಿ ಎರಡಿಂಚು ಎತ್ತರದ ಜ್ವಾಲಾ ಅಪ್ಪಟ ಸುಂದರಿ ಮತ್ತು ಮೋಹಕ ಮೈಮಾಟದ ಬೆಡಗಿ. ಕೀರ್ತಿಯ ಶಿಖರದಲ್ಲಿದ್ದಾಗ ಅನೇಕರು ಅವರೊಂದಿಗೆ ಸ್ನೇಹ ಬೆಳಸಲು ಹಾತೊರೆಯುತ್ತಿದ್ದರು. ಅವರು ಮೈದಾನವೊಂದರಲ್ಲಿ ಆಡುತ್ತಿದ್ದಾರೆ ಅಂತ ಗೊತ್ತಾದರೆ, ಬ್ಯಾಡ್ಮಿಂಟನ್ ಬಗ್ಗೆ ಏನೂ ಗೊತ್ತಿರದವರೂ ಅಲ್ಲಿಗೆ ಹೋಗಿ ಶಿಳ್ಳೆ ಹಾಕುತ್ತಾ, ಚಪ್ಪಾಳೆ ತಟ್ಟುತ್ತಾ ನಿಂತು ಬಿಡುತ್ತಿದ್ದರು.

ಅದಾಗಲೇ ಎರಡು ಬಾರಿ ಮದುವೆಯಾಗಿದ್ದ ಭಾರತೀಯ ಕ್ರಿಕೆಟ್ ಟೀಮಿನ ಮಾಜಿ ಕ್ಯಾಪ್ಟನ್ ಮಹ್ಮದ್ ಅಜರುದ್ದೀನ್ ಸಹ ಜ್ವಾಲಾಗೆ ಮನಸೋತ ಅಸಂಖ್ಯಾತ ಜನರಲ್ಲಿ ಒಬ್ಬರು. ಅವರಿಬ್ಬರು ಮದುವೆಯಾಗಲಿದ್ದಾರೆಂಬ ವದಂತಿಯೂ ಹರಡಿತ್ತು. ಆದರೆ, ಅಜರ್ ಮತ್ತು ಜ್ವಾಲಾ ಇಬ್ಬರೂ ವದಂತಿಯನ್ನು ಅಲ್ಲಗಳೆದಿದ್ದರು. ತಾನು ಭಾರತದ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದನ್ನು ತಡೆಯಲು ಕೆಲ ಜನ ಹಾಗೆ ಅಪಪ್ರಚಾರ ನಡೆಸುತ್ತಿದ್ದಾರೆ ಅಂತ ಅಜರ್ ಹೇಳಿದ್ದರು.

2005 ರಲ್ಲಿ ಜೊತೆ ಆಟಗಾರ ಚೇತನ್ ಆನಂದ್ ರನ್ನು ಮದುವೆಯಾಗಿದ್ದ ಜ್ವಾಲಾ 2011 ರಲ್ಲಿ ಅವರಿಂದ ವಿಚ್ಛೇದನ ಪಡೆದರು. ಅದಾದ ನಂತರವೇ ಅವರ ಹೆಸರನ್ನು ಹಲವು ಜನರೊಂದಿಗೆ ಜೋಡಿಸಲಾಯಿತಾದರೂ ತೆಲುಗು ತಂದೆ ಮತ್ತು ಚೀನಾದ ಅಮ್ಮನ ಮುದ್ದಿನ ಮಗಳಾಗಿರುವ ಜ್ವಾಲಾ ಎಲ್ಲವನ್ನೂ ನಿರಾಕರಿಸಿ ಅಂತಿಮವಾಗಿ ಇದೇ ವರ್ಷ ಏಪ್ರಿಲ್ ನಲ್ಲಿ ತಮಿಳು ನಟ-ನಿರ್ಮಾಪಕ ವಿಷ್ಣು ವಿಶಾಲ್ ಅವರನ್ನು ಮದುವೆಯಾದರು.

38ರ ಪ್ರಾಯದ ಜ್ವಾಲಾ ‘ಗುಂಡೆ ಜಾರಿ ಗಲ್ಲತಾಯಿಂದೆ’ ಹೆಸರಿನ ತೆಲುಗು ಸಿನಿಮಾನಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:  ಲ್ಯಾಂಡ್ ಆಗುವ ಮುನ್ನ ವಿಮಾನದ ವಿಂಡ್​ಸ್ಕ್ರೀನ್​ಗೆ ಡಿಕ್ಕಿ ಹೊಡೆದ ಪಕ್ಷಿಗಳ ಹಿಂಡು; ಬೆಂಕಿ ಕಿಡಿ ಹೊತ್ತಿದ ವಿಡಿಯೋ ವೈರಲ್

Click on your DTH Provider to Add TV9 Kannada