ಯುಎಸ್​​ನಲ್ಲಿ ಕೇರಳದ ಯುವತಿಯ ಹತ್ಯೆ; ಮನೆಯಲ್ಲಿ ಮಲಗಿದ್ದವಳ ದೇಹಕ್ಕೆ ಸೀಲಿಂಗ್​ ತೂರಿಕೊಂಡು ಬಂದು ಹೊಕ್ಕಿತು ಬುಲೆಟ್​

ಹತ್ಯೆ ನಡೆಯಲು ಕಾರಣವೇನು? ಹತ್ಯೆ ಮಾಡಿದವರು ಯಾರೆಂದು ಇನ್ನೂ ತಿಳಿದುಬಂದಿಲ್ಲ. ಮ್ಯಾಂಟ್ಗೋಮೆರಿ ಪೊಲೀಸರು ಈಗಾಗಲೇ ತನಿಖಯನ್ನು ಪ್ರಾರಂಭಿಸಿದ್ದಾರೆ.

ಯುಎಸ್​​ನಲ್ಲಿ ಕೇರಳದ ಯುವತಿಯ ಹತ್ಯೆ; ಮನೆಯಲ್ಲಿ ಮಲಗಿದ್ದವಳ ದೇಹಕ್ಕೆ ಸೀಲಿಂಗ್​ ತೂರಿಕೊಂಡು ಬಂದು ಹೊಕ್ಕಿತು ಬುಲೆಟ್​
ಮೃತ ಯುವತಿ

ಯುನೈಟೆಡ್​ ಸ್ಟೇಟ್ಸ್​​ನಲ್ಲಿದ್ದ ಕೇರಳದ 19 ವರ್ಷದ ಯುವತಿಯ ಹತ್ಯೆಯಾಗಿದೆ. ಯುಎಸ್​ನ ಅಲಬಾಮಾ ರಾಜಧಾನಿ ಮ್ಯಾಂಟ್ಗೋಮೆರಿಯಲ್ಲಿ ಈ ಯುವತಿ ವಾಸವಾಗಿದ್ದರು. ಮೃತ ಯುವತಿಯನ್ನು ಮರಿಯಾಮ್​ ಸುಸಾನ್​ ಮ್ಯಾಥ್ಯೂ ಎಂದು ಗುರುತಿಸಲಾಗಿದೆ. ಈಕೆ ತಮ್ಮ ಮನೆಯೊಳಗೆ ಮಲಗಿದ್ದರು. ಈ ವೇಳೆ ಬುಲೆಟ್​ ಮೇಲಿನ ಮಹಡಿಯ ಸೀಲಿಂಗ್​​ ಬೇಧಿಸಿ​, ತೂರಿಕೊಂಡು ಬಂದು ಇವರ ದೇಹವನ್ನು ಹೊಕ್ಕಿದೆ.  ಸುಸಾನ್​ ಮೂಲತಃ ಕೇರಳದ ತಿರುವಲ್ಲಾದವರು. ಇಲ್ಲಿನ ನಿರಣಂ ಸಮೀಪದ ಎಡಪ್ಪಲ್ಲಿ ಪರಂಬಿಲ್​ ಮನೆಯ ಬೋಬನ್​ ಮ್ಯಾಥ್ಯೂ ಮತ್ತು ಬಿನ್ಸಿ ದಂಪತಿಯ ಪುತ್ರಿಯಾಗಿದ್ದು, ಬಸಿಲ್ ಮತ್ತು ಬಿಮಲ್​ ಎಂಬ ಇಬ್ಬರು ಸೋದರರೂ ಇದ್ದಾರೆ. 

ಹತ್ಯೆ ನಡೆಯಲು ಕಾರಣವೇನು? ಹತ್ಯೆ ಮಾಡಿದವರು ಯಾರೆಂದು ಇನ್ನೂ ತಿಳಿದುಬಂದಿಲ್ಲ. ಮ್ಯಾಂಟ್ಗೋಮೆರಿ ಪೊಲೀಸರು ಈಗಾಗಲೇ ತನಿಖಯನ್ನು ಪ್ರಾರಂಭಿಸಿದ್ದಾರೆ. ಸೌತ್​ವೆಸ್ಟ್ ಅಮೆರಿಕದ ಮಲಂಕರಾ ಆರ್ಥಡೆಕ್ಸ್​ ಚರ್ಚ್​​ ಡಯಾಸಿಸ್​ನ ಫಾದರ್​  ಜಾನ್ಸನ್​ ಪಾಪಚ್ಚನ್​ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಮರಿಯಮ್ ಸುಸಾನ್ ಮ್ಯಾಥ್ಯೂ ಅವರು ತಮ್ಮ ಮನೆಯಲ್ಲಿ ಮಲಗಿದ್ದರು. ಈ ವೇಳೆ ಆಕೆಯ ಮನೆಯ ಮೇಲಿನ ಮಹಡಿಯಲ್ಲಿ ವಾಸವಾಗಿದ್ದವರು ಗುಂಡು ಹಾರಿಸಿದ್ದಾರೆ. ಯುವತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು  ಹೇಳಿದ್ದಾರೆ.  ಸದ್ಯ ಸುಸಾನ್ ಮೃತದೇಹವನ್ನು ಕೇರಳದ ಆಕೆಯ ಹುಟ್ಟೂರಿಗೆ ತಿರಲು ಸಿದ್ಧತೆ ನಡೆಯುತ್ತಿದೆ. ಕಾನೂನು ಪ್ರಕ್ರಿಯೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.

ಕಳೆದ ಏಳು ದಿನಗಳಲ್ಲಿ ಮ್ಯಾಂಟ್ಗೊಮೇರಿಯಲ್ಲಿ ನಡೆದ ಎರಡನೇ ಶೂಟೌಟ್​ ಪ್ರಕರಣ ಇದಾಗಿದೆ. ಕೆಲವು ದಿನಗಳ ಹಿಂದೆ ಇಲ್ಲಿ ಥ್ಯಾಂಕ್ಸ್​ಗಿವಿಂಗ್​ ಹಾಲಿಡೇ ಆಚರಣೆ ಸಮಾರಂಭ ನಡೆದಿತ್ತು. ಈ ವೇಳೆ ಯುವಕನೊಬ್ಬನಿಗೆ ಗುಂಡು ಹೊಡೆದು ಕೊಲ್ಲಲಾಗಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ಸದ್ಯಕ್ಕೆ ಲಾಕ್​ಡೌನ್ ಇಲ್ಲ; ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟತೆ

Click on your DTH Provider to Add TV9 Kannada