ರಾಜ್ಯಸಭಾ ಸಂಸದರ ಅಮಾನತು: 12 ಸಂಸದರು ಕ್ಷಮೆಯಾಚಿಸಿದರೆ, ನಾವು ಪರಿಗಣಿಸಬಹುದು ಎಂದ ಸರ್ಕಾರ

TV9 Digital Desk

| Edited By: Rashmi Kallakatta

Updated on:Nov 30, 2021 | 11:23 AM

Parliament Winter session ಸದನದ ಘನತೆ ಕಾಪಾಡುವ ಸಲುವಾಗಿ ಸರಕಾರವನ್ನು ಕಡ್ಡಾಯವಾಗಿ ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಇರಿಸಲು ಒತ್ತಾಯಿಸಲಾಯಿತು. ಆದರೆ ಈ 12 ಸಂಸದರು ತಮ್ಮ ಅನುಚಿತ ವರ್ತನೆಗಾಗಿ ಸ್ಪೀಕರ್ ಮತ್ತು ಸದನದಲ್ಲಿ ಕ್ಷಮೆಯಾಚಿಸಿದರೆ, ಅವರ ಪ್ರಸ್ತಾಪವನ್ನು ಮುಕ್ತ ಹೃದಯದಿಂದ ಧನಾತ್ಮಕವಾಗಿ ಪರಿಗಣಿಸಲು ಸರಕಾರ ಸಿದ್ಧವಾಗಿದೆ

ರಾಜ್ಯಸಭಾ ಸಂಸದರ ಅಮಾನತು: 12 ಸಂಸದರು ಕ್ಷಮೆಯಾಚಿಸಿದರೆ, ನಾವು ಪರಿಗಣಿಸಬಹುದು ಎಂದ ಸರ್ಕಾರ
ಪ್ರಹ್ಲಾದ್ ಜೋಶಿ

ದೆಹಲಿ: ಸಂಸತ್​​ನ ಮುಂಗಾರು ಅಧಿವೇಶನದ (Parliament’s monsoon session) ಕೊನೆಯ ದಿನವಾದ ಆಗಸ್ಟ್ 11ರಂದು ಅಶಿಸ್ತಿನ ವರ್ತನೆಗಾಗಿ 12 ಪ್ರತಿಪಕ್ಷ ಸಂಸದರನ್ನು ಸೋಮವಾರ ಅಮಾನತುಗೊಳಿಸಲಾಗಿದೆ. ಆದರೆ ಸಂಸದರು ಕ್ಷಮೆಯಾಚಿಸಿದರೆ ಅಮಾನತು ಹಿಂತೆಗೆದುಕೊಳ್ಳುವ ಬಗ್ಗೆ ಪರಿಗಣಿಸಲಾಗುವುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi)ಹೇಳಿದ್ದಾರೆ. ಈ ಅಧಿವೇಶನದಲ್ಲಿ ಸದನದಲ್ಲಿ ಹಲವು ಪ್ರಮುಖ ಮಸೂದೆಗಳನ್ನು ಪರಿಚಯಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ ಎಂದು ಜೋಶಿ ಮಂಗಳವಾರ ಟ್ವೀಟ್ ಮಾಡಿದ್ದು ಆರೋಗ್ಯಕರ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಪ್ರತಿಪಕ್ಷಗಳಿಗೆ ಕರೆ ನೀಡಿದರು. ಸದನದ ಘನತೆ ಕಾಪಾಡುವ ಸಲುವಾಗಿ ಸರಕಾರವನ್ನು ಕಡ್ಡಾಯವಾಗಿ ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಇರಿಸಲು ಒತ್ತಾಯಿಸಲಾಯಿತು. ಆದರೆ ಈ 12 ಸಂಸದರು ತಮ್ಮ ಅನುಚಿತ ವರ್ತನೆಗಾಗಿ ಸ್ಪೀಕರ್ ಮತ್ತು ಸದನದಲ್ಲಿ ಕ್ಷಮೆಯಾಚಿಸಿದರೆ, ಅವರ ಪ್ರಸ್ತಾಪವನ್ನು ಮುಕ್ತ ಹೃದಯದಿಂದ ಧನಾತ್ಮಕವಾಗಿ ಪರಿಗಣಿಸಲು ಸರಕಾರ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಸರ್ಕಾರ ಪ್ರತಿಯೊಂದು ವಿಷಯದ ಬಗ್ಗೆ ನಿಯಮಗಳ ಪ್ರಕಾರ ಚರ್ಚೆಗೆ ಸಿದ್ಧವಾಗಿದೆ ಮತ್ತು ಪ್ರತಿ ಪ್ರಶ್ನೆಗೆ ಉತ್ತರಿಸಲು ಸಿದ್ಧವಾಗಿದೆ. ನಾಳೆಯಿಂದ ಸದನದಲ್ಲಿ ಹಲವು ಮಹತ್ವದ ಮಸೂದೆಗಳನ್ನು ಮಂಡಿಸಲಾಗುವುದು. ಸದನದ ಕಾರ್ಯನಿರ್ವಹಣೆ ಮತ್ತು ಫಲಪ್ರದವಾಗಲು ಅವಕಾಶ ನೀಡುವಂತೆ, ಈ ಎಲ್ಲಾ ಮಸೂದೆಗಳ ಬಗ್ಗೆ ಆರೋಗ್ಯಕರ ಚರ್ಚೆ ನಡೆಸುವಂತೆ ಮತ್ತೊಮ್ಮೆ ಎಲ್ಲಾ ಪಕ್ಷಗಳಲ್ಲಿ ಮನವಿ ಮಾಡುತ್ತೇನೆ ಎಂದು ಜೋಶಿ ಹೇಳಿದ್ದಾರೆ.

