ಮೈಸೂರು: ವೀಕೆಂಡ್ ಸಫಾರಿ; ಮರ ಹತ್ತಲು ಯತ್ನಿಸುತ್ತಿದ್ದ ಹುಲಿ ವಿಡಿಯೋ ಸೆರೆ
ಮರ ಹತ್ತಲು ಯತ್ನಿಸುತ್ತಿದ್ದ ಹುಲಿಯ ವಿಡಿಯೋ ಸೆರೆಯಾಗಿದ್ದು, ನೋಡುಗರಲ್ಲಿ ಉತ್ಸಾಹ ಸೃಷ್ಟಿಸಿದೆ. ಮರ ಹತ್ತುವುದರಲ್ಲಿ ವಿಫಲವಾದ ಹುಲಿ ಕೊನೆಗೆ ಕಾಡಿನತ್ತ ಹೆಜ್ಜೆ ಹಾಕಿದೆ. ಮತ್ತೊಂದು ಕಡೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಕುಟ್ಟ ರಸ್ತೆಯಲ್ಲಿ ಇನ್ನಿತರ ಪ್ರಾಣಿಗಳು ಕಾಣಿಸಿಕೊಂಡಿವೆ.
ಮೈಸೂರು: ವೀಕೆಂಡ್ ಸಫಾರಿಗೆ ಬಂದವರಿಗೆ ಹುಲಿಯ ದರ್ಶನವಾಗಿದೆ. ಮೈಸೂರು ಜಿಲ್ಲೆ ಹೆಚ್ ಡಿ ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರಿನ ದಮ್ಮನ ಕಟ್ಟೆ ಸಫಾರಿ ವೇಳೆ ಹುಲಿ ಕಾಣಿಸಿಕೊಂಡಿದೆ. ಮರ ಹತ್ತಲು ಯತ್ನಿಸುತ್ತಿದ್ದ ಹುಲಿಯ ವಿಡಿಯೋ ಸೆರೆಯಾಗಿದ್ದು, ನೋಡುಗರಲ್ಲಿ ಉತ್ಸಾಹ ಸೃಷ್ಟಿಸಿದೆ. ಮರ ಹತ್ತುವುದರಲ್ಲಿ ವಿಫಲವಾದ ಹುಲಿ ಕೊನೆಗೆ ಕಾಡಿನತ್ತ ಹೆಜ್ಜೆ ಹಾಕಿದೆ. ಮತ್ತೊಂದು ಕಡೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿ ಕುಟ್ಟ ರಸ್ತೆಯಲ್ಲಿ ಇನ್ನಿತರ ಪ್ರಾಣಿಗಳು ಕಾಣಿಸಿಕೊಂಡಿವೆ. ರಸ್ತೆ ಬದಿಯಲ್ಲಿ ನಿಂತಿದ್ದ ಆನೆ, ಜಿಂಕೆ, ರಸ್ತೆ ಮಧ್ಯೆದಲ್ಲೇ ನಿಂತಿದ್ದ ಮುಂಗುಸಿ ಪ್ರಾಣಿ ಪ್ರಿಯರಲ್ಲಿ ಸಂತೋಷವನ್ನುಂಟು ಮಾಡಿದೆ.
ಇದನ್ನೂ ಓದಿ:
Viral Video: ಸಫಾರಿ ಮಾಡುತ್ತಿರುವ ಜೀಪ್ ಒಳಗೆ ನುಗ್ಗಿದ ಸಿಂಹಿಣಿ; ನಂತರ ಏನಾಯ್ತು? ಅಚ್ಚರಿಯ ವಿಡಿಯೊ ಇಲ್ಲಿದೆ
ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಏಕಕಾಲಕ್ಕೆ ತಾಯಿ-ಮಕ್ಕಳ ದರ್ಶನ, ಸಫಾರಿಗೆ ಬಂದವರು ಫುಲ್ ಖುಷ್
Latest Videos