ಲ್ಯಾಂಡ್ ಆಗುವ ಮುನ್ನ ವಿಮಾನದ ವಿಂಡ್ಸ್ಕ್ರೀನ್ಗೆ ಡಿಕ್ಕಿ ಹೊಡೆದ ಪಕ್ಷಿಗಳ ಹಿಂಡು; ಬೆಂಕಿ ಕಿಡಿ ಹೊತ್ತಿದ ವಿಡಿಯೋ ವೈರಲ್
ಲಂಡನ್ ಮತ್ತು ಬೊಲೊಗ್ನಾ ನಡುವೆ ಮಾಲ್ಟಾ ಏರ್ ಬೋಯಿಂಗ್ 737-800 ವಿಮಾನ ನವೆಂಬರ್ 24ರಂದು ಹಾರಾಟ ನಡೆಸುತ್ತಿದ್ದಾಗ ಲ್ಯಾಂಡಿಂಗ್ ಪ್ರಕ್ರಿಯೆ ನಡೆಸುವಾಗ ಪಕ್ಷಿಗಳು ಬೃಹತ್ ಹಿಂಡುಗಳಾಗಿ ಬಂದು ಡಿಕ್ಕಿ ಹೊಡೆದಿವೆ.
ವಿಮಾನ ಲ್ಯಾಂಡ್ ಆಗುವಾಗ ಪಕ್ಷಿಗಳು ವಿಮಾನದ ಮುಂದಿನ ಭಾಗದಲ್ಲಿರುವ ವಿಂಡ್ಸ್ಕ್ರೀನ್ ಮೇಲೆ ಡಿಕ್ಕಿ ಹೊಡೆದಿದ್ದರಿಂದ ಇಟಲಿಯಲ್ಲಿ ವಿಮಾನವನ್ನು ಲ್ಯಾಂಡ್ ಮಾಡಲು ಪೈಲಟ್‌ಗಳು ಪರದಾಡುವಂತಾಯಿತು. ವಿಂಡ್ಸ್ಕ್ರೀನ್ಗೆ ಪಕ್ಷಗಳು ಡಿಕ್ಕಿ ಹೊಡೆದು, ಅಲ್ಲೇ ಸತ್ತು ಅವುಗಳ ರಕ್ತ ಅಂಟಿದ್ದರೂ ಇಬ್ಬರು ಪೈಲಟ್‌ಗಳು ಬೋಯಿಂಗ್ 737-800 ಅನ್ನು ಇಟಲಿಯಲ್ಲಿ ಸುರಕ್ಷಿತವಾಗಿ ಇಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಲಂಡನ್ ಮತ್ತು ಬೊಲೊಗ್ನಾ ನಡುವೆ ಮಾಲ್ಟಾ ಏರ್ ಬೋಯಿಂಗ್ 737-800 ವಿಮಾನ ನವೆಂಬರ್ 24ರಂದು ಹಾರಾಟ ನಡೆಸುತ್ತಿದ್ದಾಗ ಲ್ಯಾಂಡಿಂಗ್ ಪ್ರಕ್ರಿಯೆ ನಡೆಸುವಾಗ ಪಕ್ಷಿಗಳು ಬೃಹತ್ ಹಿಂಡುಗಳಾಗಿ ಬಂದು ಡಿಕ್ಕಿ ಹೊಡೆದಿವೆ. ಪಕ್ಷಿಗಳು ವಿಮಾನದ ಮುಂಭಾಗಕ್ಕೆ ಡಿಕ್ಕಿ ಹೊಡೆದು, ವಿಂಡ್ಸ್ಕ್ರೀನ್ ಮೇಲೆ ಬಿದ್ದಿವೆ. ಹಾಗೇ, ವಿಮಾನದ ರೆಕ್ಕೆಗಳು ಮತ್ತು ಇಂಜಿನ್ನಲ್ಲೂ ಸಿಲುಕಿಕೊಂಡಿವೆ. ಅದರ ಸಣ್ಣ ವಿಡಿಯೋ ತುಣುಕು ವೈರಲ್ ಆಗಿದೆ.
Bird strike severo en un vuelo de @Ryanair
Tremendo.
Salen fotos en hilo.
Con lo que se ve en la pick up, el kumpa argentino se pondría un puestito de parripollo pic.twitter.com/RsC8fGnPjs
— Vuelos y Viajes (@flyezequiel) November 27, 2021
ಆನ್ಲೈನ್ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಬೊಲೊಗ್ನಾ ವಿಮಾನ ನಿಲ್ದಾಣದಲ್ಲಿ ವಿಮಾನವು ಇಳಿಯುತ್ತಿದ್ದಂತೆ ಎಂಜಿನ್‌ನಿಂದ ಕಿಡಿಗಳು ಹಾರುತ್ತಿರುವುದನ್ನು ನೋಡಬಹುದು. ಅದೃಷ್ಟವಶಾತ್ ವಿಮಾನದಲ್ಲಿದ್ದ ಪ್ರತಿಯೊಬ್ಬರನ್ನೂ ಪೈಲಟ್‌ಗಳು ಸುರಕ್ಷಿತವಾಗಿ ಲ್ಯಾಂಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಹಕ್ಕಿಯ ಹೊಡೆತದಿಂದಾಗಿ ಬಲ ಇಂಜಿನ್ ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ಏವಿಯೇಷನ್ 24 ವರದಿ ಮಾಡಿದೆ. ಇನ್ನೊಂದು ಎಂಜಿನ್‌ಗೂ ಸ್ವಲ್ಪ ಹಾನಿಯಾಗಿದೆ. ನಂತರ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋಗಳಲ್ಲಿ ಕೆಲವು ಪಕ್ಷಿಗಳು ವಿಮಾನದ ರೆಕ್ಕೆಗಳ ಫ್ಲಾಪ್‌ಗಳಲ್ಲಿ ಸಿಕ್ಕಿಹಾಕಿಕೊಂಡಿರುವುದನ್ನು ನೋಡಬಹುದು. ಅಪಾಯಕಾರಿ ಲ್ಯಾಂಡಿಂಗ್ ಮಾಡಿದರೂ ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
ಇದನ್ನೂ ಓದಿ: ಸ್ಕರ್ಟ್, ಹೈ ಹೀಲ್ಸ್ ಹಾಕ್ಕೊಂಡು ರಸ್ತೆಯಲ್ಲಿ ಪಲ್ಟಿ ಹೊಡೆದ ಯುವತಿ; ವಿಡಿಯೊ ವೈರಲ್
ನಾನು ಬೇಕಾದ್ರೆ ಈಗ್ಲೇ ಸಾಯಲಿ, ಲಸಿಕೆ ಮಾತ್ರ ಹಾಕಿಸಿಕೊಳ್ಳಲ್ಲ ಎಂದ ಅಜ್ಜಿ; ವಿಡಿಯೋ ನೋಡಿ