ಸೋಮವಾರ(ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ), ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ ಸೇರಿದಂತೆ 12 ರಾಜ್ಯಸಭಾ ಸಂಸದರನ್ನು ಆಗಸ್ಟ್‌ನಲ್ಲಿ ಅಶಿಸ್ತಿನ ವರ್ತನೆಗಾಗಿ ಇಡೀ ಅಧಿವೇಶನದಿಂದ ಅಮಾನತುಗೊಳಿಸಲಾಯಿತು . ಆಗ ಪೆಗಾಸಸ್ ಹಗರಣದ ಕುರಿತು ವಿರೋಧ ಪಕ್ಷದ ಸಂಸದರು ಮತ್ತು ಸರ್ಕಾರದ ನಡುವೆ ವಾಕ್ಸಮರ ನಡೆದಿತ್ತು.

ಪ್ರತಿಪಕ್ಷದ ಮಹಿಳಾ ಸಂಸದರು ಹೌಸ್ ಮಾರ್ಷಲ್‌ಗಳು ತಮ್ಮ ಜತೆಒರಟಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ದಾಳಿ ಮಾಡಿರುವುದು ಮಹಿಳಾ ಮಾರ್ಷಲ್‌ಗಳ ಮೇಲೆ ಎಂದು ಸರ್ಕಾರ ಪ್ರತಿದಾಳಿ ನಡೆಸಿತ್ತು.  ಸಂಸದರು ದುರ್ನಡತೆ, ಅವಹೇಳನಕಾರಿ, ಹಿಂಸಾತ್ಮಕ ಮತ್ತು ಅಶಿಸ್ತಿನ ನಡವಳಿಕೆ ಮತ್ತು ಭದ್ರತಾ ಸಿಬ್ಬಂದಿಯ ಮೇಲೆ ಉದ್ದೇಶಪೂರ್ವಕ ದಾಳಿಗಳನ್ನು” ಸ್ವಇಚ್ಛೆಯಿಂದ ಮಾಡಿದ್ದಾರೆ ಎಂದು ಅಮಾನತುಗೊಳಿಸುವಿಕೆ ನಿರ್ಣಯ ಹೇಳಿದೆ.

“ಎಲ್ಲಾ ವಿಡಿಯೊ  ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿವೆ. ಏಕೆಂದರೆ ಅವರೇ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದ್ದಾರೆ. ಇದು ಕ್ರಮ ತೆಗೆದುಕೊಳ್ಳಲು ಲಭ್ಯವಿರುವ ಮೊದಲ ಅವಕಾಶ ಮತ್ತು ಅಧ್ಯಕ್ಷರು ಕ್ರಮ ಕೈಗೊಂಡಿದ್ದಾರೆ.”ಎಂದು  ಜೋಶಿ ಸೋಮವಾರ ಹೇಳಿದ್ದಾರೆ.

ಇದನ್ನೂ ಓದಿ:  ಮುಂಗಾರು ಅಧಿವೇಶನದಲ್ಲಿ ಅಶಿಸ್ತು ತೋರಿದ್ದ ವಿಪಕ್ಷದ 12 ಸಂಸದರು ರಾಜ್ಯಸಭೆಯಿಂದ ಅಮಾನತು

ಇದನ್ನೂ ಓದಿ: ಕೃಷಿ ಕಾನೂನು ಹಿಂಪಡೆಯುವ ಮಸೂದೆ ಮಂಡನೆಗೆ ಅಡ್ಡಿ: ವಿರೋಧ ಪಕ್ಷಗಳ ಉದ್ದೇಶ ಪ್ರಶ್ನಿಸಿದ ಸಚಿವ ಪ್ರಲ್ಹಾದ್ ಜೋಶಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada