Parliament Winter Session 12 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯಲು ಮಲ್ಲಿಕಾರ್ಜುನ ಖರ್ಗೆ ಆಗ್ರಹ; ನಿರಾಕರಿಸಿದ ವೆಂಕಯ್ಯ ನಾಯ್ಡು

Rajya Sabha 12 ಸಂಸದರ ಅಮಾನತು ರದ್ದತಿ ಮನವಿಯನ್ನು ಸಭಾಪತಿ ಎಂ ವೆಂಕಯ್ಯ ನಾಯ್ಡು ತಿರಸ್ಕರಿಸಿದ ನಂತರ ಪ್ರತಿಪಕ್ಷಗಳ ಸಂಸದರು ರಾಜ್ಯಸಭೆಯಿಂದ ಹೊರನಡೆದರು.

Parliament Winter Session 12 ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯಲು ಮಲ್ಲಿಕಾರ್ಜುನ ಖರ್ಗೆ ಆಗ್ರಹ; ನಿರಾಕರಿಸಿದ ವೆಂಕಯ್ಯ ನಾಯ್ಡು
ರಾಜ್ಯಸಭಾ ಕಲಾಪ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Nov 30, 2021 | 12:20 PM

ದೆಹಲಿ: ಸೋಮವಾರ 12 ರಾಜ್ಯಸಭಾ ಸಂಸದರನ್ನು( Rajya Sabha MPs suspension) ಅಮಾನತುಗೊಳಿಸಿದ ವಿಷಯದ ಬಗ್ಗೆ ವಿಪಕ್ಷಗಳು ಇಂದು (ಮಂಗಳವಾರ)ಸಂಸತ್​​ನ ಚಳಿಗಾಲದ ಅಧಿವೇಶನದಲ್ಲಿ(Parliament Winter Session) ದನಿಯೆತ್ತಿವೆ. ಮುಂಗಾರು ಅಧಿವೇಶನದಲ್ಲಿ (Monsoon Session) 12 ರಾಜ್ಯಸಭಾ ಸಂಸದರು ಅನುಚಿತವಾಗಿ ವರ್ತಿಸಿದರು ಎಂದು ಅವರನ್ನು ಚಳಿಗಾಲದ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿದೆ. ಪ್ರತಿಪಕ್ಷಗಳು ಒಗ್ಗಟ್ಟಿನಿಂದ ಈ ಕ್ರಮವನ್ನು ಖಂಡಿಸಿದರೆ, ಸಂಸದರು ರಾಜ್ಯಸಭಾ ಅಧ್ಯಕ್ಷರ ಕ್ಷಮೆಯಾಚಿಸಿದರೆ ಅಮಾನತು ರದ್ದುಗೊಳಿಸಬಹುದು ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ಏತನ್ಮಧ್ಯೆ, ಪ್ರತಿಪಕ್ಷಗಳ ಗದ್ದಲಗಳ ನಡುವೆಯೇ ಸೋಮವಾರ ಕೃಷಿಕಾನೂನುಗಳ ರದ್ದತಿ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳು ಅಂಗೀಕರಿಸಿದವು. ಲೋಕಸಭೆಯಲ್ಲಿ ಇಂದು, ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರ (ವೇತನ ಮತ್ತು ಸೇವೆಗಳ ಷರತ್ತುಗಳು) ತಿದ್ದುಪಡಿ ಮಸೂದೆಯನ್ನು(High Court and Supreme Court Judges (Salaries and Conditions of Services) Amendment Bill) ಮಂಡಿಸಲಾಗುತ್ತದೆ. ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ನಿಯಂತ್ರಣ) ಮಸೂದೆ (The Assisted Reproductive Technology (Regulation) Bill )ಕೂಡ ಪರಿಗಣನೆಗೆ ಮತ್ತು ಅಂಗೀಕಾರಕ್ಕೆ ಬರಲಿದೆ. ರಾಜ್ಯಸಭೆಯಲ್ಲಿ, ಅಣೆಕಟ್ಟು ಸುರಕ್ಷತಾ ಮಸೂದೆ 2019 (Dam Safety Bill, 2019) ಪರಿಗಣನೆಗೆ ಮತ್ತು ಅಂಗೀಕಾರಕ್ಕೆ ಬರಲಿದೆ.

12 ಸಂಸದರ ಅಮಾನತು ಹಿಂಪಡೆಯಲು ಖರ್ಗೆ ಮನವಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು 12 ಸಂಸದರ ಅಮಾನತು ರದ್ದುಗೊಳಿಸುವಂತೆ ಮೇಲ್ಮನೆಯಲ್ಲಿ ಒತ್ತಾಯಿಸಿದರು. “ಕಾರ್ಯವಿಧಾನದ ನಿಯಮಗಳ ಸಂಪೂರ್ಣ ಉಲ್ಲಂಘನೆಯಾಗಿದೆ. ಸಚಿವರು ಈ ಬಗ್ಗೆ ನಿರ್ಣಯ ಮಂಡಿಸುವಾಗ ನಾನು ಆದೇಶದ ಅಂಶವನ್ನು ಎತ್ತಲು ಪ್ರಯತ್ನಿಸಿದೆ. ಸ್ಥಾಪಿತ ಸಂಪ್ರದಾಯಗಳ ಪ್ರಕಾರ, ಪ್ರತಿಯೊಬ್ಬ ಸದಸ್ಯರಿಗೂ ಅನುಮತಿ ನೀಡಬೇಕು. ಸಂಸತ್​ನ ನಾಯಕರಿಗೆ ಅವಕಾಶ ನೀಡಬೇಕು. ನನಗೆ ಅವಕಾಶ ನೀಡಲಿಲ್ಲ. ಇದು ಇದು ಸಂಸದೀಯ ಸಮಾವೇಶದ ಸಂಪೂರ್ಣ ಉಲ್ಲಂಘನೆಯಾಗಿದೆ ಎಂದು ಖರ್ಗೆ ಹೇಳಿದರು. “ನಿರ್ಣಯ ಮಂಡನೆಗೆ ಮುನ್ನ (ನಿಯಮ 256 ರ ಉಪ ನಿಯಮ 1), ನಿರ್ಣಯ ಮಂಡಿಸುವ ಮೊದಲು ಅಧ್ಯಕ್ಷರು ಸದಸ್ಯರನ್ನು ಹೆಸರಿಸಬೇಕು. ಅಧ್ಯಕ್ಷರು ಅಮಾನತಿನ ಬಗ್ಗೆ ಪ್ರಶ್ನೆಯನ್ನು ಹಾಕಬೇಕು” ಎಂದು ಖರ್ಗೆ ಹೇಳಿದ್ದಾರೆ.

ಮನವಿ ನಿರಾಕರಿಸಿದ ವೆಂಕಯ್ಯ ನಾಯ್ಡು  12 ಸಂಸದರ ಅಮಾನತು ಹಿಂಪಡೆಯುವಂತೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾಡಿದ ಮನವಿಯನ್ನು ಪರಿಗಣಿಸಲು ರಾಜ್ಯಸಭಾ ಸಭಾಪತಿ ವೆಂಕಯ್ಯ ನಾಯ್ಡು ನಿರಾಕರಿಸಿದರು. ಸೆಕ್ಷನ್ 256 ಮತ್ತು 259 ರ ಅಡಿಯಲ್ಲಿ ಅಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಸದನಕ್ಕೆ ಅಧಿಕಾರವಿದೆ ಎಂದು ನಾಯ್ಡು ಹೇಳಿದರು. ಸದಸ್ಯರು ತಮ್ಮ ವರ್ತನೆಯ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸದ ಕಾರಣ, ಮನವಿಯನ್ನು ಪರಿಗಣಿಸಲು ನಿರಾಕರಿಸುತ್ತಿದ್ದೇನೆ ಎಂದು ನಾಯ್ಡು ಹೇಳಿದರು.

