Video: ಮದುವೆ ಮನೆಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿದ್ದರೂ ಸ್ವಲ್ಪವೂ ತಲೆಕೆಡಿಸಿಕೊಳ್ಳದೆ ಊಟ ಮಾಡುತ್ತಲೇ ಇದ್ದ ಅತಿಥಿಗಳು !
ಅದೊಂದು ಮದುವೆ ಮನೆ. ಹಾಕಿದ್ದ ಪೆಂಡಾಲ್ಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಆದರೆ ಅಲ್ಲಿಯೇ ಸ್ವಲ್ಪದೂರದಲ್ಲಿ ಕುಳಿತ ಇಬ್ಬರು ಹಿಂದಿರುಗಿ ಬೆಂಕಿಯನ್ನು ನೋಡನೋಡುತ್ತ ಗಡದ್ದಾಗಿ ಊಟ ಮಾಡುತ್ತಿದ್ದಾರೆ.
ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆಯಂತೆ ! ಹೀಗೊಂದು ಮಾತು ಕೇಳಿರುತ್ತೇವೆ. ಆದರೆ ಇಲ್ಲಿ ತುಸು ವಿಭಿನ್ನ..ಮದುವೆ ಮನೆಗೆ ಬೆಂಕಿ ಬಿದ್ದು, ಧಗಧಗನೇ ಹೊತ್ತು ಉರಿಯುತ್ತಿದ್ದರೂ ಅಲ್ಲಿಯೇ ಸ್ವಲ್ಪ ದೂರದಲ್ಲಿ ಕುಳಿತ ಅತಿಥಿಗಳು ಸ್ವಲ್ಪೂ ಚಿಂತೆ ಮಾಡದೆ ಕುಳಿತು ಊಟ ಮಾಡಿದ ವಿಡಿಯೋ ಇದೀಗ ಇಂಟರ್ನೆಟ್ನಲ್ಲಿ ಸಿಕ್ಕಾಪಟೆ ಸದ್ದು ಮಾಡುತ್ತಿದೆ. ಅಂದಹಾಗೆ ಈ ಘಟನೆ ನಡೆದದ್ದು ಮಹಾರಾಷ್ಟ್ರದ ಥಾಣೆ ಭಿವಂಡಿಯಲ್ಲಿ.
ಅದೊಂದು ಮದುವೆ ಮನೆ. ಹಾಕಿದ್ದ ಪೆಂಡಾಲ್ಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದೆ. ಆದರೆ ಅಲ್ಲಿಯೇ ಸ್ವಲ್ಪದೂರದಲ್ಲಿ ಕುಳಿತ ಇಬ್ಬರು ಹಿಂದಿರುಗಿ ಬೆಂಕಿಯನ್ನು ನೋಡನೋಡುತ್ತ ಗಡದ್ದಾಗಿ ಊಟ ಮಾಡುತ್ತಿದ್ದಾರೆ. ಅಲ್ಲಿ, ಬೆಂಕಿ ಬಳಿ ಅನೇಕರು ಕೂಗುತ್ತ, ಅದನ್ನು ನಂದಿಸಲು ಅತ್ತಿಂದಿತ್ತ ಓಡಾಡುತ್ತಿರುವುದೂ ವಿಡಿಯೋದಲ್ಲಿ ಕಾಣಿಸುತ್ತದೆ. ಇದು ಅನ್ಸಾರಿ ಮದುವೆ ಹಾಲ್ನಲ್ಲಿ ನಡೆದ ಘಟನೆ. ಭಾನುವಾರ ಸಂಜೆ ಅಲ್ಲಿ ಮದುವೆ ಸಂಭ್ರಮ ಇತ್ತು. ಆದರೆ ವಿಪರೀತ ಪಟಾಕಿ ಹೊಡೆದಿದ್ದರಿಂದ ಬೆಂಕಿ ಬಿದ್ದಿದೆ ಎಂದು ಹೇಳಲಾಗಿದೆ. ಆರು ಬೈಕ್ಗಳು, ಹಲವು ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ. ಮದುವೆಗಾಗಿ ಮಾಡಲಾಗಿದ್ದ ಅಲಂಕಾರ ಪೂರ್ತಿ ಸರ್ವನಾಶವಾಗಿದೆ. ನಂತರ ನಾಲ್ಕು ಅಗ್ನಿಶಾಮಕ ದಳಗಳು ಸ್ಥಳಕ್ಕೆ ಭೇಟಿಕೊಟ್ಟು ಬೆಂಕಿ ನಂದಿಸಿವೆ.ಅದೃಷ್ಟವಶಾತ್ ಯಾರಿಗೂ ಗಾಯವಾಗಲಿ, ಪ್ರಾಣಹಾನಿಯಾಗಲಿ ಆಗಿಲ್ಲ.
Wedding pandal catches fire. The guest is torn between checking it out and gobbling the delicious meal.#bhiwandi pic.twitter.com/X2w28yKbRi
— Musab Qazi (@musab1) November 29, 2021
ಇದನ್ನೂ ಓದಿ: Yoga Asanas: ಆರೋಗ್ಯಕರ ಜೀವನ ಶೈಲಿಗಾಗಿ ಈ ಕೆಲವು ಯೋಗ ಆಸನಗಳನ್ನು ಪ್ರತಿನಿತ್ಯ ಮಾಡಿ
Published On - 9:54 am, Tue, 30 November 21