“ಕಳೆದ ಮುಂಗಾರು ಅಧಿವೇಶನದ ಕಹಿ ಅನುಭವವು ಇನ್ನೂ ನಮ್ಮಲ್ಲಿ ಹೆಚ್ಚಿನವರನ್ನು ಕಾಡುತ್ತಲೇ ಇದೆ. ಕಳೆದ ಅಧಿವೇಶನದಲ್ಲಿ ಏನಾಯಿತು ಎಂಬುದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಲು ಸದನದ ಪ್ರಮುಖ ನಾಯಕರುಮುನ್ನಡೆಯಲು ನಾನು ನಿರೀಕ್ಷಿಸುತ್ತಿದ್ದೆ ಮತ್ತು ಕಾಯುತ್ತಿದ್ದೆ” ಎಂದು ನಾಯ್ಡು ಹೇಳಿದರು. “ಸಂಸದೀಯ ಪ್ರಜಾಪ್ರಭುತ್ವದಲ್ಲಿ, ನೀವು ಮಾತನಾಡಬಹುದು ಅಥವಾ ಹೊರನಡೆಯಬಹುದು. ನಾನು ಅವರ ಭಾವನೆಗಳನ್ನು ಗೌರವದಿಂದ ಗೌರವಿಸುತ್ತೇನೆ” ಎಂದು ಅವರು ಹೇಳಿದರು.

12 ಸಂಸದರ ಅಮಾನತು ರದ್ದತಿ ಮನವಿಯನ್ನು ಸಭಾಪತಿ ಎಂ ವೆಂಕಯ್ಯ ನಾಯ್ಡು ತಿರಸ್ಕರಿಸಿದ ನಂತರ ಪ್ರತಿಪಕ್ಷಗಳ ಸಂಸದರು ರಾಜ್ಯಸಭೆಯಿಂದ ಹೊರನಡೆದರು.

ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಮಲ್ಲಿಕಾರ್ಜುನ ಖರ್ಗೆ 12 ಪ್ರತಿಪಕ್ಷ ಸಂಸದರನ್ನು ಸೋಮವಾರ ರಾಜ್ಯಸಭೆಯಿಂದ ಅಮಾನತುಗೊಳಿಸಿದ ನಂತರ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ. ಕಳೆದ ಅಧಿವೇಶನದಲ್ಲಿ ಈ ಘಟನೆ ನಡೆದಿದ್ದರಿಂದ ಸದನದ ನಿಯಮಗಳಿಗೆ ವಿರುದ್ಧವಾಗಿ ಸಂಸದರನ್ನು ಅಮಾನತುಗೊಳಿಸಲಾಗಿದೆ ಎಂದು ಖರ್ಗೆ ಹೇಳಿದರು. ಈ ಬಗ್ಗೆ ಎಲ್ಲಾ ವಿರೋಧ ಪಕ್ಷಗಳ ಸಭೆ ಕರೆಯಲಾಗಿದೆ ಎಂದು ಖರ್ಗೆ ಹೇಳಿದರು.

ಅಧಿವೇಶನಕ್ಕೆ ಮುನ್ನ ವಿಪಕ್ಷ ನಾಯಕರ ಸಭೆ

ಇಂದಿನ ಅಧಿವೇಶನಕ್ಕೂ ಮುನ್ನ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷಗಳ ನಾಯಕರು ಸಭೆ ನಡೆಸಿದರು. ಸೋಮವಾರದಂದು ರಾಜ್ಯಸಭೆಯಿಂದ 12 ಪ್ರತಿಪಕ್ಷಗಳ ಸಂಸದರನ್ನು ಅಮಾನತುಗೊಳಿಸಿದ ಕುರಿತು ಚರ್ಚಿಸಲು ಮತ್ತು ಭವಿಷ್ಯದ ಕ್ರಮಗಳನ್ನು ರೂಪಿಸಲು ವಿಪಕ್ಷ ನಾಯಕರು ಈ ಸಭೆ ನಡೆಸಿದ್ದಾರೆ.

ಇದನ್ನೂ ಓದಿ: ರಾಜ್ಯಸಭಾ ಸಂಸದರ ಅಮಾನತು: 12 ಸಂಸದರು ಕ್ಷಮೆಯಾಚಿಸಿದರೆ, ನಾವು ಪರಿಗಣಿಸಬಹುದು ಎಂದ ಸರ್ಕಾರ

Published On - 12:15 pm, Tue, 30 November 21

ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್